ಮೃತ ತಾಯಿಯ ಜಮೀನು ಹಂಚಿಕೆಯ ಮೇಲಿನ ವಿವಾದದಿಂದ ಮೂವರು ಹೆಣ್ಣು ಮಕ್ಕಳು 9 ಗಂಟೆಗಳ ಕಾಲ ಅಂತ್ಯಕ್ರಿಯೆ ನಡೆಸಲು ಬಿಡಲಿಲ್ಲ !

ಮಥುರಾ – ಇಲ್ಲಿ ಪುಷ್ಪಾ ಹೆಸರಿನ 85 ವರ್ಷದ ಮಹಿಳೆಯ ಮರಣದ ನಂತರ, ಅವಳ ಅಂತ್ಯಕ್ರಿಯೆಯನ್ನು ಸುಮಾರು 8 ರಿಂದ 9 ಗಂಟೆಗಳ ಕಾಲ ತಡೆ ಹಿಡಿಯಲಾಯಿತು. ಇದರ ಕಾರಣ ಮಹಿಳೆಯ ಮೂವರು ಪುತ್ರಿಯರ ನಡುವೆ ಜಮೀನು ಆಸ್ತಿ ಹಂಚಿಕೆಯ ವಿಚಾರವಾಗಿ ನಡೆದ ಜಗಳವೇ ಆಗಿದೆ. ತಾಯಿ ಸಾಯುವ ಮೊದಲು ಹಿರಿಯ ಪುತ್ರಿ ಶ್ರೀಮತಿ ಮಿಥಿಲೇಶ ತನ್ನ ತಾಯಿಯನ್ನು ತನ್ನ ಪರವಾಗಿ ಮಾಡಿಕೊಂಡು ಅವಳ ಭೂಮಿಯನ್ನು ಮಾರಿ ಎಲ್ಲ ಹಣವನ್ನು ತಾನೇ ತೆಗೆದುಕೊಂಡಳು. ತಾಯಿಯ ಮರಣದ ಬಳಿಕ ಇದು ಗಮನಕ್ಕೆ ಬರುತ್ತಲೇ ಕಿರಿಯ ಪುತ್ರಿ ಸುನೀತಾ ಮತ್ತು ಶಶಿ ಇವರು ಸ್ಮಶಾನ ಭೂಮಿಗೆ ಹೋಗಿ, ಆ ಜಮೀನು ಹಂಚಿಕೆಯ ಕುರಿತು ಹಿರಿಯ ಸಹೋದರಿಯೊಂದಿಗೆ ಜಗಳ ಮಾಡತೊಡಗಿದರು. ಈ ಜಗಳ ಎಷ್ಟು ವಿಕೋಪಕ್ಕೆ ತಲುಪಿದೆಂತರೆ ಇದರ ಮೇಲೆ ಪರಿಹಾರ ಕಂಡು ಹಿಡಿಯದೇ, ಅವರು ತಾಯಿಯ ಅಂತ್ಯಕ್ರಿಯೆಯನ್ನು ಮಾಡಲು ಬಿಡಲಿಲ್ಲ. ಕೊನೆಗೆ ಘಟನಾಸ್ಥಳಕ್ಕೆ ಪೊಲೀಸರು ಆಗಮಿಸಿ ಮಧ್ಯಸ್ಥಿಕೆಯನ್ನು ವಹಿಸಿ, ಮೂವರ ನಡುವೆ ಜಮೀನು ಹಂಚಿಕೆಯ ಬಗ್ಗೆ ಲಿಖಿತ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಅಂತ್ಯಕ್ರಿಯೆ ನಡೆಯಿತು.

(ಸೌಜನ್ಯ – Aaj Tak)

ಸಂಪಾದಕೀಯ ನಿಲುವು

ಸಾಧನೆಯ ಕೊರತೆಯಿಂದಾಗಿ ಸ್ವಾರ್ಥದ ತುತ್ತತುದಿ ತಲುಪಿರುವ ಈ ಘಟನೆ ನಾಚಿಕೆಗೇಡು !