ಭಾರತೀಯ ಸಸ್ಯಾಹಾರಿ ಆಹಾರವನ್ನು ಹೊಗಳಿದ ಅಂತರರಾಷ್ಟ್ರೀಯ ಖ್ಯಾತಿಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ !

ಅರ್ನಾಲ್ಡ್ ಡಿಕ್ಸ್

ಉತ್ತರಕಾಶಿ (ಉತ್ತರಾಖಂಡ) – ಆಸ್ಟ್ರೇಲಿಯಾದಿಂದ ಕರೆಸಿದ್ದ ಅಂತರಾಷ್ಟ್ರೀಯ ಖ್ಯಾತಿಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಅವರು 17 ದಿನಗಳ ನಂತರ ಇಲ್ಲಿನ ಸಿಲ್ಕ್ಯಾರಾ  ಸುರಂಗದಿಂದ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರ ತೆಗೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ಭಾರತೀಯ ಸಸ್ಯಾಹಾರಿ ಆಹಾರವನ್ನು ಮೆಚ್ಚಿದ್ದಾರೆ. ಡಿಸ್ಕ ಇವರು, ‘ಭಾರತೀಯ ಸಸ್ಯಾಹಾರಿ ಆಹಾರವು ತುಂಬಾ ರುಚಿಕರ ಮತ್ತು ಆರೋಗ್ಯಕರವಾಗಿದೆ. ನನಗೆ ಈಗ ಮನೆಗೆ ಹೋಗಲು ಇಚ್ಛೆ ಆಗುತ್ತಿಲ್ಲ’, ಎಂದು ಹೇಳಿದರು.

ನವೆಂಬರ್ 12 ರಿಂದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆಗಳು ನಡೆದವು. ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರಿಗೆ ಪೈಪ್‌ಲೈನ್ ಮೂಲಕ ಆಹಾರ, ನೀರು ಮತ್ತು ಔಷಧ ಪೂರೈಕೆ ಮಾಡಲಾಯಿತು. ಸುರಂಗದ ಹೊರಗೆ ಬೀಡುಬಿಟ್ಟಿದ್ದ ರಕ್ಷಣಾ ಕಾರ್ಯಕರ್ತರಿಗೆ ಆಹಾರದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಭಾರತೀಯ ಸಸ್ಯಾಹಾರಿ ಆಹಾರವನ್ನು ಅರ್ನಾಲ್ಡ್ ಡಿಕ್ಸ್ ರವರಿಗೂ ಸಹ ಕೊಡಲಾಯಿತು. ಮತ್ತು ಅವರು ಸಸ್ಯಾಹಾರಿ ಆಹಾರದ ಅಭಿಮಾನಿಯಾದರು. ’41 ಕಾರ್ಮಿಕರು ಸುರಕ್ಷಿತವಾಗಿ ಪಾರಾಗಿರುವುದು, ಇದು ಒಂದು ಪವಾಡವೇ ಆಗಿದೆ’,  ಎಂದು ಅರ್ನಾಲ್ಡ್ ಡಿಕ್ಸ್ ಹೇಳಿದ್ದರು.

(ಸೌಜನ್ಯ : Business Today)