ಶ್ರೀರಾಮನ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಸಮಾರಂಭದಲ್ಲಿ ಎಲ್ಲಾ ಶಂಕರಾಚಾರ್ಯರು ಸಹಭಾಗಿ ಆಗಬೇಕು !

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಂದ ಕರೆ !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಶ್ರೀರಾಮಮಂದಿರದಲ್ಲಿ ಶ್ರೀ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಎಲ್ಲಾ ಶಂಕರಾಚಾರ್ಯರು ಸಹಭಾಗಿ ಆಗಬೇಕು, ನಾವು ಅವರಿಗೆ ಪ್ರಾಣಪ್ರತಿಷ್ಠಾಪನೆ ಸಮಾರಂಭದ ಆಮಂತ್ರಣ ಕಳುಹಿಸುತ್ತೇವೆ. ಯಾವ ಕ್ಷಣ ಹತ್ತಿರ ಬಂದಿದೆ, ಅದು ಶ್ರೇಯಸ್ಸು ಅಥವಾ ಮಾನಪಮಾನದಾಗಿಲ್ಲ. ನಾನು ಇರಬಹುದು, ದೇಶದ ಸಾಮಾನ್ಯ ನಾಗರಿಕ ಇರಬಹುದು ಅಥವಾ ಶಂಕರಚಾರ್ಯರು ಆಗಿರಬಹುದು, ಯಾರು ಕೂಡ ರಾಮನಿಗಿಂತಲೂ ದೊಡ್ಡವರಲ್ಲ. ಪ್ರಭು ರಾಮಚಂದ್ರನಗಿಂತಲೂ ಯಾರು ದೊಡ್ಡವರಲ್ಲ. ಪ್ರತಿಯೊಬ್ಬ ಮನುಷ್ಯನಿಗೆ ತನ್ನ ಅಭಿಪ್ರಾಯ ಮಂಡಿಸುವ ಅಧಿಕಾರ ಇದೆ. ಅದರ ಪ್ರಕಾರ ಶಂಕರಾಚಾರ್ಯರು ಅವರ ಅಭಿಪ್ರಾಯ ಮಂಡಿಸಿದ್ದಾರೆ. ಅವರು ಗಾಳಿ ಸುದ್ಧಿಯ ಮೇಲೆ ವಿಶ್ವಾಸ ಇಡಬಾರದು. ಅವರು ಖಂಡಿತವಾಗಿಯು ಈ ಸಮಾರಂಭಕ್ಕೆ ಉಪಸ್ಥಿತರಿರಬೇಕು ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಕರೆ ನೀಡಿದರು. ಜ್ಯೋತಿಷ್ಯ, ದ್ವಾರಕ, ಪುರಿ ಮತ್ತು ಶೃಂಗೇರಿಯ ನಾಲ್ಕು ಪೀಠದ ಶಂಕರಾಚಾರ್ಯರು ವಿವಿಧ ಕಾರಣಗಳಿಂದ ಶ್ರೀರಾಮ ಮಂದಿರದ ಉದ್ಘಾಟನೆಗೆ ಉಪಸ್ಥಿತರಿರುವುದಿಲ್ಲ ಎಂದು ತಿಳಿಸಿದ್ದಾರೆ. ಇದರ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಕರೆ ನೀಡಿದ್ದಾರೆ.