ಬೆಂಗಳೂರು – ಅಂಗಡಿಯ ಹೆಸರಿನ ಫಲಕ ಕನ್ನಡ ಭಾಷೆಯಲ್ಲಿ ಇಲ್ಲ ಎಂದು ಕನ್ನಡ ರಕ್ಷಣಾ ವೇದಿಕೆಯ ಕಾರ್ಯಕರ್ತರು ಡಿಸೆಂಬರ್ ೨೭ ರಂದು ಬೆಂಗಳೂರು ನಗರದಲ್ಲಿನ ಕೆಲವು ಅಂಗಡಿಗಳು ಮತ್ತು ಕಾರ್ಯಲಯದ ಫಲಕಗಳನ್ನು ಧ್ವಂಸ ಮಾಡಿದರು. ಈ ಸಂಘಟನೆಯಿಂದ ನಗರದಲ್ಲಿ ಅನೇಕ ಪ್ರದೇಶಗಳಲ್ಲಿ ಮೆರವಣಿಗೆ ಕೂಡ ನಡೆಸಿದರು. ಕನ್ನಡ ರಕ್ಷಣಾ ವೇದಿಕೆಯ ಕಾರ್ಯಕರ್ತರಿಂದ ವ್ಯಾಪಾರ ಸಂಕಿರ್ಣ, ಅಂಗಡಿಗಳು, ಔದ್ಯೋಗಿಕ ಕಟ್ಟಡಗಳು, ಬಹುರಾಷ್ಟ್ರೀಯ ಕಂಪನಿಗಳ ಕಾರ್ಯಾಲಯಗಳು ಮುಂತಾದವುಗಳನ್ನು ಗುರಿ ಮಾಡಿದರು. ಪೊಲೀಸರು ಸಂಘಟನೆಯ ಮುಖಂಡ ಟಿ. ಎ. ನಾರಾಯಣಗೌಡ ಸಹಿತ ಅನೇಕ ಕಾರ್ಯಕರ್ತರನ್ನು ತಡೆಗಟ್ಟುವಿಕೆ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದರು.
ಕರ್ನಾಟಕದಲ್ಲಿ ವ್ಯಾಪಾರ ಮಾಡುವುದಾದರೆ ನಮ್ಮ ಭಾಷೆ ಗೌರವಿಸಬೇಕಾಗುತ್ತದೆ ! – ಕರ್ನಾಟಕ ರಕ್ಷಣಾ ವೇದಿಕೆ
ನಾರಾಯಣ ಗೌಡ ಇವರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನಿಯಮಗಳ ಪ್ರಕಾರ ನಾಮಫಲಕಗಳಲ್ಲಿ ಶೇಕಡ ೬೦ ರಷ್ಟು ವಿಷಯ ಕನ್ನಡ ಭಾಷೆಯಲ್ಲಿ ಇರುವುದು ಆವಶ್ಯಕವಾಗಿದೆ; ನಾವು ಯಾರ ವ್ಯಾಪಾರ ವ್ಯವಸಾಯಕ್ಕೆ ವಿರೋಧಿಗಳಲ್ಲ; ಆದರೆ ಕರ್ನಾಟಕದಲ್ಲಿ ವ್ಯವಸಾಯ ವ್ಯಾಪಾರ ಮಾಡುವುದಿದ್ದರೆ ನಮ್ಮ ಭಾಷೆಯನ್ನು ಗೌರವಿಸಬೇಕು. ಕನ್ನಡ ಅಕ್ಷರಗಳು ಚಿಕ್ಕ ಆಕಾರದಲ್ಲಿ ಬರೆದರೆ ನಾವು ಅದನ್ನು ಬದಲಾಯಿಸಲು ಅನಿವಾರ್ಯಗೊಳಿಸುವೆವು. ಕನ್ನಡ ಭಾಷೆಯ ಕುರಿತಾದ ನಮ್ಮ ಪ್ರೇಮ ನಿರ್ಲಕ್ಷಿಸಿದರೆ ಲೋಕಸಭಾ ಚುನಾವಣೆಯ ಸಮಯದಲ್ಲಿ ಕಠಿಣವಾಗಬಹುದು ಎಂದು ಗೌಡ ಇವರು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಸರಕಾರ ಕನ್ನಡ ಭಾಷೆಯ ಸಂದರ್ಭದಲ್ಲಿ ಎಲ್ಲಾ ಉಪಕ್ರಮಗಳಿಗೆ ಬೆಂಬಲ ನೀಡುತ್ತದೆ ! – ಗೃಹ ಸಚಿವ ಪರಮೇಶ್ವರ
ಈ ಪ್ರತಿಭಟನೆಯ ಬಗ್ಗೆ ರಾಜ್ಯದ ಗೃಹ ಸಚಿವ ಜಿ. ಪರಮೇಶ್ವರ ಇವರು, ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಅನೇಕ ದಿನದಿಂದ ನಾಮಫಲಕಗಳು ಕನ್ನಡದಲ್ಲಿ ಹಾಕುವುದಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ. ಕನ್ನಡ ರಾಜ್ಯದ ಅಧಿಕೃತ ಭಾಷೆಯಾಗಿರುವುದರಿಂದ ಸರಕಾರ ಅದರ ಕುರಿತಾದ ಎಲ್ಲಾ ಉಪಕ್ರಮಗಳಿಗೆ ಬೆಂಬಲ ನೀಡುತ್ತದೆ. (ಸರಕಾರದ ಬೆಂಬಲ ಇದ್ದರೇ, ಸರಕಾರ ನಾಮಫಲಕ ಕನ್ನಡ ಭಾಷೆಯಲ್ಲಿ ಹಾಕುವುದಕ್ಕಾಗಿ ವ್ಯಾಪಾರಿಗಳಿಗೆ ಏಕೆ ಅನಿವಾರ್ಯಗೊಳಿಸುತ್ತಿಲ್ಲ ? ಅಥವಾ ರಾಜಕಾರಣಕ್ಕಾಗಿ ಇದರ ಕಡೆಗೆ ನಿರ್ಲಕ್ಷ ಮಾಡಲಾಗುತ್ತಿದೆ ! – ಸಂಪಾದಕರು)
Bengaluru: English nameplates of shops vandalised after ‘60% Kannada’ order
(@sagayrajp) #Bengaluru #News #Karnataka https://t.co/QNvfVjo5we— IndiaToday (@IndiaToday) December 27, 2023