|
ಬೆಂಗಳೂರು – ಕಾಂಗ್ರೆಸ್ ಸರಕಾರದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ನನಗೆ ರಾಜಕೀಯ ಕಿರುಕುಳ ನೀಡಲಾಗುತ್ತಿದೆ, ಎಂದು ಮಾಜಿ ಮುಖ್ಯಮಂತ್ರಿ ಮತ್ತು ಜನತಾದಳ(ಜಾತ್ಯಾತೀತ) ಪಕ್ಷದ ಅಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಇವರು ಆರೋಪ ಮಾಡಿದ್ದಾರೆ. ಕುಮಾರಸ್ವಾಮಿಯವರ ವಿರುದ್ಧ ದೀಪಾವಳಿಯಂದು ವಿದ್ಯುತ ಕದ್ದು ಮನೆಗೆ ದೀಪ ಹಚ್ಚಿದ ಆರೋಪದಡಿಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದಲ್ಲಿ ಅವರು ೬೮ ಸಾವಿರದ ೫೨೬ ರೂಪಾಯಿ ದಂಡ ಪಾವತಿಸಿದ್ದರು. ನಂತರ ಕುಮಾರಸ್ವಾಮಿ ಅವರು, ಈ ಸಂಪೂರ್ಣ ಪ್ರಕರಣದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಮನೆಯಲ್ಲಿ ವಿದ್ಯುತ್ ಕೆಲಸ ನಡೆಯುತ್ತಿದ್ದಾಗ ಮನೆಯಲ್ಲಿ ಇರಲಿಲ್ಲ ಕೆಲಸಗಾರರಿಗೆ ಗೊತ್ತಾಗದೇ ಈ ಕೆಲಸ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಇವರು ದಾವೆ ಮಾಡಿದ್ದಾರೆ.
ಕುಮಾರಸ್ವಾಮಿ ಅವರ ವಿದ್ಯುತ್ ಕಳ್ಳತನದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಅವರ ವಿರೋಧಿಗಳು ಸಕ್ರಿಯರಾದರು. ಕೆಲವರು ಅವರ ಮನೆಯ ಹೊರಗೆ ‘ವಿದ್ಯುತ್ ಕಳ್ಳ‘ ಬರೆದ ಫಲಕ ಹಾಕಿದರು. ಫಲಕ ಹಾಕಿದ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.