ಡೊನಾಲ್ಡ್ ಟ್ರಂಪ್ ಅಮೇರಿಕಾದ ರಾಷ್ಟ್ರಾಧ್ಯಕ್ಷ ಹುದ್ದೆಯ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ! – ಸರ್ವೋಚ್ಚ ನ್ಯಾಯಾಲಯದ ತೀರ್ಪು

ವಾಷಿಂಗ್ಟನ (ಅಮೇರಿಕಾ) : ಅಮೇರಿಕಾದ ಮಾಜಿ ರಾಷ್ಟ್ರಾಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ಅವರನ್ನು ಕೊಲೊರಾಡೊ ಸರ್ವೋಚ್ಚ ನ್ಯಾಯಾಲಯವು ಅಧ್ಯಕ್ಷ ಸ್ಥಾನಕ್ಕೆ ಅನರ್ಹರೆಂದು ಘೋಷಿಸಿದೆ. ಹೀಗಾಗಿ ಅವರು 2024ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಜನವರಿ 6, 2021 ರಂದು `ಯುಎಸ್ ಕ್ಯಾಪಿಟಲ್’(ಅಮೇರಿಕೆಯ ಸಂಸತ್ತು) ಇಲ್ಲಿ ನಡೆದ ಹಿಂಸಾಚಾರಕ್ಕೆ ಟ್ರಂಪ್ ಅವರನ್ನು ಜವಾಬ್ದಾರರನ್ನಾಗಿ ಮಾಡಲಾಗಿದೆ. ಅಮೇರಿಕೆಯ ಇತಿಹಾಸದಲ್ಲಿ ಮೊದಲ ಬಾರಿಗೆ, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಪ್ರಯತ್ನಿಸುತ್ತಿರುವ ಸಂವಿಧಾನದ 14 ನೇ ತಿದ್ದುಪಡಿಯ ಕಲಂ 3 ಅನ್ನು ಉಪಯೋಗಿಸಿ ಅನರ್ಹರು ಎಂದು ಘೋಷಿಸಲಾಗಿದೆ. 2020ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಸೋಲನುಭವಿಸಿದ್ದರು. ತದನಂತರ, ಜನವರಿ 6, 2021 ರಂದು, ಅವರ ಬೆಂಬಲಿಗರು ಸಂಸತ್ತಿಗೆ ನುಗ್ಗಿ ಹಿಂಸಾಚಾರವನ್ನು ನಡೆಸಿದ್ದರು.