Diwali resolution in US House : ಅಮೇರಿಕಾದ ಸಂಸತ್ತಿನಲ್ಲಿ ದೀಪಾವಳಿಯ ಮಹತ್ವ ಹೇಳುವ ಮಸೂದೆ ಮಂಡನೆ

ಭಾರತೀಯ ಮೂಲದ ಅಮೆರಿಕನ್ ಸಂಸದ ರಾಜ ಕೃಷ್ಣಮೂರ್ತಿ

ವಾಷಿಂಗ್ಟನ್ – ದೀಪಾವಳಿಯ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವ ಹೇಳುವ ಮಸೂದೆಯನ್ನು ಅಮೆರಿಕಾದ ಸಂಸತ್ತಿನಲ್ಲಿ ಮಂಡಿಸಲಾಯಿತು. ಭಾರತೀಯ ಮೂಲದ ಅಮೆರಿಕನ್ ಸಂಸದ ರಾಜ ಕೃಷ್ಣಮೂರ್ತಿ ಇವರು ಸಭಾಗೃಹದಲ್ಲಿ ಈ ಪ್ರಸ್ತಾವ ಮಂಡಿಸಿದರು. ಕೃಷ್ಣಮೂರ್ತಿ ಇವರು, ಅಮೇರಿಕಾದಲ್ಲಿನ ೩೦ ಲಕ್ಷಕ್ಕಿಂತಲೂ ಹೆಚ್ಚಿನ ಹಿಂದೂ, ಸಿಖ್ ಮತ್ತು ಜೈನರು ದೀಪಾವಳಿಯ ಪವಿತ್ರ ಹಬ್ಬ ಆಚರಿಸುತ್ತಾರೆ ಎಂದು ಹೇಳಿದರು.

ಕೆಟ್ಟದರ ಮೇಲೆ ಒಳ್ಳೆಯದರ ವಿಜಯ ದೊರೆತಿರುವುದರ ಪ್ರತಿಕ ಎಂದು ಈ ಹಬ್ಬ ಆಚರಿಸಲಾಗುತ್ತದೆ. ಕೃಷ್ಣಮೂರ್ತಿ ಇವರು ಒಂದು ವಿಡಿಯೋ ಪ್ರಸಾರ ಮಾಡಿ ಅದರಲ್ಲಿ ಅವರು, ‘ದೀಪಾವಳಿಯ ಧಾರ್ಮಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವ ಇದನ್ನು ಎಲ್ಲರಿಗೂ ತಿಳಿಸುವ ಉದ್ದೇಶದಿಂದ ನಾನು ನನ್ನ ಸಹಯೋಗಿಗಳ ಜೊತೆಗೆ ಈ ದ್ವಿಪಕ್ಷಿಯ ಮಸೂದೆ ಮಂಡಿಸಿದ್ದೇನೆ’ ಎಂದು ಹೇಳಿದರು.