ಉಜ್ಜೈನ ಮಹಾಕಾಲೇಶ್ವರ ದೇವಸ್ಥಾನದಿಂದ ಶ್ರೀರಾಮ ಮಂದಿರಕ್ಕಾಗಿ ೫ ಲಕ್ಷ ಉಂಡೆ ಅರ್ಪಣೆ !

ಉಜ್ಜೈನ (ಮಧ್ಯಪ್ರದೇಶ) – ಶ್ರೀರಾಮ ಮಂದಿರದ ಉದ್ಘಾಟನೆಯ ಸಮಯದಲ್ಲಿ ೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಇಲ್ಲಿಯ ಮಹಾಕಾಲೇಶ್ವರ ದೇವಸ್ಥಾನದಿಂದ ೫ ಲಕ್ಷ ಉಂಡೆಗಳು ಕಳುಹಿಸಲಾಗುವುದು. ೨೫೦ ಕ್ವಿಂಟಲ್ ತೂಕದ ಈ ಉಂಡೆಗಳು ೫ ದಿನದಲ್ಲಿ ತಯಾರಿಸಲಾಗುವುದು. ಈ ಉಂಡೆಗಳು ಭಕ್ತರಿಗೆ ಪ್ರಸಾದ ಎಂದು ವಿತರಿಸಲಾಗುವುದು. ಇದರ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಡಾ. ಮೋಹನ ಯಾದವ ಇವರು ಘೋಷಿಸಿದ್ದಾರೆ. ಈ ಉಂಡೆಗಾಗಿ ೧ ಕೋಟಿ ರೂಪಾಯಿ ಖರ್ಚು ಮಾಡಲಾಗುವುದು. ಒಂದು ಉಂಡೆಯ ತೂಕ ೫೦ ಗ್ರಾಂ ಇರಲಿದೆ. ಈ ಉಂಡೆ ತಯಾರಿಸಲು ನೀರು ಉಪಯೋಗಿಸುತ್ತಿಲ್ಲ.

೨೦ ವರ್ಷದಿಂದ ಉಂಡೆ ಪ್ರಸಾದ ತಯಾರಿಸುವ ರಾಜು ಹಲವಾಯಿ ಇವರು, ಉಂಡೆ ತಯಾರಿಸುವ ಮೊದಲು ೨೦ ಕೆಜಿ ದೇಶಿ ತುಪ್ಪ ೨೦ ಕೆಜಿ ಬೇಸನ್ ಮತ್ತು ೫ ಕೆಜಿ ರವೆ ಬೆರೆಸಿ ಒಲೆಯ ಮೇಲೆ ದೊಡ್ಡ ಉರಿಯಲ್ಲಿ ಹುರಿಯಲಾಗುತ್ತದೆ. ಈ ಪ್ರಕ್ರಿಯೆ ಒಂದುವರೆಯಿಂದ ಎರಡು ಗಂಟೆ ನಡೆಯುತ್ತದೆ. ಅಡುಗೆ ಮಾಡುವಾಗ ಈ ಮಿಶ್ರಣ ಒಂದು ಉಂಡೆಯಲ್ಲಿ ಸತತ ಬೆರೆಸಲಾಗುತ್ತದೆ. ಅದರ ನಂತರ ಬೇಸನ ಒಂದು ದೊಡ್ಡ ಟ್ರೈನಲ್ಲಿ ಇಟ್ಟು ಆರಿಸಲಾಗುತ್ತದೆ. ಈ ಪ್ರಕ್ರಿಯೆಗೆ ೨೪ ಗಂಟೆಗಳು ಹಿಡಿಯುತ್ತದೆ. ಆರಿದ ನಂತರ ಅದರಲ್ಲಿ ಸಕ್ಕರೆಪುಡಿ, ಏಲಕ್ಕಿ ಮತ್ತು ಡ್ರೈ ಫ್ರೂಟ್ಸ್ ಹಾಕುತ್ತಾರೆ. ಈ ರೀತಿ ಉಂಡೆಯ ಮಿಶ್ರಣ ತಯಾರಿಸಲಾಗುತ್ತದೆ.