ನವ ದೆಹಲಿ – ಕೇಂದ್ರ ಸರಕಾರ ‘ಮುಸ್ಲಿಂ ಲೀಗ್ ಜಮ್ಮು – ಕಾಶ್ಮೀರ’ (ಮಸರತ್ ಆಲಂ ಗುಂಪು) ಸಂಘಟನೆಯನ್ನು ನಿಷೇಧಿಸಿದೆ. ಈ ಮಾಹಿತಿಯನ್ನು ಗೃಹ ಸಚಿವ ಅಮಿತ್ ಶಾ ಸಾಮಾಜಿಕ ಜಾಲತಾಣಗಳ ಮೂಲಕ ಬಿತ್ತರಿಸಿದ್ದಾರೆ. ‘ದೇಶವಿರೋಧಿ ಚಟುವಟಿಕೆಗಳಿಂದಾಗಿ ಈ ಸಂಘಟನೆಯನ್ನು ರಾಷ್ಟ್ರವಿರೋಧಿ ಚಟುವಟಿಕೆಗಳ ತಡೆ ಕಾಯ್ದೆಯಡಿ ನಿಷೇಧಿಸಲಾಗಿದೆ’ ಎಂದು ಶಾ ಹೇಳಿದರು. ಈ ಸಂಘಟನೆಯನ್ನು ಮಸರತ್ ಆಲಂ ಭಟ್ ಸ್ಥಾಪಿಸಿದ್ದರು. 2019 ರಿಂದ ಅವನು ದೆಹಲಿಯ ತಿಹಾರ್ ಜೈಲಿನಲ್ಲಿ ಬಂಧಿಯಾಗಿದ್ದಾನೆ.
ಮಸರತ್ ಆಲಂ ಗುಂಪಿನ ಸದಸ್ಯರು ಜಮ್ಮು ಮತ್ತು ಕಾಶ್ಮೀರದಲ್ಲಿ ದೇಶ ವಿರೋಧಿ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ. ಈ ಸದಸ್ಯರು ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುತ್ತಾರೆ, ಜೊತೆಗೆ ಜಮ್ಮು – ಕಾಶ್ಮೀರದಲ್ಲಿ ಇಸ್ಲಾಮಿಕ್ ರಾಜ್ಯವನ್ನು ಸ್ಥಾಪಿಸಲು ಜನರನ್ನು ಪ್ರಚೋದಿಸುತ್ತಾರೆ. ನಮ್ಮ ದೇಶದ ಏಕತೆ, ಸಾರ್ವಭೌಮತೆ ಮತ್ತು ಸಮಗ್ರತೆಗೆ ವಿರುದ್ಧವಾಗಿ ಕೆಲಸ ಮಾಡುವ ಯಾರನ್ನೂ ಬಿಡಲಾಗುವುದಿಲ್ಲ ಮತ್ತು ಕಾನೂನಿನ ಆಕ್ರೋಶವನ್ನು ಎದುರಿಸಬೇಕಾಗುತ್ತದೆ ಎಂಬ ಸರಕಾರದ ಸಂದೇಶ ಸ್ಪಷ್ಟಪಡಿಸಿದೆ.