ಶ್ರೀ ರಾಮಲಲ್ಲಾನ ಮೂರ್ತಿ ತಯಾರಿಸಿದ ಯೋಗಿರಾಜ ಪತ್ನಿ ಮಾಹಿತಿ ನೀಡಿದರು.
ಮೈಸೂರು – ಅಯೋಧ್ಯೆಯಲ್ಲಿ ಶ್ರೀರಾಮಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆಗಾಗಿ ಆಯ್ಕೆಯಾದ ಶ್ರೀ ರಾಮಲಲ್ಲಾನ ಮೂರ್ತಿಯನ್ನು ತಯಾರಿಸಿದ ಶಿಲ್ಪಿ ಅರುಣ ಯೋಗಿರಾಜ ಅವರು ಈ ಮೂರ್ತಿಯನ್ನು ತಯಾರಿಸಲು 6 ತಿಂಗಳು ತೆಗೆದುಕೊಂಡರು. ಈ 6 ತಿಂಗಳಲ್ಲಿ ಅವರು ಋಷಿಯಂತೆ ಜೀವನ ನಡೆಸಿದರು. ಈ 6 ತಿಂಗಳು ಅವರು ಸಾತ್ವಿಕ ಆಹಾರವನ್ನು ಸೇವಿಸಿದರು. ಈ ಕಾಲಾವಧಿಯಲ್ಲಿ ಹಣ್ಣು ಮತ್ತು ಮೊಳಕೆ ಕಾಳುಗಳನ್ನು ಸೇವಿಸಿದರು ಎಂದು ಶಿಲ್ಪಿ ಅರುಣ್ ಯೋಗಿರಾಜ ಅವರ ಪತ್ನಿ ವಿಜೇತಾ ತಿಳಿಸಿದ್ದಾರೆ. ‘ಇದು ನಮ್ಮ ಕುಟುಂಬಕ್ಕೆ ಹೆಮ್ಮೆಯ ಕ್ಷಣ’ ಎಂದೂ ಅವರು ಹೇಳಿದ್ದಾರೆ.
1. ಶಿಲ್ಪಿಯ ಕುಟುಂಬದ ಐದನೇ ತಲೆಮಾರಿನ ಅರುಣ ಯೋಗಿರಾಜ ಇವರು ತಮ್ಮ 11 ನೇ ವಯಸ್ಸಿನಲ್ಲಿ ಕೆತ್ತನೆ ಕೆಲಸವನ್ನು ಮಾಡಲು ಪ್ರಾರಂಭಿಸಿದರು ಮತ್ತು ಅಂದಿನಿಂದ ಅವರು ತಮ್ಮ ಕುಟುಂಬದ ಸಮೃದ್ಧ ಪರಂಪರೆಯ ಭಾಗವಾಗಿದ್ದಾರೆ.
2. ‘ಅರುಣ ತುಂಬಾ ಪ್ರತಿಭಾವಂತರಾಗಿದ್ದಾರೆ. ಅವರ ಕಲೆ ಜಗತ್ತಿನಾದ್ಯಂತ ಪರಿಚಯವಾಗಲಿ ಮತ್ತು ಎಲ್ಲರೂ ಹೊಗಳಬೇಕು,ಮೆಚ್ಚುಗೆಯನ್ನು ವ್ಯಕ್ತಪಡಿಸಬೇಕು ಎಂದು ನಮಗೆ ಇಚ್ಛೆಯಿತ್ತು ಎಂದು ವಿಜೇತಾ ಹೇಳಿದರು.
3. ಅರುಣ ಯೋಗಿರಾಜ ಅವರು ತಯಾರಿಸಿದ ಮೂರ್ತಿಯ ವರ್ಣನೆಯನ್ನು ಮಾಡುವಾಗ ಅವರು , “ಶ್ರೀ ರಾಮಲಲ್ಲಾನ ಸುಂದರ ಮೂರ್ತಿ ದೈವಿ ಅಸ್ತಿತ್ವವನ್ನು ತೋರಿಸುತ್ತದೆ. ಶ್ರೀ ರಾಮಲಲ್ಲಾ ಅಯೋಧ್ಯೆಗೆ ಮರಳಿದ್ದಾರೆ ಎನ್ನುವ ಸಾಕ್ಷಾತ್ಕಾರವಾಗುತ್ತದೆ ’’ ಎಂದು ಹೇಳಿದರು.
4. ದೇಶಾದ್ಯಂತ ಜನರಿಂದ ದೊರೆತ ಪ್ರೀತಿ ಮತ್ತು ಆಶೀರ್ವಾದಕ್ಕೆ ವಿಜೇತಾ ಕೃತಜ್ಞತೆ ಸಲ್ಲಿಸಿದರು. ಈ ಪ್ರಾಣಪ್ರತಿಷ್ಠಾಪನೆಯ ಸಮಾರಂಭದ ಬಳಿಕ ಅಯೋಧ್ಯೆಗೆ ಭೇಟಿ ನೀಡುವುದಾಗಿ ಅವರು ಹೇಳಿದ್ದಾರೆ.