ನವದೆಹಲಿ – ಶ್ರೀಲಂಕಾದ ಅಭಿವೃದ್ಧಿಯಲ್ಲಿ ಭಾರತೀಯ ಮೂಲದ ತಮಿಳು ನಾಗರಿಕರ ಕೊಡುಗೆಯನ್ನು ದಾಖಲಿಸಲು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಶೀಘ್ರದಲ್ಲೇ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಇವರು, ‘‘ಭಾರತೀಯ ಮೂಲದ ತಮಿಳರು ಶ್ರೀಲಂಕಾಕ್ಕೆ ಆಗಮಿಸಿ 200 ವರ್ಷಗಳ ಬಳಿಕ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿರುವುದು ಅವರ ಶ್ರಮದ ದಾಖಲೆಯಂತಿದೆ. ಬ್ರಿಟಿಷರು ತಮಿಳರನ್ನು ಶ್ರೀಲಂಕಾಕ್ಕೆ ಕಳುಹಿಸಿದ್ದರು. ಶ್ರೀಲಂಕಾದ ಪೂರ್ವ ಪ್ರಾಂತ್ಯದ ಗವರ್ನರ್ ಸೆಂಥಿಲ್ ತೊಂಡಮನ್ ಅವರು ಅಂಚೆಚೀಟಿಯನ್ನು ಸ್ವೀಕರಿಸಲಿದ್ದಾರೆ. ಬಿಜೆಪಿ ಕೇಂದ್ರ ಕಚೇರಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. 2014 ರಲ್ಲಿ ಅಧಿಕಾರಕ್ಕೆ ಬಂದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಲಂಕಾದಲ್ಲಿ ಭಾರತೀಯ ಮೂಲದ ತಮಿಳರ ಕಲ್ಯಾಣ ಮತ್ತು ಅಭಿವೃದ್ಧಿಯನ್ನು ನಿರ್ಧರಿಸಲು ನೇತೃತ್ವವಹಿಸಿ ಅನೇಕ ಉಪಕ್ರಮಗಳನ್ನು ಕೈಗೊಂಡಿದ್ದಾರೆ.