ನವ ದೆಹಲಿ – ಲೋಕಸಭೆಯಲ್ಲಿ, ಕೇಂದ್ರ ಗೃಹ ಸಚಿವ ಅಮಿತ ಶಹಾ ಅವರು ಕಾಶ್ಮೀರ ವಿಧಾನಸಭೆಯಲ್ಲಿ ಸ್ಥಳಾಂತರಗೊಂಡ ಕಾಶ್ಮೀರಿ ಹಿಂದೂಗಳಿಗೆ 2 ಸ್ಥಾನಗಳು ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಸ್ಥಳಾಂತರಗೊಂಡ ಜನರಿಗೆ 1 ಸ್ಥಾನವನ್ನು ನಾಮನಿರ್ದೇಶನ ಮಾಡುವ 2 ಮಸೂದೆಗಳನ್ನು ಮಂಡಿಸಲಾಯಿತು. ಕಾಶ್ಮೀರದ 2 ಸ್ಥಾನಗಳಲ್ಲಿ ಒಂದು ಸ್ಥಾನ ಮಹಿಳೆಯರಿಗೆ ಇರುವುದು ಕಡ್ಡಾಯವಾಗಿದೆ. ಇದಲ್ಲದೇ ರಾಜ್ಯದ 90 ಸದಸ್ಯ ಬಲದ ವಿಧಾನಸಭೆಯಲ್ಲಿ ಪರಿಶಿಷ್ಟ ಜಾತಿಗೆ 9 ಸ್ಥಾನಗಳನ್ನು ಮೀಸಲಿಡುವ ನಿಬಂಧನೆ ಇದೆ.
Speaking in the Lok Sabha on two landmark bills related to the Jammu and Kashmir. https://t.co/w4PqoAsiZX
— Amit Shah (@AmitShah) December 6, 2023
ಸಂಪಾದಕರ ನಿಲುವು* ಇದರೊಂದಿಗೆ ಕಾಶ್ಮೀರಿ ಹಿಂದೂಗಳಿಗೆ ಕಾಶ್ಮೀರದಲ್ಲಿ ಸುರಕ್ಷಿತ ಪುನರ್ವಸತಿ ಕಲ್ಪಿಸುವ ಆವಶ್ಯಕತೆಯಿದೆ ! |