ರಾಂಚಿ (ಜಾರ್ಖಂಡ್) – ಡಿಸೆಂಬರ್ 6 ರಿಂದ, 3 ರಾಜ್ಯಗಳಲ್ಲಿ ಕಾಂಗ್ರೆಸ್ ಸಂಸದ ಧೀರಜ್ ಸಾಹು ಮತ್ತು ಅವರ ಸಂಬಂಧಿಕರು ಮತ್ತು ಸ್ನೇಹಿತರ 10 ಕ್ಕೂ ಹೆಚ್ಚು ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದೆ. ಇದರಲ್ಲಿ ಇದುವರೆಗೆ 300 ಕೋಟಿ ರೂಪಾಯಿಗೂ ಹೆಚ್ಚು ನಗದು ಪತ್ತೆಯಾಗಿದ್ದು, ನೋಟುಗಳ ಎಣಿಕೆ ಕಾರ್ಯ ಮುಂದುವರಿದಿದೆ. ಈ ಮೊತ್ತ 500 ಕೋಟಿ ರೂಪಾಯಿ ವರೆಗೆ ಏರಬಹುದು ಎನ್ನಲಾಗಿದೆ. ಈ ನೋಟುಗಳ ಎಣಿಕೆ ವೇಳೆ ಇಲ್ಲಿಯವರೆಗೆ 4 ನೋಟು ಎಣಿಕೆ ಯಂತ್ರಗಳು ತುಂಡಾಗಿವೆ. ಈ ಕಾರಣಕ್ಕಾಗಿ, ದೊಡ್ಡ ಎಣಿಕೆಯಂತ್ರವನ್ನು ತರಿಸಲಾಗುತ್ತಿದೆ. ಧೀರಜ್ ಸಾಹು ಅವರು ‘ಬಲದೇವ್ ಸಾಹು ಸನ್ಸ್ ಅಂಡ್ ಗ್ರೂಪ್’ ಎಂಬ ಮದ್ಯ ತಯಾರಿಕಾ ಕಂಪನಿಯೊಂದಿಗೆ ಸಂಬಂಧ ಹೊಂದಿದ್ದಾರೆ. ಈ ಕಂಪನಿಯು ಒರಿಸ್ಸಾದಲ್ಲಿ 250 ಕ್ಕೂ ಹೆಚ್ಚು ಮದ್ಯದಂಗಡಿಗಳನ್ನು ಹೊಂದಿದೆ. ಆದಾಯ ತೆರಿಗೆ ಇಲಾಖೆಯ ದಾಳಿಯ ನಂತರ, ಬೋಲಂಗಿರ್ ಜಿಲ್ಲೆಯಲ್ಲಿ ಈ ಸಂಸ್ಥೆಯ 42 ಅಂಗಡಿಗಳನ್ನು ಮುಚ್ಚಲಾಗಿದೆ ಮತ್ತು ಆದಾಯ ತೆರಿಗೆ ಇಲಾಖೆಯು ತಮ್ಮನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುತ್ತದೆ ಎಂದು ಹೆದರಿ ಅದರಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರು ಪರಾರಿಯಾಗಿದ್ದಾರೆ.
ಸಂಪಾದಕೀಯ ನಿಲುವುಇಂತಹ ಭ್ರಷ್ಟ ಸಂಸದರಿಂದ ತುಂಬಿರುವ ಕಾಂಗ್ರೆಸ್ ಮೇಲೆ ನಿಷೇಧ ಹೇರಿ ! |