`ನನ್ನ ಕೈಯಲ್ಲಿ ಇದ್ದರೆ, ನಾನು ವಿಧಾನಸಭೆಯಿಂದ ಸಾವರ್ಕರ ಅವರ ಛಾಯಾಚಿತ್ರಗಳನ್ನು ತೆಗೆದುಹಾಕುತ್ತಿದ್ದೆ !'(ಅಂತೆ)

ಸ್ವಾತಂತ್ರವೀರ ಸಾವರ್ಕರ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರ ದ್ವೇಷದ ಹೇಳಿಕೆ !

ಬೆಂಗಳೂರು – ನನ್ನ ಕೈಯಲ್ಲಿ ಇದ್ದರೆ, ನಾನು ವಿಧಾನಸಭೆಯಿಂದ ಸಾವರ್ಕರ ಅವರ ಭಾವಚಿತ್ರವನ್ನು ತೆಗೆದು ಹಾಕುತ್ತಿದ್ದೆ. ಸಾವರಕರ ಖಂಡಿತವಾಗಿಯೂ ಶೂರರಾಗಿರಲಿಲ್ಲ. ಈ ಬಗ್ಗೆ ನಾನು ಸವಾಲು ಎದುರಿಸಲು ಸಿದ್ಧನಿದ್ದೇನೆ ಎಂದು ಕಾಂಗ್ರೆಸ್ ಮುಖಂಡ ಮತ್ತು ಸಚಿವ ಪ್ರಿಯಾಂಕ ಖರ್ಗೆ ಇವರು ಕಾಂಗ್ರೆಸ್ಸಿನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಖರ್ಗೆ ತಮ್ಮ ಮಾತನ್ನು ಮುಂದುವರಿಸಿ, ಸಾವರ್ಕರರಿಗೆ `ವೀರ ‘ಎಂಬ ಬಿರುದು ಹೇಗೆ ಬಂತು ? ಎಂದು ಬಿಜೆಪಿಯೇ ಹೇಳಬೇಕು. ಸಾವರ್ಕರ್‌ಗೆ `ವೀರ’ ಎಂಬ ಬಿರುದು ಯಾರು ಕೊಟ್ಟರು ? ‘ಸಾವರರ್ಕರ ಬ್ರಿಟಿಷರಿಂದ ನಿವೃತ್ತಿ ವೇತನ (ಪೆನ್ಷನ್) ತೆಗೆದುಕೊಳ್ಳುತ್ತಿರಲಿಲ್ಲ’ ಎಂದು ಬಿಜೆಪಿ ಹೇಳುವುದೇ ? (ಮೋಹನ್ ದಾಸ್ ಕರಮಚಂದ್ ಗಾಂಧಿಗೆ ‘ಮಹಾತ್ಮ’ ಎಂದು ಬಿರುದು ಯಾರು ಕೊಟ್ಟವರು ?, ಇದನ್ನು ಕಾಂಗ್ರೆಸ್ ಹೇಳಬೇಕು ! – ಸಂಪಾದಕರು) 

ಪ್ರಿಯಾಂಕ ಖರ್ಗೆಯವರ ಹೇಳಿಕೆಗೆ ಕಾಂಗ್ರೆಸ ನಾಯಕ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಸಾವರ್ಕರರ ಸ್ವಾತಂತ್ರ್ಯ ಹೋರಾಟದಲ್ಲಿ ಕೊಡುಗೆ ಶೂನ್ಯವಾಗಿದೆ. ಭಾಜಪ ಅಧಿಕಾರಕ್ಕೆ ಬಂದ ನಂತರ ಕರ್ನಾಟಕ ವಿಧಾನಸಭೆಯಲ್ಲಿ ಸಾವರಕರ ಅವರ ಫೋಟೋ ಹಾಕಲಾಯಿತು. ಭಾಜಪ ಇತಿಹಾಸ ಬದಲಿಸಲು ಬಯಸುತ್ತಿದೆ. (ಭಾಜಪ ಅಲ್ಲ, ಕಾಂಗ್ರೆಸ್ಸಿಗೆ ಇತಿಹಾಸವನ್ನು ಬದಲಾಯಿಸುವುದಿದೆ. ಅದೀಗ ಅದನ್ನು ಸರಿಪಡಿಸಲು ಪ್ರಯತ್ನಿಸಬೇಕಾಗಿದೆ ! – ಸಂಪಾದಕರು) 

ಸಾವರ್ಕರ ಅವರ ಫೋಟೋ ತೆಗೆದು ಹಾಕುವುದನ್ನು ನಾವು ಬಲವಾಗಿ ವಿರೋಧಿಸುತ್ತೇವೆ ! – ಭಾಜಪ

ಪ್ರಿಯಾಂಕ ಖರ್ಗೆಯವರ ಬಳಿ ತಪ್ಪು ಮಾಹಿತಿಯಿದೆ; ಆದರೆ ಅವರಿಗೆ, ತಾವು ವಿದ್ಯಾವಂತ ಜನರಲ್ಲಿ ಒಬ್ಬರಾಗಿದ್ದಾರೆ ಎಂದು ಅನಿಸುತ್ತದೆ. ವೀರ ಸಾವರ್ಕರ ಅವರ ಛಾಯಾಚಿತ್ರವನ್ನು ವಿಧಾನಸಭೆಯಿಂದ ತೆಗೆದು ಹಾಕುವುದನ್ನು ನಾವು ಬಲವಾಗಿ ವಿರೋಧಿಸುತ್ತೇವೆ ಎಂದು ಭಾಜಪ ಶಾಸಕ ಭರತ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

ನಮ್ಮಬಳಿ ಛಾಯಾಚಿತ್ರವನ್ನು ತೆಗೆಯುವ ಪ್ರಸ್ತಾಪವಿಲ್ಲ ! – ವಿಧಾನಸಭೆ ಅಧ್ಯಕ್ಷ

ವಿಧಾನಭೆಯ ಅಧ್ಯಕ್ಷ ಯು.ಟಿ. ಖಾದರ ಇವರು, ವಿಧಾನಸಭೆಯ ಸಭಾಂಗಣದಿಂದ ಹಿಂದುತ್ವದ ಚಿಂತಕ ವಿನಾಯಕ ಸಾವರ್ಕರ ಅವರ ಛಾಯಾಚಿತ್ರ ತೆಗೆಯುವ ವಿಷಯದ ಬಗ್ಗೆ ಯಾವುದೇ ಪ್ರಸ್ತಾಪ ಇದುವರೆಗೂ ಬಂದಿಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

ಕಾಂಗ್ರೆಸ್ ಸ್ವಾತಂತ್ರ್ಯವೀರ ಸಾವರ್ಕರ ಅವರನ್ನು ಎಷ್ಟೇ ದ್ವೇಷಿಸಿದರೂ ಅವರ ಮಹತ್ವ ಕಡಿಮೆಯಾಗುವುದಿಲ್ಲ. ಬದಲಾಗಿ, ಕಳೆದ 75 ವರ್ಷಗಳಲ್ಲಿ, ಕಾಂಗ್ರೆಸ್ ಮಾತ್ರ ರಾಜಕೀಯ ದೃಷ್ಟಿಯಿಂದ ಕೊನೆಗೊಳ್ಳುವತ್ತ ಅತ್ಯಂತ ವೇಗವಾಗಿ ಸಾಗುತ್ತಿದೆ !