ಅನೇಕ ಬಾರಿ ಪೂಜೆಯಲ್ಲಿ ಅಥವಾ ಹವನ ಮಾಡುವಾಗ ಕರ್ಪೂರವನ್ನು ಬಳಸುತ್ತೇವೆ; ಆದರೆ ನಮಗಾಗಿ ಒಂದು ಚಿಟಿಕೆಯಷ್ಟು ಕರ್ಪೂರವು ತುಂಬಾ ಲಾಭ ದಾಯಕವಾಗಿದೆ. ಕರ್ಪೂರದಲ್ಲಿ ಅನೇಕ ಔಷಧಿಗಳ ಗುಣಧರ್ಮಗಳಿವೆ, ಅದರ ಬಗ್ಗೆ ನಮಗೆ ಗೊತ್ತಿರುವುದಿಲ್ಲ. ಕರ್ಪೂರವು ‘ಯಾಂಟಿ ಬ್ಯಾಕ್ಟೇರಿಯಲ್’ (ಜೀವಾಣುರೋಧಕ) ಗುಣಧರ್ಮಗಳಿಂದ ಸಮೃದ್ಧವಾಗಿದೆ. ನೈಸರ್ಗಿಕ ಕರ್ಪೂರವು ಅನೇಕ ಸಮಸ್ಯೆಗಳನ್ನು ಪರಿಹರಿಸುತ್ತದೆ. ಇಂತಹ ಕರ್ಪೂರವನ್ನು ಯಾವ ಸಮಸ್ಯೆಗಳನ್ನು ಪರಿಹರಿಸಲು ಉಪಯೋಗಿಸ ಲಾಗುತ್ತದೆ, ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ಕೊಡುತ್ತಿದ್ದೇವೆ.
೧. ಶೀತ-ಕೆಮ್ಮಿನ ಮೇಲೆ ಲಾಭದಾಯಕ
ಶೀತ ಮತ್ತು ಕೆಮ್ಮು ಆಗಿದ್ದರೆ ಕರ್ಪೂರವು ತುಂಬಾ ಲಾಭದಾಯಕವಾಗಿದೆ. ಶೀತ ಅಥವಾ ಕೆಮ್ಮು ಇದ್ದರೆ ಬೆಚ್ಚಗಿನ ಸಾಸಿವೆ ಎಣ್ಣೆಯಲ್ಲಿ ಕರ್ಪೂರವನ್ನು ಸೇರಿಸಿ ಮಸಾಜ್ ಮಾಡಬೇಕು. ಕರ್ಪೂರವನ್ನು ಬಿಸಿ ನೀರಿನಲ್ಲಿ ಹಾಕಿ ವಾಫ್(ಹಬೆ) ತೆಗೆದುಕೊಂಡರೆ ಮೂಗು ಕಟ್ಟಿಕೊಂಡಿರುವುದು ತೆರೆಯುತ್ತದೆ ಮತ್ತು ಶೀತದಿಂದ ಬಿಡುಗಡೆಯಾಗುತ್ತದೆ.
೨. ನೋವಿನಿಂದ ಪರಿಹಾರ
ಕಾಲು ನೋವು ಮತ್ತು ಬಾವು ಬರುವ ಸಮಸ್ಯೆಯಿದ್ದರೆ ಎಣ್ಣೆಯಲ್ಲಿ ಕರ್ಪೂರವನ್ನು ಸೇರಿಸಿ ಮಾಲಿಶ್ ಮಾಡುವುದರಿಂದ ನೆಮ್ಮದಿ ಸಿಗುತ್ತದೆ. ದಣಿವು ಎನಿಸಿದರೆ ಎಳ್ಳು ಅಥವಾ ಸಾಸಿವೆ ಎಣ್ಣೆಯಲ್ಲಿ ಕರ್ಪೂರವನ್ನು ಸೇರಿಸಿ ಮಾಲಿಶ್ ಮಾಡಬೇಕು.
