ದೇಶದಲ್ಲಿ 10 ಲಕ್ಷ, ಮಹಾರಾಷ್ಟ್ರದ 70 ಸಾವಿರ ದೇವಾಲಯಗಳಲ್ಲಿ ಸಮಾರಂಭವನ್ನು ನೇರ ಪ್ರಸಾರ !

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಮೆ ಸ್ಥಾಪನೆ ಸಮಾರಂಭ !

ಮುಂಬಯಿ – ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗುವುದು. ಈ ಸಂದರ್ಭದಲ್ಲಿ ದೇಶದ 10 ಲಕ್ಷ ದೇವಸ್ಥಾನಗಳಲ್ಲಿ ಹಾಗೂ ಮಹಾರಾಷ್ಟ್ರದ 70 ಸಾವಿರ ದೇವಸ್ಥಾನಗಳಲ್ಲಿ ಸಮಾರಂಭದ ನೇರ ಪ್ರಸಾರ ನಡೆಯಲಿದೆ. ಇದಕ್ಕಾಗಿ ದೇವಾಲಯಗಳಲ್ಲಿ ದೊಡ್ಡ ಪರದೆಗಳನ್ನು ಅಳವಡಿಸಲಾಗುವುದು. ಇದು ರಾಷ್ಟ್ರೀಯ ಸ್ವಯಂಸೇವಕ ಸಂಘದ ದೇವಗಿರಿ ಪ್ರದೇಶದ (ಮರಾಠವಾಡ, ಖಾಂದೇಶ್) 20 ಸಾವಿರ ದೇವಾಲಯಗಳನ್ನು ಒಳಗೊಂಡಿದೆ. ಅಲ್ಲದೆ ದೇವಸ್ಥಾನಗಳಲ್ಲಿ ದೀಪೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಗಿರಿ ಪ್ರಾಂತ್ಯದ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಸಂಜಯ ಬಾರಗಜೆ ತಿಳಿಸಿದ್ದಾರೆ. ‘ವಿಹಿಂಪನ ಮಂದಿರ ಮತ್ತು ಅರ್ಚಕ ಪುರೋಹಿತ್ ಸಂಪರ್ಕ ಆಯಾಮ’ದ ವತಿಯಿಂದ ಈ ಕಾರ್ಯಕ್ರಮವನ್ನು ಯೋಜಿಸಲಾಗಿದೆ. ಎಲ್ಲ ದೇವಸ್ಥಾನಗಳನ್ನು ಸಂಪರ್ಕಿಸಿ ಮಾಹಿತಿ ನೀಡಲಾಗುತ್ತಿದೆ. ದೇಶಾದ್ಯಂತ ವಿಹಿಂಪ ವತಿಯಿಂದ ಸಭೆಗಳು ನಡೆಯುತ್ತಿವೆ. ದೇವಸ್ಥಾನಗಳಲ್ಲಿ 3 ಗಂಟೆಗಳ ಕಾಲ ರಾಮನಾಮ ಪಠಣ, ಆರತಿ, ಪ್ರಸಾದ ವಿತರಣೆ ಕಾರ್ಯಕ್ರಮವೂ ನಡೆಯಲಿದೆ.

1. ವಿಹಿಂಪನ ‘ದೇವಸ್ಥಾನ ಅರ್ಚಕ ಪುರೋಹಿತ್ ಆಯಾಮ’ದ ಸಂಭಾಜಿನಗರ ನಗರ ಮುಖ್ಯಸ್ಥ ರಾಜೀವ ಜಾಗೀರದಾರ್ ಮಾತನಾಡಿ, ಈ ಸಂದರ್ಭದಲ್ಲಿ ದೇವಸ್ಥಾನವನ್ನು ಬೆಳಗಿಸಬೇಕು ಮತ್ತು ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಕನಿಷ್ಠ 5 ದೀಪಗಳನ್ನು ಬೆಳಗಿಸಬೇಕು ಎಂದು ಹೇಳಿದರು.

2. ಸಮಾರಂಭವನ್ನು ಛತ್ರಪತಿ ಸಂಭಾಜಿನಗರದ 2 ಸಹಸ್ರ ದೇವಾಲಯಗಳಲ್ಲಿ ‘ಸ್ಕ್ರೀನ್’ ಮೂಲಕ ನೇರ ಪ್ರಸಾರ ಮಾಡಲಾಗುತ್ತದೆ. ವಿಹಿಂಪನ ಪದಾಧಿಕಾರಿಗಳು ಎಲ್ಲಾ ದೇವಸ್ಥಾನಗಳ ಟ್ರಸ್ಟಿಗಳನ್ನು ಭೇಟಿ ಮಾಡಿ ಯೋಜನೆ ಕುರಿತು ಮಾಹಿತಿ ನೀಡುತ್ತಿದ್ದಾರೆ.

3. ದೇಶದ 4 ಸಾವಿರ ಹಾಗೂ ದೇವಗಿರಿ ಪ್ರದೇಶದ 70 ಸಂತರು ಅಯೋಧ್ಯೆಗೆ ತೆರಳಲಿದ್ದಾರೆ. ಅದಕ್ಕಾಗಿ ಸಂತರನ್ನು ಆಹ್ವಾನಿಸಲಾಗಿದೆ. ಇದರಲ್ಲಿ ರಾಮಕೃಷ್ಣ ದೇವಸ್ಥಾನದ ವಿಷ್ಣುಪಾದಾನಂದ ಮಹಾರಾಜ, ಮಠದ ಬಾಲಗಿರಿ ಮಹಾರಾಜ್, ಅಮಳನೆರದ ಪ್ರಸಾದ ಮಹಾರಾಜ, ಅಚ್ಯುತ್ ಮಹಾರಾಜ ದಸ್ತಪುರಕರ್, ಶಾಂತಿಗಿರಿ ಮಹಾರಾಜ್ ಸೇರಿದ್ದಾರೆ. ಎಲ್ಲಾ ಸಂತರು ತಮ್ಮ ಸ್ವಂತ ಖರ್ಚಿನಲ್ಲಿ ಅಯೋಧ್ಯೆಗೆ ಹೋಗುತ್ತಾರೆ. ರಾಜ್ಯದಲ್ಲಿ ಪುಣ್ಯ ಸ್ಮರಣಿಕೆ ವಿತರಣೆ ಅಂತಿಮ ಹಂತ ತಲುಪಿದೆ.