ಸರಕು ಸಾಗಾಣಿಕೆ ನೌಕೆಯ ಅಪಹರಣದ ಪ್ರಯತ್ನ ವಿಫಲಗೊಳಿಸಿದ ಭಾರತೀಯ ನೌಕಾದಳ !

ನವ ದೆಹಲಿ – ಭಾರತೀಯ ನೌಕಾದಳವು ಅರಬಿ ಸಮುದ್ರದಲ್ಲಿನ ಮಾಲ್ಟ ದೇಶದ ಸರಕು ಸಾಗಾಣಿಕೆ ನೌಕೆಯ ಅಪಹರಣದ ಪ್ರಯತ್ನ ವಿಫಲಗೊಳಿಸಿತು. ಭಾರತೀಯ ನೌಕಾದಳದಿಂದ ತಕ್ಷಣ ಕ್ರಮ ಕೈಗೊಳ್ಳುತ್ತಾ ಸಮುದ್ರದಲ್ಲಿನ ಕಾರ್ಯ ಚಟುವಟಿಕೆಯ ಮೇಲೆ ಗಮನ ಇರಿಸುವ ವಿಮಾನ ಮತ್ತು ಒಂದು ಸಮೀಕ್ಷಾ ವಿರೋಧಿ ಗಸ್ತು ಯುದ್ಧ ನೌಕೆ ಘಟನಾ ಸ್ಥಳಕ್ಕೆ ಕಳುಹಿಸಿತು ಮತ್ತು ಮಾಲ್ಟಾದ ನೌಕೆಗೆ ರಕ್ಷಣೆ ನೀಡಿತು. ಭಾರತೀಯ ನೌಕಾದಳ ಈ ಸರಕು ಸಾಗಾಣಿಕೆ ನೌಕೆಯ ಕಾರ್ಯ ಚಟುವಟಿಕೆಯ ಮೇಲೆ ಗಮನ ಇರಿಸಿದೆ. ಈಗ ಈ ನೌಕೆ ಸೋಮಾಲಿಯಾದ ತೀರದ ಕಡೆಗೆ ಹೋಗುತ್ತಿದೆ.

ಭಾರತೀಯ ನೌಕಾದಳವು, ಮಾಲ್ಟಾದಿಂದ ಹೊರಟಿರುವ ಸರಕು ಸಾಗಾಣಿಕೆ ನೌಕೆಯಲ್ಲಿ ೧೮ ಸಿಬ್ಬಂದಿ ಇದ್ದರು. ಈ ಸಿಬ್ಬಂದಿ ಡಿಸೆಂಬರ್ ೧೪ ರಂದು ಯುನೈಟೆಡ್ ಕಿಂಗ್ಡಂ ಮೆರಿಟೈಮ್ ಟ್ರೇಡ್ ಆಪರೇಷನ್ಸ್’ ಈ ಪೋರ್ಟಲ್ ಮೇಲೆ ೬ ಅಜ್ಞಾತರು ಅವರ ನೌಕೆಯನ್ನು ಬೆಂಬತ್ತಿದ್ದಾರೆ ಎಂದು ಸಂದೇಶ ಕಳುಹಿಸಿತು. ಈ ಮಾಹಿತಿಯ ಆಧಾರದ ಮೇಲೆ ತಕ್ಷಣ ಕ್ರಮ ಕೈಗೊಳ್ಳುತ್ತಾ ಭಾರತೀಯ ನೌಕಾದಳದಿಂದ ಮಾಲ್ಟ ನೌಕೆಗೆ ಸಹಾಯಕ್ಕಾಗಿ ಅದರ ನಿರೀಕ್ಷಣಾ ವಿಮಾನ ಕಳುಹಿಸಿತು ಮತ್ತು ಸರಕು ಸಾಗಾಣಿಕೆ ನೌಕೆಗೆ ತಕ್ಷಣ ರಕ್ಷಣೆ ಪೂರೈಸಿತು

(ಸೌಜನ್ಯ: Hindustan Times)