ತಮಿಳುನಾಡಿನ ಡಿಎಂಕೆ ಸರಕಾರ ಪಥ ಸಂಚಲನೆಯನ್ನು ವಿರೋಧಿಸಿ ದಾಖಲಿಸಿದ್ದ ಅರ್ಜಿ ತಿರಸ್ಕಾರ !
ನವ ದೆಹಲಿ – ಸರ್ವೋಚ್ಚ ನ್ಯಾಯಾಲಯವು ನವೆಂಬರ್ 19 ಮತ್ತು 26 ರಂದು ತಮಿಳುನಾಡಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಪಥ ಸಂಚಲನೆ ನಡೆಸಲು ಅನುಮತಿ ನೀಡಿತು. ಮುಂದಿನ 3 ದಿನಗಳಲ್ಲಿ ಸಂಘವು ಆಡಳಿತಕ್ಕೆ ನಿರ್ಧಾರಿತ ಮಾರ್ಗದ ಮಾಹಿತಿಯನ್ನು ನೀಡಬೇಕು ಮತ್ತು ಸರಕಾರ ಇದರ ಮೇಲೆ ನವೆಂಬರ್ 16 ರೊಳಗೆ ನಿರ್ಣಯ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ತಮಿಳುನಾಡಿನ ಡಿಎಂಕೆ ಸರಕಾರವು ಪಥ ಸಂಚಲನೆ ನಡೆಸಲು ಮದ್ರಾಸ್ ಉಚ್ಚ ನ್ಯಾಯಾಲಯ ನೀಡಿದ ಅನುಮತಿ ಆದೇಶವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ಮತ್ತೊಂದೆಡೆ, ಮದ್ರಾಸ್ ಉಚ್ಚ ನ್ಯಾಯಾಲಯದ ಆದೇಶದ ನಂತರವೂ ಡಿಎಂಕೆ ಸರಕಾರ ಅನುಮತಿ ನೀಡಲಿಲ್ಲ. ಈ ಬಗ್ಗೆ ನ್ಯಾಯಾಲಯದ ನಿಂದನೆ ಅರ್ಜಿಯನ್ನು ಪುನಃ ಸಲ್ಲಿಸಲಾಗಿತ್ತು. ಅದರ ನಂತರ, ರಾಜ್ಯ ಗೃಹ ಸಚಿವ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನ್ಯಾಯಾಲಯದಿಂದ ಉತ್ತರ ನೀಡುವಂತೆ ಕೇಳಲಾಗಿತ್ತು. ಇದರ ವಿಚಾರಣೆ ಇನ್ನೂ ಬಾಕಿ ಇದೆ. (ಉಚ್ಚ ನ್ಯಾಯಾಲಯದ ಆದೇಶವನ್ನೂ ಧಿಕ್ಕರಿಸುವ ಡಿಎಂಕೆ ಸರಕಾರ ಪ್ರಜಾಪ್ರಭುತ್ವವನ್ನು ರಕ್ಷಿಸುವುದಾಗಿ ಹೇಳುತ್ತದೆ ! ಇದರಿಂದ ಈ ಪಕ್ಷ ನಿಧರ್ಮಿಯಾಗಿದೆಯೆಂದೇ ಹೇಳಬೇಕಾಗುವುದು ! – ಸಂಪಾದಕರು)
ಸಂಪಾದಕೀಯ ನಿಲುವುಸಂಘವನ್ನು ಮುಸಲ್ಮಾನ ವಿರೋಧಿ ಎನ್ನುತ್ತಿರುವ ಡಿಎಂಕೆ ಸ್ವತಃ ತಾನು ಹಿಂದೂ ವಿರೋಧಿ ಎಂದು ತೋರಿಸಿಕೊಳ್ಳುತ್ತಿದೆ ! |