೩. ಆರೋಗ್ಯಕರ ಕೂದಲಿಗಾಗಿ ಉಪಯುಕ್ತ
ಕರ್ಪೂರವು ಕೂದಲುಗಳಲ್ಲಿನ ಹೊಟ್ಟು, ಶುಷ್ಕತೆ, ಕೂದಲು ಉದುರುವುದು ಇಂತಹ ಸಮಸ್ಯೆಗಳನ್ನು ದೂರಗೊಳಿಸುತ್ತದೆ. ಕೊಬ್ಬರಿ ಎಣ್ಣೆಯಲ್ಲಿ ಕರ್ಪೂರವನ್ನು ಸೇರಿಸಿ ಹಚ್ಚುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ ಮತ್ತು ಕೂದಲುಗಳು ಹೊಳೆಯುತ್ತವೆ. ದಪ್ಪ ಮತ್ತು ಉದ್ದವಾದ ಕೂದಲುಗಳು ಬೇಕೆನಿಸಿದರೆ, ಕೊಬ್ಬರಿ ಎಣ್ಣೆಯಲ್ಲಿ ಕರ್ಪೂರ ಸೇರಿಸಿ ಹಚ್ಚುವುದರಿಂದ ಲಾಭವಾಗುತ್ತದೆ.
೪. ತ್ವಚೆಗಾಗಿ ಲಾಭದಾಯಕ
ಕರ್ಪೂರದಲ್ಲಿ ಜೀವಾಣುವಿರೋಧಕ ಗುಣಧರ್ಮ ಇದೆ. ಕರ್ಪೂರ ಬಳಕೆಯಿಂದ ಮೊಡವೆಗಳು ದೂರವಾಗುತ್ತವೆ. ಇದು ‘ಬೆಕ್ಟೇರಿಯಾ’ವನ್ನು ದೂರವಿಡುತ್ತದೆ, ಅಂದರೆ ಮೊಡವೆಗಳ ಬೆಳವಣಿಗೆ ಆಗುವುದಿಲ್ಲ.
೫. ಕಲೆಗಳು ಕಡಿಮೆಯಾಗುತ್ತವೆ !
ಯಾರಿಗೆ ಮುಖದ ಮೇಲೆ ಮೊಡವೆಗಳ-ಉಗುರುಗಳ ಕಲೆಗಳಿದ್ದರೆ, ಅದನ್ನು ಕರ್ಪೂರವನ್ನು ಹಚ್ಚಿ ತೆಗೆಯಬಹುದು. ತೆಂಗಿನ ಎಣ್ಣೆಯಲ್ಲಿ ಕರ್ಪೂರವನ್ನು ಸೇರಿಸಿ ಮುಖಕ್ಕೆ ಹಚ್ಚಬೇಕು. ಅದರಿಂದ ಕಲೆಗಳು ದೂರ ಆಗುತ್ತವೆ ಮತ್ತು ತ್ವಚೆ ಉತ್ತಮವಾಗುತ್ತದೆ.
೬. ತಲೆನೋವು ನಿವಾರಕ
ಕರ್ಪೂರವು ತುಂಬಾ ತಂಪು ನೀಡುತ್ತದೆ. ತಲೆನೋವಿನ ತೊಂದರೆಯಿದ್ದರೆ ಅರ್ಜುನ (ಮತ್ತಿ) ವನಸ್ಪತಿಯ ತೊಗಟೆ, ಬಿಳಿ ಗಂಧ ಮತ್ತು ಶುಂಠಿಯಲ್ಲಿ ಕರ್ಪೂರವನ್ನು ಸೇರಿಸಿ ತಲೆಗೆ ಹಚ್ಚುವುದರಿಂದ ತಲೆನೋವು ಬೇಗನೇ ಕಡಿಮೆಯಾಗುತ್ತದೆ.
(ಆಧಾರ : ದೈನಿಕ ‘ಮಹಾರಾಷ್ಟ್ರ’)