ಮಾಂಸವನ್ನು ಹೊರತುಪಡಿಸಿ ಇತರ ಆಹಾರಗಳಿಗೆ ನೀಡುವ ‘ಹಲಾಲ್’ ಪ್ರಮಾಣಪತ್ರ ಇಸ್ಲಾಂ ವಿರೋಧಿ ! – ಮೌಲಾನಾ ಮುಫ್ತಿ ಶಹಾಬುದ್ದೀನ್ ರಝ್ವಿ ಬರೇಲವಿ

  • ‘ಆಲ್ ಇಂಡಿಯಾ ಮುಸ್ಲಿಂ ಜಮಾತ್’ ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಮುಫ್ತಿ ಶಹಾಬುದ್ದೀನ್ ರಝ್ವಿ ಬರೇಲವಿ ಅವರ ಸ್ಪಷ್ಟೋಕ್ತಿ !

  • ಹಲಾಲ್ ಮಂಡಳಿ ಸ್ಥಾಪಿಸಲು ಸರಕಾರಕ್ಕೆ ಮನವಿ !

ನವ ದೆಹಲಿ – ಕೇವಲ ಪ್ರಮಾಣಪತ್ರದ ಹೆಸರಿನಲ್ಲಿ ಒಂದು ಕಾಗದದ ತುಂಡು ನೀಡುವುದರಿಂದ ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ ಒಂದು ವಸ್ತುವನ್ನು ‘ಹಲಾಲ್’ (ಸೂಕ್ತ) ಅಥವಾ ‘ಹರಾಮ’ (ಅಯೋಗ್ಯ) ಎಂದು ಹೇಳಲು ಸಾಧ್ಯವಿಲ್ಲ. ಈ ರೀತಿಯ ಕೆಲಸ ಮಾಡುತ್ತಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳು ಅಪರಾಧಿಗಳಾಗಿದ್ದಾರೆ. ಮೊದಲನೆಯದಾಗಿ, ಅವರು ಇಸ್ಲಾಮಿಕ್ ಕಾನೂನಿಗೆ ವಿರುದ್ಧವಾಗಿ ವರ್ತಿಸಿದ್ದಾರೆ. ಅವರು ಒಂದು ಕಾಗದದ ತುಂಡು ಕೊಟ್ಟು ‘ಈ ವಸ್ತು ಹಲಾಲ್ ಆಗಿದೆ’, ಎಂದು ಹೇಳಿದ್ದಾರೆ. ಎರಡನೆಯದಾಗಿ, ಅವರು ಪ್ರಮಾಣಪತ್ರವನ್ನು ನೀಡದಿದ್ದರೆ, ಗ್ರಾಹಕರು ಸ್ವತಃ ಪರಿಶೀಲಿಸಿ, ವಸ್ತು ‘ಹಲಾಲ್’ ಅಥವಾ ‘ಹರಾಮ್’ ಆಗಿದೆಯೆಂದು ಕಂಡುಹಿಡಿಯುತ್ತಿದ್ದರು; ಆದರೆ, ಅಂತಹವರಿಗೆ ಪ್ರಮಾಣ ಪತ್ರ ನೀಡಿ ಜನರನ್ನು ವಂಚಿಸಲಾಗುತ್ತಿದೆ ಎಂದು ‘ಆಲ್ ಇಂಡಿಯಾ ಮುಸ್ಲಿಂ ಜಮಾತ್’ ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಮುಫ್ತಿ ಶಹಾಬುದ್ದೀನ್ ರಜ್ವಿ ಬರೇಲವಿ ಇವರು ಹಲಾಲ್ ಪ್ರಮಾಣ ಪತ್ರ ನೀಡುವ ಇಸ್ಲಾಮಿಕ್ ಸಂಸ್ಥೆಗಳನ್ನು ಟೀಕಿಸಿದರು. ಉತ್ತರ ಪ್ರದೇಶ ಸರ್ಕಾರವು ಹಲಾಲ್ ಉತ್ಪನ್ನಗಳು ಮತ್ತು ಅವುಗಳ ಪ್ರಮಾಣಪತ್ರಗಳನ್ನು ನಿಷೇಧಿಸಿದೆ. ಅವರಿಗೆ ನೀಡಲಾಗುತ್ತಿದ್ದ ಪ್ರಮಾಣಪತ್ರಗಳ ಮೇಲೆ ನಿರ್ಬಂಧ ಹಾಕಿದೆ. ಈ ಹಿನ್ನೆಲೆಯಲ್ಲಿ ಮೌಲಾನಾ ರಜ್ವಿ ಬರೇಲವಿ ಮಾತನಾಡುತ್ತಿದ್ದರು.

