ಜಾರ್ಖಂಡ್ ಸ್ಕೂಲ್ ಬುರಖಾ : ಮತಾಂಧ ಮುಸ್ಲಿಮರಿಂದ ಶಾಲಾ ಮುಖ್ಯೋಪಾಧ್ಯಾಯರಿಗೆ ಜೀವ ಬೆದರಿಕೆ

  • ಶೇಖಪುರಾ (ಝಾರಖಂಡ) ಇಲ್ಲಿ ನಡೆದ ಘಟನೆ !

  • ಶಾಲೆಯಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯರಿಗೆ ಬುರಖಾ ಮತ್ತು ಹಿಜಾಬ್ ಧರಿಸಿಕೊಂಡು ಬರಬೇಡಿರಿ ಎಂದು ಹೇಳಿರುವುದರ ಪರಿಣಾಮ !


ಶೇಖಪುರಾ (ಬಿಹಾರ) – ಇಲ್ಲಿಯ ಉನ್ನತ ಮಧ್ಯ ವಿದ್ಯಾಲಯದ ಚರುವಾ ಶಾಲೆಯ ಮುಖ್ಯೋಪಾಧ್ಯಾಯ ಸತ್ಯೇಂದ್ರ ಚೌಧರಿ ಅವರು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಬುರಖಾ ಮತ್ತು ಹಿಜಾಬ್‌ಗಳ ಬದಲಿಗೆ ಶಾಲಾ ಸಮವಸ್ತ್ರವನ್ನು ಧರಿಸಿಕೊಂಡು ಬರುವಂತೆ ಹೇಳಿದ ನಂತರ ಹೆಚ್ಚಿನ ಸಂಖ್ಯೆಯ ಮತಾಂಧ ಮುಸ್ಲಿಮರು ಶಾಲೆಗೆ ನುಗ್ಗಿದ್ದಾರೆ. ಅವರು ಚೌಧರಿಯವರಿಗೆ ಶಾಲೆಗೆ ಬೀಗ ಹಾಕಿ ಚೌಧರಿಯನ್ನು ಕೊಲ್ಲುವ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಮುಖ್ಯೋಪಾಧ್ಯಾಪಕ ಚೌಧರಿ ಅವರು ಜಿಲ್ಲಾ ಶಿಕ್ಷಣಾಧಿಕಾರಿ ಹಾಗೂ ಇತರ ಅಧಿಕಾರಿಗಳಿಗೆ ಪತ್ರ ಬರೆದು ಭದ್ರತೆ ನೀಡುವಂತೆ ಆಗ್ರಹಿಸಿದ್ದಾರೆ. ಮತ್ತೊಂದೆಡೆ ಶಿಕ್ಷ ಣ ಸಂಘವು, ಮುಖ್ಯೋಪಾಧ್ಯಾಪಕರು ಸೇರಿದಂತೆ ಶಾಲೆಯ ರಕ್ಷಣೆಗೆ ಕೂಡಲೇ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಈ ವೇಳೆ ಜಿಲ್ಲಾ ಶಿಕ್ಷಣಾಧಿಕಾರಿ ಓಂ ಪ್ರಕಾಶ್ ಸಿಂಗ್ ಮಾತನಾಡಿ, ಇದೊಂದು ಗಂಭೀರ ವಿಷಯವಾಗಿದ್ದು, ವಿದ್ಯಾರ್ಥಿನಿಯರು ಶಾಲಾ ಸಮವಸ್ತ್ರವನ್ನು ಧರಿಸಿಯೇ ಬರಬೇಕು. ಈ ಕುರಿತು ತನಿಖೆ ನಡೆಸುವಂತೆ ಸ್ಥಳೀಯ ಶಿಕ್ಷಣ ಪ್ರಾಧಿಕಾರಕ್ಕೆ ಆದೇಶ ನೀಡಲಾಗಿದೆ. ಇಲ್ಲಿನ ಅಧಿಕಾರಿ ರಮೇಶ್ ಪ್ರಸಾದ್ ಅವರನ್ನು ಉಭಯ ಪಕ್ಷಗಳ ನಡುವೆ ಸಭೆ ನಡೆಸುವಂತೆ ಹೇಳಲಾಗಿದೆ. ಇದಾದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಮುಖ್ಯೋಪಾಧ್ಯಾಪಕರಾಗಿರುವ ಚೌಧರಿ ಅವರ ಭದ್ರತೆ ಕುರಿತು ಆಡಳಿತದೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಬಿಹಾರದಲ್ಲಿ ರಾಜದ್ ಮತ್ತು ಜನತಾದಳ (ಸಂಯುಕ್ತ) ಮೈತ್ರಿ ಸರಕಾರ ಇರುವುದರಿಂದ ಮತಾಂಧ ಮುಸ್ಲಿಮರ ವಿರುದ್ಧ ಕಠಿಣ ಕ್ರಮಗಳಾಗುವ ಯಾವುದೇ ಸಾಧ್ಯತೆಗಳಿಲ್ಲದಿರುವುದರಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ. ನಾಳೆ ಹಿಂದೂ ವಿದ್ಯಾರ್ಥಿನಿಯರನ್ನು ಕೂಡ ಹಿಜಾಬ್ ಧರಿಸಲು ಒತ್ತಾಯಿಸಿದರೆ ಆಶ್ಚರ್ಯ ಪಡಬಾರದು !
ಶಾಲೆಯ ನಿಯಮಗಳನ್ನು ಪಾಲಿಸದ ಅಂತಹ ವಿದ್ಯಾರ್ಥಿನಿಯರನ್ನು ಶಾಲೆಯಿಂದ ತೆಗೆದುಹಾಕುವ ಧೈರ್ಯವನ್ನು ತೋರಿಸುವ ಆವಶ್ಯಕತೆಯಿದೆ !

ಮುಸ್ಲಿಂ ಬಹುಸಂಖ್ಯಾತವಿರುವ ಜಮ್ಮು-ಕಾಶ್ಮೀರದ ‘ಎನ್.ಐ.ಟಿ. ಶ್ರೀನಗರ’ ವಿಶ್ವವಿದ್ಯಾಲಯದಲ್ಲಿ, ಓರ್ವ ಹಿಂದೂ ವಿದ್ಯಾರ್ಥಿಯನ್ನು ಇಸ್ಲಾಂ ಧರ್ಮವನ್ನು ಅವಮಾನಿಸಿದ ಆರೋಪದ ಮೇಲೆ ಅಮಾನತ್ತುಗೊಳಿಸಲಾಗಿದೆ, ಆದರೆ ಹಿಂದೂ ಬಹುಸಂಖ್ಯಾತವಿರುವ ಝಾರಖಂಡನಲ್ಲಿ ಮುಖ್ಯೋಧ್ಯಾಪಕರನ್ನು ಕೊಲ್ಲುವ ಬೆದರಿಕೆ ಹಾಕಿದವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ, ಎನ್ನುವುದು ಹಿಂದೂಬಹುಸಂಖ್ಯಾತವಿರುವ ಭಾರತಕ್ಕೆ ನಾಚಿಕೆಗೇಡಿನ ಸಂಗತಿ !