ಅಗರ್ತಲಾ (ತ್ರಿಪುರ) – ತ್ರಿಪುರಾದ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಈ ವರ್ಷ ಒಟ್ಟು 716 ನುಸುಳುಕೋರರನ್ನು ಬಂಧಿಸಲಾಗಿದೆ ಎಂದು ಗಡಿ ಭದ್ರತಾ ಪಡೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರಲ್ಲಿ 112 ರೋಹಿಂಗ್ಯಾ ಮುಸ್ಲಿಮರು ಮತ್ತು 319 ಬಾಂಗ್ಲಾದೇಶಿ ನುಸುಳುಕೋರರು ಸೇರಿದ್ದಾರೆ. ಗಡಿ ಭದ್ರತಾ ಪಡೆ ಇತ್ತೀಚೆಗೆ ತನ್ನ 59 ನೇ ಸಂಸ್ಥಾಪನಾ ದಿನವನ್ನು ಆಚರಿಸಿತು. ಈ ಸಂದರ್ಭದಲ್ಲಿ ತ್ರಿಪುರಾದ ಪ್ರಧಾನ ಕಛೇರಿಯಲ್ಲಿ ಗಡಿ ಭದ್ರತಾ ಪಡೆಯ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ ಆರ್.ಕೆ. ಸಿಂಗ್ ಇವರು, ‘ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಗಡಿಯಲ್ಲಿ ಗಡಿ ಭದ್ರತಾ ಪಡೆ ಕಾವಲು ಕಾಯುತ್ತಿದೆ. ಪರಿಣಾಮವಾಗಿ, ಅವರು 2023 ರಲ್ಲಿ ನುಸುಳುತ್ತಿದ್ದ 112 ರೋಹಿಂಗ್ಯಾ ಮುಸ್ಲಿಮರು, 319 ಬಾಂಗ್ಲಾದೇಶಿ ನುಸುಳುಕೋರರು ಮತ್ತು 285 ಭಾರತೀಯರನ್ನು ಹಿಡಿದಿದ್ದಾರೆ. ಈ ವರ್ಷವೂ ಗಡಿ ಭದ್ರತಾ ಪಡೆ 23 ಕೋಟಿ 12 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದೆ. ಭಾರತದ ಈಶಾನ್ಯ ರಾಜ್ಯ ಬಾಂಗ್ಲಾದೇಶದಿಂದ 856 ಕಿ.ಮೀ. ಉದ್ದದ ಗಡಿ ಮಿತಿ ಹೊಂದಿದೆ ಎಂದು ಹೇಳಿದರು.