ರಕ್ತದ ಚೀಲಕ್ಕಾಗಿ ಈಗ ಕೇವಲ ಕಾರ್ಯವಿಧಾನಕ್ಕೆ ತಗಲುವ ವೆಚ್ಚವನ್ನು ತೆಗೆದುಕೊಳ್ಳಲಾಗುವುದು !

  • ಕೇಂದ್ರ ಔಷಧ ನಿಯಂತ್ರಣ ಮಂಡಳಿಯ ನಿರ್ಧಾರ! 

  • ಹಣ ಗಳಿಸಲು ರಕ್ತದ ಚೀಲಗಳನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. 

ನವದೆಹಲಿ – ಕೇಂದ್ರೀಯ ಔಷಧ ನಿಯಂತ್ರಣ ಮಂಡಳಿ (‘ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ’) ರಕ್ತದ ಚೀಲಗಳನ್ನು ಹಣ ಪಡೆದು ಮಾರಾಟ ಮಾಡುವುದನ್ನು ನಿಷೇಧಿಸಿದೆ. ಈ ಕಾರಣದಿಂದಾಗಿ ಈಗ ರಕ್ತ ಬ್ಯಾಂಕ್ ಅಥವಾ ಆಸ್ಪತ್ರೆಗಳು ರಕ್ತವನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಕೇವಲ ರಕ್ತವನ್ನು ಪೂರೈಸಲಾಗುತ್ತದೆ. ರೋಗಿಗೆ ರಕ್ತವನ್ನು ನೀಡುವ ಮೊದಲು, ಅದನ್ನು ಸಂಸ್ಕರಿಸಿ ಸಂರಕ್ಷಿಸಬೇಕಾಗುತ್ತದೆ, ಆದುದರಿಂದ ರಕ್ತದ ಚೀಲಗಳ ಮೇಲೆ ಕೇವಲ ಪ್ರಕ್ರಿಯೆಯ ಮೌಲ್ಯವನ್ನು ಪಡೆಯಲಾಗುತ್ತದೆಯೆಂದು ಮಂಡಳಿಯು ತನ್ನ ಸುತ್ತೋಲೆಯಲ್ಲಿ ಹೇಳಿದೆ. ಅನೇಕ ಖಾಸಗಿ ಬ್ಲಡ್ ಬ್ಯಾಂಕ್‌ಗಳು ರಕ್ತ ಮಾರಾಟ ಮಾಡಿ ರೋಗಿಗಳ ಸಂಬಂಧಿಕರಿಂದ ಅಧಿಕ ಹಣ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದ ಬಳಿಕ ಈ ನಿರ್ಣಯವನ್ನು ಕೈಕೊಳ್ಳಲಾಗಿದೆ.

1. ರಕ್ತದಾನ ಶಿಬಿರಗಳಿಂದ ಸಂಗ್ರಹಿಸಲಾಗುವ ರಕ್ತದಲ್ಲಿ ದಾನಿಗಳ ಶರೀರದ ಇತರ ಘಟಕಗಳು ಇರುತ್ತವೆ. ಈ ಘಟಕಗಳನ್ನು ಬೇರ್ಪಡಿಸಿ, ರಕ್ತವನ್ನು ಕೆಂಪು ಸ್ನಾಯು, ಬಿಳಿ ಸ್ನಾಯು, ಕಣಗಳು ಮತ್ತು ಪ್ಲಾಸ್ಮಾ ಈ ರೂಪಗಳಲ್ಲಿ ಈ ರಕ್ತಗಳನ್ನು ಶುದ್ಧೀಕರಿಸಲಾಗುತ್ತದೆ. ಅದರ ನಂತರ, ಅದನ್ನು ಸೂಕ್ತ ತಾಪಮಾನದಲ್ಲಿ ನಿಯಂತ್ರಿಸಿ ಸಂರಕ್ಷಿಸಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಯ ವೆಚ್ಚಗಳನ್ನು ಪ್ರಕ್ರಿಯೆ ವೆಚ್ಚದಲ್ಲಿ ಸೇರಿಸಲಾಗಿದೆ; ಇದರ ಹೊರತು ಯಾವುದೇ ಹೆಚ್ಚುವರಿ ಮಾರಾಟ ಬೆಲೆ ಇರುವುದಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ.

2. 2022 ರಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ ನಿಯಮಗಳ ಪ್ರಕಾರ, ರಕ್ತದಾನಿಗಳಿಂದ ಪಡೆದುಕೊಳ್ಳಲಾಗಿರುವ ರಕ್ತದ ಮೇಲಿನ ಪ್ರಕ್ರಿಯೆಯ ವೆಚ್ಚ 1 ಸಾವಿರ 550              ರೂಪಾಯಿಗಳಿಗಿಂತ ಹೆಚ್ಚು ಇರಬಾರದು. ಸರಕಾರಿ ಬ್ಲಡ್ ಬ್ಯಾಂಕಗಳಲ್ಲಿ ಇದರ ಬೆಲೆ 1 ಸಾವಿರ 100 ರೂಪಾಯಿಗಳ ವರೆಗೆ ನಿಗದಿಪಡಿಸಲಾಗಿದೆ.