ಡ್ರೋನ್ ಮೂಲಕ ನೌಕೆ ಮೇಲೆ ದಾಳಿ ಮಾಡಿದ ಪ್ರಕರಣ
ಮುಂಬಯಿ – ಅರಬ್ಬಿ ಸಮುದ್ರದಲ್ಲಿದ್ದಾಗ ಡ್ರೋನ್‌ನಿಂದ ದಾಳಿಗೊಳಗಾದ ವಾಣಿಜ್ಯ ಹಡಗು ಮುಂಬಯಿ ಕರಾವಳಿಯನ್ನು ತಲುಪಿದೆ. ‘ಇಂಡಿಯನ್ ಕೋಸ್ಟ್ ಗಾರ್ಡ್’ನ ಬೋಟ್ ಮೂಲಕ ಹಡಗನ್ನು ದಡಕ್ಕೆ ತರಲಾಯಿತು. ಈ ಹಡಗಿಲ್ಲಿ ಲೈಬೀರಿಯಾ ದೇಶದ ಧ್ವಜವಿತ್ತು. ಈ ಹಡಗಿಲ್ಲಿ ಭಾರತದ 22 ಮತ್ತು ವಿಯೆಟ್ನಾಂನ 1 ನಾಗರಿಕರು ಇದ್ದರು. ನೌಕಾಪಡೆಯ ತಂಡವು ಹಡಗಿನ ಮೇಲೆ ದಾಳಿ ಪ್ರಕರಣದ ಹೆಚ್ಚಿನ ತನಿಖೆ ನಡೆಸುತ್ತಿದೆ.
ಹಡಗಿನ ಮೇಲಿನ ದಾಳಿಗೆ ಇರಾನ್ ಹೊಣೆ ಎಂದು ಅಮೇರಿಕಾ ಹೇಳಿದೆ. ‘ಇರಾನ್‌ನಿಂದ ಉಡಾವಣೆಯಾದ ಡ್ರೋನ್ ಹಡಗಿನ ಮೇಲೆ ದಾಳಿ ಮಾಡಿತ್ತು’ ಎಂದು ಅಮೇರಿಕಾ ಹೇಳಿದೆ; ಆದರೆ ಇರಾನ್ ಈ ದಾವೆಯನ್ನು ತಿರಸ್ಕರಿಸಿದೆ.