Ishwar Sahoo : ಮತಾಂಧರ ಹಿಂಸಾಚಾರಕ್ಕೆ ಬಲಿಯಾದ ಯುವಕನ ತಂದೆ ಬಿಜೆಪಿ ಟಿಕೆಟ್‌ನಲ್ಲಿ ಗೆದ್ದರು !

ಆರು ಬಾರಿ ಶಾಸಕರಾಗಿದ್ದ ಮಾಜಿ ಸಚಿವರನ್ನು ಸೋಲಿಸಿದರು !

ರಾಯಪುರ – ಛತ್ತೀಸ್‌ಗಢದ ಸಾಜಾ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಈಶ್ವರ್ ಸಾಹು ಗೆಲುವು ಸಾಧಿಸಿದ್ದಾರೆ. ಸಾಹು ಇವರು ಭುವನೇಶ್ವರ ಸಾಹು ಈ 22 ವರ್ಷದ ಯುವಕನ ತಂದೆಯಾಗಿದ್ದೂ ಬೆಮೆತಾರಾ ಜಿಲ್ಲೆಯ ಬಿರಾನ್‌ಪುರ ಗ್ರಾಮದಲ್ಲಿ ಮತಾಂಧ ಮುಸ್ಲಿಂ ಗುಂಪಿನ ದಾಳಿಯಲ್ಲಿ ಸಾವನ್ನಪ್ಪಿದರು. ಈ ಕ್ಷೇತ್ರದಲ್ಲಿ ಸಾಹು ಅವರು ಕಾಂಗ್ರೆಸ್‌ನ ರವೀಂದ್ರ ಚೌಬೆ ವಿರುದ್ಧ ಸೆಣಸುತ್ತಿದ್ದರು. ಚೌಬೆ ಅವರು ಭೂಪೇಶ್ ಬಘೇಲ್ ಅವರ ಸರಕಾರದಲ್ಲಿ ಆರು ಬಾರಿ ಶಾಸಕ ಮತ್ತು ಸಚಿವರಾಗಿದ್ದರು.

ಸೀತಾಪುರದಲ್ಲಿ ಕಾಂಗ್ರೆಸ್ ಸಚಿವರನ್ನು ಸೋಲಿಸಿದ ಮಾಜಿ ಸೈನಿಕ !

ಛತ್ತೀಸ್ ಗಢ ವಿಧಾನಸಭಾ ಚುನಾವಣೆಯಲ್ಲಿ ಸುರ್ಗುಜಾ ಜಿಲ್ಲೆಯ ಸೀತಾಪುರ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ನ ಅಮರ್ ಜಿತ್ ಭಗತ್ ಅವರನ್ನು ಸೋಲಿಸಿದ ಬಿಜೆಪಿಯ ರಾಮ ಕುಮಾರ ಟೊಪ್ಪೋ ಸುದ್ದಿಯಲ್ಲಿದ್ದಾರೆ. 36 ವರ್ಷದ ಟೊಪ್ಪೊ ಅವರು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಕ್ಷಿಪ್ರ ಕಾರ್ಯಾಚರಣೆ ಪಡೆಯಲ್ಲಿ ‘ಹೆಡ್ ಕಾನ್‌ಸ್ಟೆಬಲ್’ ಆಗಿ ನೇಮಕಗೊಂಡಿದ್ದರು. ಹಲವಾರು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದ ರಾಮಕುಮಾರ ಟೊಪ್ಪೊ ಅವರಿಗೆ ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶೌರ್ಯಕ್ಕಾಗಿ ಪೊಲೀಸ್ ಪದಕವನ್ನು ನೀಡಿ ಸನ್ಮಾನಿಸಿದ್ದರು. ಟೊಪ್ಪೊ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಬಿಜೆಪಿ ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು. ಬಘೆಲ್ ಸರಕಾರದಲ್ಲಿ ಆಹಾರ ಸಚಿವರಾಗಿದ್ದ ಅಮರ್ಜಿತ್ ಭಗತ್ ಅವರನ್ನು 16 ಸಾವಿರದ 954 ಮತಗಳಿಂದ ಟೊಪ್ಪೋ ಸೋಲಿಸಿದರು. ಭಗತ್ ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.