(ಸೌಜನ್ಯ – Uttar Pradesh Uttarakhand Daily)

ಮೌಲಾನಾ ರಜ್ವಿ ಬರೇಲವಿ ಮಂಡಿಸಿದ ಅಂಶಗಳು

1. ಯಾವ ಸಂಸ್ಥೆಗಳು ಈ ರೀತಿಯ ಪ್ರಮಾಣಪತ್ರಗಳನ್ನು ನೀಡುತ್ತಿವೆಯೋ, ಅವರು ಧರ್ಮದ ಹೆಸರಿನಲ್ಲಿ ಮುಸ್ಲಿಮರಿಗೆ ಮೋಸ ಮಾಡುತ್ತಿದ್ದಾರೆ. ಇದು ಅಲ್ಲಾಹನ ಹೆಸರಿನಲ್ಲಿ ನಡೆಯುವ ವ್ಯವಹಾರವಾಗಿದೆ. ಅಲ್ಲಾಹನ ಹೆಸರಿನಲ್ಲಿ ಆರಂಭಿಸಬಹುದಾದ ಇನ್ನೊಂದು ವ್ಯಾಪಾರ ಜಗತ್ತಿನಲ್ಲಿ ಇಲ್ಲ.

2. ಕೇವಲ ಮಾಂಸವನ್ನು ಮಾತ್ರ ‘ಹಲಾಲ್’ ಎಂದು ಪ್ರಮಾಣೀಕರಿಸಬಹುದು. ಬೇರೆ ವಿಷಯಗಳ ಮೇಲೆ ಹಲಾಲ್ ಮುದ್ರೆಯೊತ್ತಿದರೆ ಅದು ಒಳ್ಳೆಯ ಪದದ ದುರ್ಬಳಕೆಯಾಗುತ್ತದೆ. ಇಸ್ಲಾಮಿಕ್ ಕಾನೂನಿನ ಪ್ರಕಾರ, ಹಲಾಲ್ ಕೇವಲ ಪ್ರಾಣಿಗಳ ಮಾಂಸಕ್ಕಾಗಿ ಮಾತ್ರ ಉಪಯೋಗಿಸಲಾಗಿದೆ. ಇದಲ್ಲದೇ ಇತರೆ ವಸ್ತುಗಳು ಸೂಕ್ತವಾಗಿರಬಹುದು ಅಥವಾ ಅನುಚಿತವಾಗಿರಬಹುದು; ಆದರೆ ಅವುಗಳಿಗೆ ಹಲಾಲ್ ಮುದ್ರೆ ಹಾಕಬಾರದು.

3. ಕೆಲವು ಸಂಸ್ಥೆಗಳು ಹಲಾಲ್ ಪ್ರಮಾಣೀಕರಣವನ್ನು ವಾಣಿಜ್ಯೀಕರಣಗೊಳಿಸಲು ಪ್ರಾರಂಭಿಸಿವೆ. ಪ್ರತಿಯೊಂದು ವಿಷಯವನ್ನು ಹಲಾಲ್ ಪ್ರಮಾಣೀಕರಣಗೊಳಿಸಲು ಪ್ರಮಾಣಪತ್ರವನ್ನು ನೀಡಿ, ಅದನ್ನು ಉತ್ಪಾದನೆಯ ಮಾರ್ಗವನ್ನಾಗಿ ಮಾಡಿದ್ದಾರೆ. ಅವರು ಎಷ್ಟು ಮೇಲಿನ ಹಂತಕ್ಕೆ ತಲುಪಿದ್ದಾರೆಂದರೆ ತರಕಾರಿ, ಹಣ್ಣು, ಬಿಸ್ಕಿಟ ಮುಂತಾದವನ್ನು ತಿನ್ನುವ- ಕುಡಿಯುವ ವಸ್ತುವನ್ನೂ ಹಲಾಲ್ ಎಂದು ಪ್ರಮಾಣೀಕರಿಸುವವರೆಗೂ ಹೋದರು. ಮುಸ್ಲಿಂ ಸಂಸ್ಥೆಗಳು ಇಂತಹ ವಿಷಯಗಳನ್ನು ಮಾಡುವುದರಿಂದ ಸ್ವತಃ ತಮ್ಮನ್ನು ನಿಯಂತ್ರಿಸಿಕೊಳ್ಳಬೇಕು.

4. ಉತ್ತರ ಪ್ರದೇಶ ಸರಕಾರವು ಹಲಾಲ್ ಸಂದರ್ಭದಲ್ಲಿ ಒಂದು ಮಂಡಳಿಯನ್ನು ಸ್ಥಾಪಿಸಬೇಕು ಮತ್ತು ಇಸ್ಲಾಮಿಕ್ ಕಾನೂನಿನ ಪ್ರಕಾರ ಕೆಲಸ ಮಾಡಲು ಸಮರ್ಥರಾಗಿರುವ ಜನರಿಗೆ ಜವಾಬ್ದಾರಿಯನ್ನು ನೀಡಬೇಕು ಎಂದು ಹೇಳಿದರು.