‘ಇಂದು ನಾನು ಮುಸಲ್ಮಾನನಾಗಿದ್ದೇನೆ’, ಎಂದು ಹೇಳುವ ಒಂದು ಹಿಂದೂ ಯುವಕನ ವಿಡಿಯೋ ವೈರಲ್ !

ಬರೆಲಿ (ಉತ್ತರಪ್ರದೇಶ)ನ ಘಟನೆ !

ಶಬಾನಾ ಖಾನ್ ಎಂಬ ಯುವತಿಯಿಂದ, ಬಲವಂತವಾಗಿ ಪತಿಯ ಮತಾಂತರ ಮಾಡಿದಳು ! – ಯುವಕನ ಪತ್ನಿಯಿಂದ ಆರೋಪ

ಬರೆಲಿ (ಉತ್ತರಪ್ರದೇಶ) – ಇಲ್ಲಿಯ ಆಕಾಶ ಮೌರ್ಯ ಎಂಬ ೨೪ ವರ್ಷದ ಹಿಂದೂ ಯುವಕನ ಒಂದು ವಿಡಿಯೋ ಪ್ರಸಾರವಾಗಿದೆ. ಇದರಲ್ಲಿ ಅವನು ಇಸ್ಲಾಂ ಟೋಪಿ ಧರಿಸಿದ್ದಾನೆ. ವಿಡಿಯೋದಲ್ಲಿ ‘ಮೇರಾ ದಿಲ್ ತೋ ಮಹಮ್ಮದ್’ ಎಂಬ ಗೀತೆ ಕೇಳಿಸಲಾಗುತ್ತಿದೆ ಹಾಗೂ ಕೆಳಗಡೆ ‘ಇಂದು ನಾನು ಮುಸಲ್ಮಾನನಾಗಿದ್ದೇನೆ !’, ಎಂದು ಬರೆಯಲಾಗಿದೆ. ಈ ವಿಡಿಯೋ ಬಹಿರಂಗವಾಗುತ್ತಲೇ ಆಕಾಶನ ಪತ್ನಿ ಲಕ್ಷ್ಮಿ ಇವಳು ಪೊಲೀಸರಿಗೆ ದೂರು ನೀಡಿದ್ದಾಳೆ ಮತ್ತು ಶಬಾನ ಖಾನ್ ಹೆಸರಿನ ಓರ್ವ ಮುಸಲ್ಮಾನ ಯುವತಿಯು ಆಕಾಶನನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಅವನನ್ನು ಬಲವಂತವಾಗಿ ಮತಾಂತರ ಮಾಡಿರುವುದಾಗಿ ಆರೋಪಿಸಿದ್ದಾಳೆ.

ಲಕ್ಷ್ಮಿ, ಡಿಸೆಂಬರ್ ೨೧ ರಿಂದ ಆಕೆಯ ಪತಿ ಮನೆಗೆ ಹಿಂತಿರುಗಿರಲಿಲ್ಲ. ಮನೆಯಿಂದ ಹೋಗುವಾಗ ಅವನ ಚಿನ್ನ ಮತ್ತು ಬೆಳ್ಳಿಯ ಕೆಲವು ನಾಣ್ಯಗಳು ಮತ್ತು ೨೩ ಸಾವಿರ ನಗದು ಹಣ ತೆಗೆದುಕೊಂಡು ಹೋಗಿದ್ದನು. ಆಕಾಶನು ಒಂದು ಕೊರಿಯರ್ ಕಂಪನಿಯಲ್ಲಿ ಡೆಲಿವರಿ ಬಾಯ್ ನ ಕೆಲಸ ಮಾಡುತ್ತಾನೆ. ಲಕ್ಷ್ಮಿ ಮಾತು ಮುಂದುವರಿಸಿ, ನಾಲ್ಕು ತಿಂಗಳ ಹಿಂದೆ ಆಕಾಶನ ಪರಿಚಯ ಶಬಾನಾ ಜೊತೆಗೆ ಆಯಿತು. ಅದರ ನಂತರ ಆಕೆ ಅವನನ್ನು ಸಂಪರ್ಕಿಸುತ್ತಿದ್ದಳು ಮತ್ತು ಅವನನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿದಳು. ಒಂದು ದಿನ ಶಬಾನಾ ಲಕ್ಷ್ಮಿಗೆ ವಿಡಿಯೋ ಕಾಲ್ ಮಾಡಿ ಬೆದರಿಸಿದಳು, ಆಕಾಶನು ಇಸ್ಲಾಂ ಸ್ವೀಕರಿಸಿದ್ದಾನೆ. ಆಕಾಶನನ್ನು ಏನಾದರೂ ಸಂಪರ್ಕಿಸುವ ಪ್ರಯತ್ನ ಮಾಡಿದರೆ, ಲಕ್ಷ್ಮಿಗೆ ಅಪಾಯ ಆಗುವುದು. ಆ ಸಮಯದಲ್ಲಿ ಆಕಾಶ ಅಳುತ್ತಿರುವುದು ಕಾಣುತ್ತಿತ್ತು. ಡಿಸೆಂಬರ್ ೨೬ ರಂದು ಆಕಾಶನ ತಂದೆಯ ಜೊತೆಗೆ ಸಂಪರ್ಕ ಮಾಡಿದಾಗ, ಅವರು, ಮತಾಂತರದ ಆರೋಪ ಸತ್ಯವಾಗಿದೆ. ಆಕಾಶ ಈಗ ಮನೆಗೆ ಹಿಂತಿರುಗಿದ್ದಾನೆ ಎಂದು ಹೇಳಿದ್ದಾರೆ.

ಸಂಪಾದಕರ ನಿಲುವು

* ಉತ್ತರಪ್ರದೇಶದಲ್ಲಿ ಮತಾಂತರ ವಿರೋಧಿ ಕಾನೂನು ಇದ್ದರೂ ಈ ರೀತಿ ಮುಸಲ್ಮಾನ ಮಹಿಳೆಯರು ಹಿಂದುಗಳ ಮತಾಂತರ ಮಾಡುತ್ತಾರೆ, ಇದು ಹಿಂದುಗಳಲ್ಲಿನ ಗೌರವಹೀನತೆಯ ಲಕ್ಷಣ ಎನ್ನಬೇಕು. ಇದರಿಂದ ಕೇವಲ ಕಾನೂನು ರೂಪಿಸುವುದಲ್ಲದೆ, ಹಿಂದುಗಳಿಂದ ಸಾಧನೆ ಮಾಡಿಸಿಕೊಂಡು ಅವರನ್ನು ಆತ್ಮಸಕ್ಷಮ ಮಾಡುವುದು ಆವಶ್ಯಕವಾಗಿದೆ !

* ಮುಸಲ್ಮಾನ ಪುರುಷರಷ್ಟೇ ಅಲ್ಲ, ಈಗ ಮಹಿಳೆಯರು ಲವ್ ಜಿಹಾದ್ ಮಾಡುತ್ತಿದ್ದಾರೆ, ಇದೆ ಇದರ ಉದಾಹರಣೆ !