MP Suspended : ಇಲ್ಲಿಯವರೆಗೆ ವಿರೋಧ ಪಕ್ಷದ 141 ಸಂಸದರ ಅಮಾನತು!

  • ಸಂಸತ್ತಿನ ನುಸುಳಿ ಗದ್ದಲ ಮಾಡಿರುವ ಪ್ರಕರಣ

  • ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಸಂಖ್ಯೆಯ ಸಂಸದರ ಅಮಾನತು!

  • ‘ಮೋದಿ ಮುರ್ದಾಬಾದ’ `ತಾನಾಶಾಹಿ ಮುರ್ದಾಬಾದ’ ಇತ್ಯಾದಿ ಘೋಷಣೆ

ನವದೆಹಲಿ – ಸಂಸತ್ತಿನ ಚಳಿಗಾಲದ ಅಧಿವೇಶನದ 12ನೇ ದಿನ ಅಂದರೆ ಡಿಸೆಂಬರ್ 19ರಂದು ವಿರೋಧ ಪಕ್ಷಗಳ ಸಂಸದರ ಅಮಾನತು ಹಿನ್ನೆಲೆಯಲ್ಲಿ ಎರಡೂ ಸಭಾಗೃಹದಲ್ಲಿ ಗದ್ದಲವಾಯಿತು. ಸಂಸದರು ಸದನದ ಒಳಗೆ ಮತ್ತು ಸಭಾಗೃಹದ ಪ್ರವೇಶದ್ವಾರದಲ್ಲಿ ಹಾಗೂ ಪ್ರದೇಶದಲ್ಲಿ ಘೋಷಣೆಗಳನ್ನು ಕೂಗಿದರು. ಇದರಿಂದಾಗಿ ಇನ್ನೂ 49 ಪ್ರತಿಪಕ್ಷ ಸಂಸದರನ್ನು ಲೋಕಸಭೆಯಿಂದ ಅಮಾನತುಗೊಳಿಸಲಾಗಿದೆ. ಒಟ್ಟು 141 ಸಂಸದರನ್ನು ಅಮಾನತು ಮಾಡಲಾಗಿದೆ. ಇಷ್ಟು ಮಾತ್ರವಲ್ಲದೆ ಲೋಕಸಭೆಯ ಪ್ರಶ್ನೆ ಪಟ್ಟಿಯಿಂದ ಅಮಾನತುಗೊಂಡಿರುವ ಸಂಸದರಿಂದ ಕೇಳಲಾಗಿದ್ದ 27 ಪ್ರಶ್ನೆಗಳನ್ನು ತೆಗೆದುಹಾಕಲಾಗಿದೆ.

1. ರಾಜ್ಯಸಭೆಯಲ್ಲಿ ಒಟ್ಟು 245 ಸಂಸದರಿದ್ದಾರೆ. ಇವರಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಿಂದ 105 ಜನರು, ‘ಇಂಡಿಯಾ’ ಒಕ್ಕೂಟದ 64 ಮತ್ತು ಇತರ 76 ಮಂದಿ ಸೇರಿದ್ದಾರೆ. ಈ ಪೈಕಿ 62 ಪ್ರತಿಪಕ್ಷ ಸಂಸದರನ್ನು ಅಮಾನತು ಮಾಡಲಾಗಿದೆ.

2. ಲೋಕಸಭೆಯಲ್ಲಿ ಸಂಸದರ ಸಧ್ಯದ ಸಂಖ್ಯೆ 538 ಆಗಿದೆ. ಇದರಲ್ಲಿ ಸರ್ಕಾರದ 329, ‘ಇಂಡಿಯಾ’ ಒಕ್ಕೂಟದ 142 ಮತ್ತು ಇತರ ಪಕ್ಷಗಳಿಂದ 67 ಸಂಸದರಿದ್ದಾರೆ. ಈ ಪೈಕಿ 79 ವಿಪಕ್ಷ ಸಂಸದರನ್ನು ಅಮಾನತುಗೊಳಿಸಲಾಗಿದೆ.

