‘ಭಗವಾನ್ ಶ್ರೀರಾಮ ನಮ್ಮ ಪೂರ್ವಜರು’, ಎಂದು ಈ ಮಹಿಳೆಯರ ಭಾವ !
ವಾರಾಣಸಿ (ಉತ್ತರಪ್ರದೇಶ) – ಇಲ್ಲಿಯ ನಾಝನಿನ ಅನ್ಸಾರಿ ಮತ್ತು ನಜಮ ಪರವೀನ್ ಈ ಇಬ್ಬರು ಮಹಿಳೆಯರು ಅಯೋಧ್ಯೆಗೆ ಹೋಗಿ ಅಲ್ಲಿಂದ ರಾಮ ಜ್ಯೋತಿ ತೆಗೆದುಕೊಂಡು ಬರುವರು. ಈ ರಾಮ ಜ್ಯೋತಿ ಅವರು ವಾರಣಾಸಿಯಲ್ಲಿನ ಮುಸಲ್ಮಾನ ಪ್ರದೇಶದಲ್ಲಿ ಕೊಂಡೊಯ್ಯುವರು ಮತ್ತು ಅಲ್ಲಿ ಭಗವಾನ್ ಶ್ರೀರಾಮ ನಮ್ಮ ಪೂರ್ವಜರಾಗಿದ್ದು ಪ್ರತಿಯೊಬ್ಬ ಭಾರತೀಯರ ಡಿ.ಎನ್.ಎ. ಒಂದೇ ಆಗಿದೆ. ಈ ಸಂದೇಶದ ಪ್ರಸಾರ ಮಾಡುವರು. ಅಯೋಧ್ಯೆಯಲ್ಲಿ ಮಹಂತ ಶಂಭೂ ದೇವಾಚಾರ್ಯ ಇವರು ಈ ಇಬ್ಬರಿಗೆ ರಾಮ ಜ್ಯೋತಿ ನೀಡುವರು. ಜೊತೆಗೆ ಅಯೋಧ್ಯೆಯಲ್ಲಿನ ಮಣ್ಣು ಮತ್ತು ಶರಯೂ ನದಿಯ ಪವಿತ್ರ ಜಲ ಕೂಡ ಅವರು ಕೊಂಡೊಯ್ಯುವರು. ‘ಭಗವಾನ ಶ್ರೀ ರಾಮ ನಮ್ಮ ಪೂರ್ವಜರಾಗಿದ್ದಾರೆ’, ಎಂದು ಅವರ ಹೇಳಿಕೆ ಆಗಿದೆ.
ನಾಝನಿನ ಅನ್ಸಾರಿ ಇವರು ಶ್ರೀರಾಮಚರಿತ ಮಾನಸ ಮತ್ತು ಹನುಮಾನ ಚಾಲಿಸಾ ಇದನ್ನು ಉರ್ದುವಿನಲ್ಲಿ ಅನುವಾದ ಮಾಡಿದ್ದಾರೆ !
ಬನಾರಸ ಹಿಂದೂ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರುವ ನಾಝನಿನ ಅನ್ಸಾರಿ ಇವರು ಶ್ರೀರಾಮಚರಿತ ಮಾನಸ ಮತ್ತು ಹನುಮಾನ ಚಾಲಿಸಾ ಇದನ್ನು ಉರ್ದು ಭಾಷೆಯಲ್ಲಿ ಅನುವಾದ ಮಾಡಿದ್ದಾರೆ. ಅವರು ಶಾಂತಿ ಮತ್ತು ಐಕ್ಯತೆಗಾಗಿ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ವಾರಾಣಾಸಿಯಲ್ಲಿನ ಪಾತಾಲಪುರಿ ಮಠದ ಮಹಂತ ಬಾಲಕ ದಾಸ ಅವರ ಗುರುಗಳಾಗಿದ್ದಾರೆ. ಅವರು ‘ರಾಮ ಪಥ’ ಹೆಸರಿನ ಸಂಘಟನೆಯ ಮೂಲಕ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯ ಮಾಡುತ್ತಾರೆ. ನಜಮ ಇವರು ಬನಾರಸ ಹಿಂದೂ ವಿಶ್ವವಿದ್ಯಾಲಯದಿಂದ ಪಿಹೆಚ್ ಡಿ ಮಾಡಿದ್ದಾರೆ. ಕಳೆದ ೧೭ ವರ್ಷದಿಂದ ಅವರು ರಾಮನ ಭಕ್ತಿ ಮಾಡುತ್ತಿದ್ದಾರೆ.
Two Muslim women set to bring Ramjyoti from Ayodhya to Kashihttps://t.co/yVGdtG94VP pic.twitter.com/sN7WQ1D82A
— The Times Of India (@timesofindia) January 6, 2024
ವ್ಯಕ್ತಿ ಮತಾಂತರ ಮಾಡಬಹುದು, ಆದರೆ ಪೂರ್ವಜರನ್ನಲ್ಲ !
ನಾಝನಿನ ಇವರು, ಅಯೋಧ್ಯೆಯಲ್ಲಿ ಭಗವಾನ್ ಶ್ರೀ ರಾಮನ ದೇವಸ್ಥಾನ ಆಗುತ್ತಿರುವುದು ನಮಗೆ ಆನಂದ ಆಗುತ್ತಿದೆ. ಭಗವಾನ್ ಶ್ರೀರಾಮ ನಮ್ಮ ಪೂರ್ವಜರಾಗಿದ್ದಾರೆ. ವ್ಯಕ್ತಿ ಮತಾಂತರ ಮಾಡಬಹುದು; ಆದರೆ ಪೂರ್ವಜರನ್ನನಲ್ಲ. ಯಾವ ರೀತಿ ಮುಸಲ್ಮಾನರಿಗಾಗಿ ಮಕ್ಕಾದ ಮಹತ್ವ ಇದೆ ಅದೇ ರೀತಿ ಹಿಂದುಗಳಿಗಾಗಿ, ಯಾರು ಭಾರತೀಯ ಸಂಸ್ಕೃತಿಯ ಮೇಲೆ ವಿಶ್ವಾಸ ಇಡುತ್ತಾರೆ ಅವರಿಗಾಗಿ ಅಯೋಧ್ಯೆಯ ಮಹತ್ವ ಇದೆ ಎಂದು ಹೇಳಿದರು.