ಶ್ರೀರಾಮ ಜನ್ಮ ಭೂಮಿಯ ಪ್ರಕರಣದಲ್ಲಿ ಸಿಕ್ಕಿರುವ ಭೂಮಿಯಲ್ಲಿ ಮಸೀದಿ ಕಟ್ಟದೆ ಕೃಷಿಗೆ ಬಳಸಿ ಬರುವ ಧಾನ್ಯ ಹಿಂದೂ ಮತ್ತು ಮುಸಲ್ಮಾನರಲ್ಲಿ ಹಂಚಬೇಕು !

ಬಾಬ್ರಿ ಮಸೀದಿಯ ಕಕ್ಷಿದಾರ ಇಕ್ಬಾಲ್ ಅನ್ಸಾರಿ ಇವರಿಂದ ಕರೆ !

ಅಯೋಧ್ಯೆ (ಉತ್ತರಪ್ರದೇಶ) – ಶ್ರೀರಾಮಜನ್ಮಭೂಮಿ ಮೊಕದ್ದಮೆಯ ತೀರ್ಪು ನೀಡುವಾಗ ಸರ್ವೋಚ್ಚ ನ್ಯಾಯಾಲಯವು ಮುಸಲ್ಮಾನರಿಗಾಗಿ ಮಸೀದಿ ಕಟ್ಟುವುದಕ್ಕಾಗಿ ಅಯೋಧ್ಯೆಯಲ್ಲಿ ೫ ಎಕರೆ ಭೂಮಿ ನೀಡುವಂತೆ ರಾಜ್ಯ ಸರಕಾರಕ್ಕೆ ಆದೇಶ ನೀಡಿತ್ತು. ಅದರ ಪ್ರಕಾರ ಧನ್ನಿಪುರದಲ್ಲಿ ಸರಕಾರದಿಂದ ೫ ಎಕರೆ ಭೂಮಿ ನೀಡಲಾಗಿದೆ. ಇಲ್ಲಿಯವರೆಗೆ ಮಸೀದಿಯ ಕಾಮಗಾರಿ ಆರಂಭವಾಗಿಲ್ಲ. ಈ ಕುರಿತು ಬಾಬ್ರಿ ಮಸೀದಿಯ ಕಕ್ಷಿದಾರ ಇಕ್ಬಾಲ್ ಅನ್ಸಾರಿ ಇವರು, ಇಲ್ಲಿ ಮಸೀದಿ ಕಟ್ಟುವ ಬದಲು ಕೃಷಿಗೆ ಬಳಸಿ ಅದರಲ್ಲಿನ ಧಾನ್ಯ ಹಿಂದೂ ಮತ್ತು ಮುಸಲ್ಮಾನರಿಗೆ ಹಂಚಬೇಕು ಎಂದು ಹೇಳಿದರು.

ಇಕ್ಬಾಲ್ ಅನ್ಸಾರಿ ಇವರು, ಒಂದು ವಾರ್ತಾ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ, ‘ಮಸೀದಿಯ ಕಾರ್ಯ ಯಾವಾಗ ಆರಂಭವಾಗುವುದು ?’, ಈ ಪ್ರಶ್ನೆಗೆ ಉತ್ತರ ನೀಡುವಾಗ, ಈ ಮಸೀದಿಯ ಟ್ರಸ್ಟಿ ಜಫರ್ ಫಾರೂಕಿ ಇದ್ದಾರೆ. ಅವರು ವಕ್ಫ್ ಮಂಡಳಿಯ ಅಧ್ಯಕ್ಷರು ಕೂಡ ಆಗಿದ್ದಾರೆ. ಅವರಿಗೆ ಮುಸಲ್ಮಾನರು ‘ಮಸೀದಿ ಯಾವಾಗ ಕಟ್ಟುವರು ?’, ಹೀಗೆ ಕೇಳುವುದಿಲ್ಲ. ಈ ಕುರಿತು ಮುಸಲ್ಮಾನರಿಂದ ಯಾವುದೇ ದೂರುಗಳೂ ಇಲ್ಲ. ಅವರಿಗೆ ಈಗ ಮಸೀದಿಯ ಆವಶ್ಯಕತೆ ಇಲ್ಲ ಎಂದು ಹೇಳಿದರು.

(ಸೌಜನ್ಯ – Amar Ujala)