ಸಂಸತ್ತಿನ ವಿಶಿಷ್ಟ ಘಟನಾವಳಿಗಳು(?)… !

ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ ಬ್ಯಾನರ್ಜಿ ಅವರು ಸಂಸತ್ತಿನ ಪ್ರವೇಶದ್ವಾರದ ಮೇಲೆ ರಾಜ್ಯಸಭೆಯ ಸಭಾಧ್ಯಕ್ಷರು ಜಗದೀಪ ಧನಕರ ಅವರನ್ನು ಅನುಕರಣೆ ಮಾಡಿದರು. ಆ ಸಮಯದಲ್ಲಿ ರಾಹುಲ್ ಗಾಂಧಿ ಜೊತೆಯಲ್ಲಿ ಅನೇಕ ವಿರೋಧ ಪಕ್ಷಗಳ ನಾಯಕರು ಉಪಸ್ಥಿತರಿದ್ದರು. ಈ ವಿಷಯದಲ್ಲಿ ಧನಖಡ ಇವರು ಸಂಸತ್ತಿನಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.

  • ಪ್ರತಿಪಕ್ಷಗಳ ನಾಯಕರಿಂದ ` ಮೋದಿ ಮುರ್ದಾಬಾದ’ `ತಾನಾಶಾಹಿ ಮುರ್ದಾಬಾದ’ ಮತ್ತು `ಮೋದಿ ಸರಕಾರ ಮುರ್ದಾಬಾದ’ ಮುಂತಾದ ಘೋಷಣೆಗಳನ್ನು ಮಾಡಿದರು.
  • ಹಿರಿಯ ಪತ್ರಕರ್ತ ಹಾಗೂ ರಾಜಕೀಯ ಪಟು ಕೆ. ವಿಕ್ರಮ್ ರಾವ ಪ್ರಕಾರ, ಒಂದೇ ದಿನದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸದಸ್ಯರನ್ನು ಸಂಸತ್ತಿನಿಂದ ಅಮಾನತುಗೊಳಿಸಿರುವುದು ಇದೇ ಮೊದಲ ಬಾರಿಯಾಗಿದೆ.
  • ಸಭಾಧ್ಯಕ್ಷರಾದ ಓಂ ಬಿರ್ಲಾ ಮಾತನಾಡಿ, ಸಂಸತ್ತಿನ ಭದ್ರತೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ವಿಚಾರಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಘಟನೆಯ ತನಿಖೆಗೆ ಸಮಿತಿಯನ್ನು ರಚಿಸಲಾಗಿದೆ. ಈ ಘಟನೆಯ ಸಂದರ್ಭದಲ್ಲಿ ರಾಜಕೀಯ ಮಾಡುವುದು ದುರದೃಷ್ಟಕರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಭಾಗೃಹದಲ್ಲಿ ಈ ಕುರಿತು ಚರ್ಚೆ ನಡೆಯಬೇಕು.

ಸಂಪಾದಕೀಯ ನಿಲುವು

ಜಗತ್ತಿನಲ್ಲಿ ಭಾರತೀಯ ಪ್ರಜಾಪ್ರಭುತ್ವವನ್ನು ಅಣಕಿಸುವ ಜನರಿಗೆ ಮತ್ತೊಂದು ಉದಾಹರಣೆ! ಭದ್ರತಾ ವ್ಯವಸ್ಥೆಯಲ್ಲಿನ ದೋಷಗಳನ್ನು ಸರಿಪಡಿಸಲು ಸಂಘಟಿತರಾಗಿ ಪ್ರಯತ್ನಿಸುವುದು ಆವಶ್ಯಕವಾಗಿರುವಾಗ ಅದರ ಮೇಲೆ ರಾಜಕೀಯದಲ್ಲಿ ತೊಡಗಿರುವುದು ವಿರೋಧ ಪಕ್ಷದ ಸಂಸದರಿಗೆ ನಾಚಿಕೆಗೇಡು!