ಅಕ್ಬರುದ್ದೀನ್ ಓವೈಸಿ ಇವರು ಅಸ್ಸಾಂನ ಪೊಲೀಸರಿಗೆ ಬೆದರಿಕೆ ನೀಡಿದ್ದರೆ, ೫ ನಿಮಿಷದಲ್ಲಿಯೇ ಲೆಕ್ಕ ಚುಕ್ತಾ ಮಾಡುತ್ತಿದ್ದೆವು ! – ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರ ಹೇಳಿಕೆ !

ಎಡದಿಂದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಮತ್ತು ಸರಮಾ ಕ್ಬರುದ್ದೀನ್ ಓವೈಸಿ

ಗುಹಾಟಿ (ಅಸ್ಸಾಂ) – ಎಂ.ಐ.ಎಂ.ನ ಮುಖಂಡ ಅಕ್ಬರುದ್ದೀನ್ ಓವೈಸಿ ಇವರು ತೆಲಂಗಾಣದ ರಾಜಧಾನಿ ಭಾಗ್ಯನಗರದಲ್ಲಿ ಚುನಾವಣೆ ಪ್ರಚಾರ ಸಭೆಯಲ್ಲಿ ಪೊಲೀಸರಿಗೆ ಬೆದರಿಕೆ ನೀಡಿದ್ದರು. ಅದರಿಂದ ಅವರ ವಿರುದ್ಧ ದೂರು ಕೂಡ ದಾಖಲಿಸಲಾಗಿದೆ. ಈ ವಿಷಯದ ಬಗ್ಗೆ ಅಸ್ಸಾಂನ ಭಾಜಪ ಸರಕಾರದ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ‘ಇದು ಬಹಳ ನೋವಿನ ಸಂಗತಿಯಾಗಿದೆ, ಇಂತಹ ಘಟನೆ ಅಸ್ಸಾಂನಲ್ಲಿ ಘಟಿಸಿದ್ದರೆ, ಪೊಲೀಸರು ೫ ನಿಮಿಷದಲ್ಲಿ ಅದರ ಲೆಕ್ಕ ಚುಕ್ತಾ ಮಾಡುತ್ತಿದ್ದರು; ಆದರೆ ತೆಲಂಗಾಣದಲ್ಲಿ ಓಲೈಕೆ ರಾಜಕಾರಣದಿಂದ ಪೋಲೀಸ್ ಮತ್ತು ಕಾಂಗ್ರೆಸ್ ಮತ್ತು ಆಡಳಿತಾರೂಢ ಭಾರತ ರಾಷ್ಟ್ರ ಸಮಿತಿ ಈ ರಾಜಕೀಯ ಪಕ್ಷಗಳು ಏನು ಮಾತನಾಡುವುದಿಲ್ಲ, ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಅಕ್ಬರುದ್ದೀನ್ ಇವರ ಪ್ರಚಾರ ಸಭೆಯಲ್ಲಿನ ಭಾಷಣ ನಡೆಯುತ್ತಿರುವಾಗ ಪೊಲೀಸರಿಂದ ಅವರ ಪ್ರಚಾರದ ಸಮಯ ಮುಗಿದಿದೆ ಎಂದು ಹೇಳುತ್ತಾ ಭಾಷಣ ನಿಲ್ಲಿಸಲು ವಿನಂತಿ ಮಾಡಿಕೊಂಡಿದ್ದರು. ಇದರಿಂದ ಅಕ್ಬರುದ್ದೀನ್ ‘ಇನ್ನು ೫ ನಿಮಿಷ ಬಾಕಿ ಉಳಿದಿದ್ದು ನನ್ನನ್ನು ತಡೆಯುವವರು ಇಲ್ಲಿಯವರೆಗೆ ಯಾರು ಹುಟ್ಟಿಲ್ಲ’, ಎಂದು ಬೆದರಿಕೆ ನೀಡಿದ್ದರು.