ಮತಾಂಧ ಮುಸಲ್ಮಾನನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ !

ಗಾಜಿಯಾಬಾದ (ಉತ್ತರಪ್ರದೇಶ) – ಹಿಂದೂಗಳೇನು ? ಹಿಂದುಗಳನ್ನು ಹುಳುಗಳಂತೆ ಹೊಸಕಿ ಹಾಕುವೆವು. ನಮ್ಮ ಸರಕಾರ ಬಂದ ನಂತರ ಎಲ್ಲವೂ ಸ್ವಚ್ಛವಾಗುವುದು, ಎಂದು ಹೇಳುವ ಅಯಾನ ಕುರೇಶಿ ಎಂಬ ಯುವಕನ ವಿರುದ್ಧ ದೂರು ದಾಖಲಿಸಿ ಪೊಲೀಸರು ಅವನ ವಿಚಾರಣೆ ನಡೆಸುತ್ತಿದ್ದಾರೆ. ಈ ಹೇಳಿಕೆಯ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ನಂತರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಒಬ್ಬ ಪತ್ರಕರ್ತನು ಕೇಳಿರುವ ಪ್ರಶ್ನೆಗೆ ಉತ್ತರ ನೀಡುವಾಗ ಕುರೇಶಿ ಇವನು ಈ ಹೇಳಿಕೆ ನೀಡಿದ್ದಾನೆ. ಕುರೇಶಿ ಈ ವಿಡಿಯೋದಲ್ಲಿ, ಭಾರತದಲ್ಲಿದ್ದು ನೀವು ಕೇವಲ ‘ಹಿಂದೂ ಹಿಂದೂ’ ಎನ್ನುತ್ತಿದ್ದೀರಾ. ನನಗೆ ಹೇಳಿ ಹಿಂದೂ ಯಾವ ದೇಶದಲ್ಲಿದ್ದಾರೆ ? ಬಾಬರ್ ಮತ್ತು ಅವರ ಇತಿಹಾಸವನ್ನು ನೀವು ಏನು ಮಾಡುವಿರಿ ? ನೀವು ಏನು ಬೇಕಾದರೂ ಮಾಡಬಹುದು; ಆದರೆ ಕೇವಲ ಭಾರತಕ್ಕಷ್ಟೇ ಸೀಮಿತವಾಗಿದ್ದೀರ. ನೀವು ಪ್ರಯಾಗರಾಜ ಎಂದು ಹೆಸರು ಇಟ್ಟಿರಿ. ನಿಮ್ಮ ಸರಕಾರ ಇರುವುದು. ನೀವು ಏನು ಬೇಕಾದರೂ ಮಾಡಬಹುದು; ಆದರೆ ಯಾವ ದಿನ ನಮ್ಮ ಸರಕಾರ ಬರುವುದು ಆ ದಿನದಂದು ನಾವು ಎಲ್ಲವೂ ಅಳಿಸಿ ಹಾಕುವೆವು. ಯೋಗಿ ಆದಿತ್ಯನಾಥ ಸರಕಾರದಿಂದ ಇಲ್ಲಿಯವರೆಗೆ ಒಂದು ಒಳ್ಳೆಯ ಕೆಲಸ ಕೂಡ ನಡೆದಿಲ್ಲ. ರಾಹುಲ್ ಗಾಂಧಿ ಇವರಲ್ಲಿ ಪ್ರಧಾನಮಂತ್ರಿ ಆಗುವ ಎಲ್ಲಾ ಗುಣಗಳು ಇವೆ ಎಂದು ಹೇಳಿದ್ದಾನೆ.

ಸಂಪಾದಕೀಯ ನಿಲುವುಭಾರತದಲ್ಲಿನ ಮತಾಂಧರು ಭಾರತದ ಇಸ್ಲಾಮಿಸ್ಥಾನ ಮಾಡುವುದಕ್ಕಾಗಿ ಕಾದು ಕುಳಿತಿದ್ದಾರೆ. ಅವರು ಈ ಷಡ್ಯಂತ್ರ ಸಾಧ್ಯಗೊಳಿಸುವುದಕ್ಕಾಗಿ ಯಾವುದೇ ಮಟ್ಟಕ್ಕೂ ಹೋಗಬಹುದು. ಇದನ್ನು ನೋಡುತ್ತಿದ್ದರೆ ಹಿಂದೂ ಈಗಲೂ ಸಹ ಜಾತ್ಯತೀತ ಮತ್ತು ಸರ್ವಧರ್ಮಸಮಭಾವದ ಭ್ರಮೆಲ್ಲಿಯೇ ಇದ್ದಾರೆ. ಅವರನ್ನು ಎಚ್ಚರಿಸುವ ಅವಶ್ಯಕತೆ ಇದೆ. ಇಲ್ಲವಾದರೆ ಹಿಂದೂಗಳಿಗೆ ಅವರ ನಾಶ ಆಗಿರುವುದು ಸಹ ತಿಳಿಯುವುದಿಲ್ಲ ! |
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