ಶ್ರೀರಾಮಮಂದಿರಕ್ಕಾಗಿ ಧನಬಾದನ (ಝಾರಖಂಡ) ಸರಸ್ವತಿದೇವಿ ಕಳೆದ ೩೧ ವರ್ಷಗಳಿಂದ ಮೌನವ್ರತ !

ಶ್ರೀ ರಾಮಲಲ್ಲಾ ವಿಶೇಷ !

ರಾಂಚಿ (ಝಾರಖಂಡ) – ಅಯೋಧ್ಯೆಯಲ್ಲಿ ಜನವರಿ ೨೨ ರಂದು ಶ್ರೀರಾಮಮಂದಿರದ ಉಧ್ಘಾಟನೆಯಾಗುತ್ತಿದೆ. ಶ್ರೀರಾಮಮಂದಿರಕ್ಕಾಗಿ ಕಳೆದ ೩೧ ವರ್ಷಗಳಿಂದ ಝಾರಖಂಡನ ಧನಬಾದನಲ್ಲಿಯ ೮೫ ವರ್ಷದ ಸರಸ್ವತಿದೇವಿಯವರು ಮೌನವ್ರತ ಆಚರಿಸುತ್ತಿದ್ದಾರೆ. ಶ್ರೀರಾಮಮಂದಿರದ ಉದ್ಘಾಟನೆಗೆ ಅವರು ಅಯೋಧ್ಯೆ ತಲುಪಿದ್ದಾರೆ. ಇಲ್ಲಿ ಅವರು ತಮ್ಮ ಮೌನವ್ರತ ಬಿಡುವವರಿದ್ದಾರೆ.

(ಸೌಜನ್ಯ – Zee Uttar Pradesh UttaraKhand)

ಸರಸ್ವತಿದೇವಿಯವರ ಕುಟಂಬಸ್ಥರ ಹೇಳಿಕೆ ಪ್ರಕಾರ, ೧೯೯೨ ರಲ್ಲಿ ಬಾಬ್ರಿ ಮಸೀದಿ ಕೆಡವಿದಾಗಿನಿಂದ ಅವರು ಶಾಂತವಾಗಿದ್ದಾರೆ. ‘ಯಾವಾಗ ಶ್ರೀರಾಮಮಂದಿರ ನಿರ್ಮಾಣವಾಗುವುದೋ, ಆವಾಗ ಮೌನವ್ರತ ಮುರಿಯುವೆ‘, ಎಂದು ಪ್ರತಿಜ್ಞೆ ಮಾಡಿದ್ದರು. ಮಹಂತ ನೃತ್ಯ ಗೋಪಾಲದಾಸ ಇವರ ಪ್ರೇರಣೆಯಿಂದ ಅವರು ಮೌನವ್ರತ ಆಚರಿಸುತ್ತಿದ್ದಾರೆ. ಅವರು ಅಯೋಧ್ಯೆಯಲ್ಲಿ ‘ಮೌನಿಮಾತಾ‘ ಎಂದು ಪ್ರಸಿದ್ಧಿಯಾಗಿದ್ದಾರೆ. ಅವರು ನಮ್ಮೊಂದಿಗೆ ಸನ್ನೆಗಳ ಮೂಲಕ ಮಾತನಾಡುತ್ತಾರೆ. ಏನಾದರೂ ಹೇಳಲು ಕಷ್ಟವಾದಾಗ ಅವರು ಅದನ್ನು ಬರೆದು ಹೇಳುತ್ತಿದ್ದರು.