ಅಯೋಧ್ಯೆಯಿಂದ ‘ಸನಾತನ ಪ್ರಭಾತ’ದ ವಿಶೇಷ ವರದಿ !
ಅಯೋಧ್ಯೆ, ಜನವರಿ 19 (ಸುದ್ದಿ) – ಅಯೋಧ್ಯೆಗೆ ಭಾರತದಾದ್ಯಂತ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ. ಅವರಿಗಾಗಿ ದೇವಸ್ಥಾನ ಟ್ರಷ್ಟ ಹಾಗೂ ಸರಕಾರದಿಂದ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ, ಎಂದು ಮಿರ್ಜಾಪುರ (ಉತ್ತರ ಪ್ರದೇಶ) ಬಿಜೆಪಿ ಶಾಸಕ ಶ್ರೀ. ವಿನಿತ ಸಿಂಹ ಇವರು ಇಲ್ಲಿ ‘ಸನಾತನ ಪ್ರಭಾತ್’ ದಿನಪತ್ರಿಕೆಯ ವಿಶೇಷ ವರದಿಗಾರರೊಂದಿಗೆ ಮಾತನಾಡುವಾಗ ಈ ವಿಷಯ ತಿಳಿಸಿದರು. ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ನಂತರ ಸಿಂಗ್ ಮಾತನಾಡುತ್ತಿದ್ದರು.
ನಂತರ ಮಾತನಾಡಿದ ಅವರು, ಇಂದು ಅಯೋಧ್ಯೆ ನಗರ ತ್ರೇತಾಯುಗದಲ್ಲಿದೆ ಎಂದು ಅರಿವಾಗುತ್ತಿದೆ. ಇಲ್ಲಿಗೆ ಬರುವ ಎಲ್ಲಾ ಭಕ್ತರಿಗೆ ತಂಗಲು ಮತ್ತು ಊಟ-ಪಾನೀಯದ ಎಲ್ಲಾ ಉತ್ತಮ ಸೌಲಭ್ಯಗಳನ್ನು ಒದಗಿಸಲಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಒಬ್ಬ ಸಂತರಾಗಿದ್ದರೇ ನಮ್ಮ ಪ್ರಧಾನಿ ಸಂನ್ಯಾಸಿ ಪ್ರವೃತ್ತಿಯುಳ್ಳವರಾಗಿದ್ದಾರೆ. ಹೀಗಾಗಿ ಇಲ್ಲಿಗೆ ಬರುವ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಎಲ್ಲಾ ಭಕ್ತರು ದರ್ಶನ ಮತ್ತು ಈ ಸುಂದರ ಹರ್ಷೋದ್ಗಾರದ ಆನಂದವನ್ನು ಅನುಭವಿಸುವರು ಎಂದು ಹೇಳಿದರು.