ದತಿಯಾ (ಮಧ್ಯಪ್ರದೇಶ) – ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುವವರೆಗೆ ಮಾತನಾಡುವುದಿಲ್ಲ ಎಂದು 1984ರಲ್ಲಿ ಪ್ರತಿಜ್ಞೆ ಮಾಡಿದ್ದ ಮೌನಿಬಾಬಾ ಜನವರಿ 22ರಂದು ಮೌನವ್ರತ ಬಿಡುವವರಿದ್ದಾರೆ. ಕಾಲಿಗೆ ಚಪ್ಪಲಿ ಹಾಕುವುದಿಲ್ಲ ಎಂದು ಪ್ರತಿಜ್ಞೆಯನ್ನೂ ಮಾಡಿದ್ದರು. ಮೌನಿ ಬಾಬಾ ಕಳೆದ 44 ವರ್ಷಗಳಿಂದ ಹಣ್ಣುಗಳನ್ನು ತಿಂದು ಬದುಕುತ್ತಿದ್ದಾರೆ. ಮೌನಿ ಬಾಬಾರ ಹೆಸರು ರಾಮಭಾಕ್ರ ಮೋಹನ ಎಂದಾಗಿದೆ. ಅವರು ದಾಮೋದರದಾಸ್ ಮೌನಿ ಅವರ ಶಿಷ್ಯ ಮತ್ತು ದತಿಯಾ ಜಿಲ್ಲೆಯ ಉನವ್ ಬಾಲಾಜಿ ಇಲ್ಲಿ ನಿವಾಸಿಯಾಗಿದ್ದಾರೆ. ಪ್ರಸ್ತುತ ಅವರು ದತಿಯಾದ ಪೀತಾಂಬರ ಪೀಠದ ದೇವಸ್ಥಾನದ ಎದುರು ಅನಾಮಯ ಆಶ್ರಮದ ಹತ್ತಿರ ವಾಸಿಸುತ್ತಿದ್ದಾರೆ.
ಶ್ರೀರಾಮ ಮಂದಿರದ ಉದ್ಘಾಟನೆಗೆ ಆಹ್ವಾನ ನೀಡದೆ ಮೌನಿ ಬಾಬಾ ಅವರಿಗೆ ಅನ್ಯಾಯ ಮಾಡಲಾಗಿದೆ ಎಂದು ರಾಮಭಾಕ್ರ ಮೋಹನ ಅವರ ಶಿಷ್ಯ ಗೋಲೋಕ ವಾಸಿ ಹೇಳಿದ್ದಾರೆ. ಪ್ರಧಾನಿಯವರು ಮೌನಿಬಾಬರವರ ಉಪವಾಸವನ್ನು ಅಂತ್ಯಗೊಳಿಸಲು ಮಂದಿರದ ಉದ್ಘಾಟನೆಗೆ ಅವರನ್ನು ಆಹ್ವಾನಿಸಬೇಕು ಎಂದಿದ್ದಾರೆ.