ಮಧ್ಯಪ್ರದೇಶ ವಿಧಾನಸಭೆಯಿಂದ ನೆಹರು ಅವರ ತೈಲವರ್ಣಚಿತ್ರವನ್ನು ತೆಗೆದು ಡಾ. ಬಾಬಾಸಾಹೇಬ ಅಂಬೇಡ್ಕರರ ತೈಲವರ್ಣವನ್ನು ಸ್ಥಾಪಿಸಲಾಯಿತು !

ಕಾಂಗ್ರೆಸ್ ನಿಂದ ಬಿಜೆಪಿಯ ಮೇಲೆ ಟೀಕೆ

ಭೋಪಾಲ್ (ಮಧ್ಯಪ್ರದೇಶ) – ಮಧ್ಯಪ್ರದೇಶದ ನೂತನ ಬಿಜೆಪಿ ಸರಕಾರದ ಮೊದಲ ವಿಧಾನಸಭೆ ಅಧಿವೇಶನದಲ್ಲಿ ಸಭಾಂಗಣದಲ್ಲಿ ಜವಾಹರಲಾಲ ನೆಹರು ಅವರ ತೈಲ ವರ್ಣಚಿತ್ರವನ್ನು ತೆಗೆದು ಅಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ತೈಲ ವರ್ಣಚಿತ್ರವನ್ನು ಅಳವಡಿಸಲಾಗಿದೆ. ವಿಧಾನಸಭಾಧ್ಯಕ್ಷರ ಆಸನದ ಹಿಂದೆ ಮಾ. ಗಾಂಧಿ ಮತ್ತು ನೆಹರೂ ಅವರ 2 ತೈಲವರ್ಣ ಚಿತ್ರಗಳಿದ್ದವು. ಅವರಿಂದ ನೆಹರೂ ಅವರ ತೈಲವರ್ಣವನ್ನು ತೆಗೆದುಹಾಕಲಾಗಿದೆ. ಈ ಬಗ್ಗೆ ಬಿಜೆಪಿ ಸರಕಾರವನ್ನು ಕಾಂಗ್ರೆಸ್ ಟೀಕಿಸಿದೆ.

(ಸೌಜನ್ಯ – News 18 India)

ಕಾಂಗ್ರೆಸ್ ವಕ್ತಾರ ಅಬ್ಬಾಸ್ ಹಫೀಜ್ ಇವರು ಮಾತನಾಡಿ, ಬಿಜೆಪಿ ದೇಶದ ಇತಿಹಾಸವನ್ನು ಅಳಿಸಲು ಬಯಸುತ್ತಿದೆ. ಅದಕ್ಕಾಗಿಯೇ ಅವರು ಈ ರೀತಿ ಮಾಡುತ್ತಿದ್ದಾರೆ ಎಂದು ಹೇಳಿದರು. ಇದರಿಂದ ‘ಬಿಜೆಪಿಯ ಮನಸ್ಥಿತಿ ಏನು? ಎಂಬುದು ಗಮನಕ್ಕೆ ಬರುತ್ತದೆ. ನೆಹರೂ ಅವರ ತೈಲ್ವರ್ಣ ಚಿತ್ರವನ್ನು ಮತ್ತೊಮ್ಮೆ ಅದೇ ಜಾಗದಲ್ಲಿ ಹಾಕಬೇಕು, ಇಲ್ಲದಿದ್ದರೆ ನಾವು ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.