|
ಇಟಾನಗರ (ಅರುಣಾಚಲ ಪ್ರದೇಶ) – ರಾಜ್ಯ ಸರಕಾರವು ನಗರದಲ್ಲಿ ಕ್ರೈಸ್ತ ಮಿಷನರಿಗಳ ಕಾರ್ಯಕ್ರಮಕ್ಕೆ ಅನುಮತಿ ನೀಡಿರುವ ಬಗ್ಗೆ ಇಲ್ಲಿನ ಬುಡಕಟ್ಟು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಸರಕಾರ ಕೈಗೊಂಡಿರುವ ಈ ನಿರ್ಧಾರ ಆಕ್ಷೇಪಾರ್ಹ ಮಾತ್ರವಲ್ಲ ಸಂವಿಧಾನ ವಿರೋಧಿಯೂ ಆಗಿದೆ ಎಂದು ಈ ಸಂಘಟನೆಗಳು ಹೇಳಿವೆ. ಇದಕ್ಕಾಗಿ ಅವರು 1979 ರ ಅರುಣಾಚಲ ಪ್ರದೇಶ ಸರಕಾರದ ಸುತ್ತೋಲೆಯನ್ನು ಉಲ್ಲೇಖಿಸಿ, ಅರುಣಾಚಲ ಪ್ರದೇಶ ರಾಜ್ಯದ ಮೂಲ ಜಾತಿಗಳು ಮತ್ತು ಬುಡಕಟ್ಟುಗಳ ಸಂಸ್ಕೃತಿಗೆ ಮಾರಕವಾಗಿರುವ ಕ್ರೈಸ್ತ ಅಥವಾ ಇತರ ಸಮುದಾಯಗಳ ಕಾರ್ಯಕ್ರಮಗಳನ್ನು ನಡೆಸಬಾರದು ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ‘ಅಪತಾನಿ ದಾನಿ-ಪಿಲೊ ಮೇಡರ್ ನೆಲೋ ಪರಿಷತ್’ ಈ ಸ್ಥಳೀಯ ಬುಡಕಟ್ಟು ಸಂಘಟನೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ‘ಜನಜಾತಿ ಸುರಕ್ಷಾ ಮಂಚ ಅರುಣಾಚಲ ಪ್ರದೇಶ’ ಮತ್ತು ‘ಅರುಣಾಚಲ ಇಂಡಿಜೀನಸ ಸ್ಟುಡೆಂಟ್ಸ ಯೂನಿಯನ್‘ ಕೂಡ ಬೆಂಬಲ ವ್ಯಕ್ತಪಡಿಸಿವೆ. ಈ ಸಂದರ್ಭದಲ್ಲಿ ‘ಜನಜಾತಿ ಸುರಕ್ಷಾ ಮಂಚ್ ಅರುಣಾಚಲ ಪ್ರದೇಶ’ ಸಂಘಟನೆಯು ಇಟಾನಗರದ ಮುಖ್ಯ ಕಾರ್ಯದರ್ಶಿ ಮತ್ತು ಉಪ ಪೊಲೀಸ್ ಆಯುಕ್ತರ ವಿರುದ್ಧವೂ ಪೊಲೀಸರಲ್ಲಿ ದೂರು ದಾಖಲಿಸಿದೆ.
1. ಈ ಪತ್ರಿಕಾ ಪ್ರಕಟಣೆಯ ಪ್ರಕಾರ, ಇಟಾನಗರದ ‘ಐ.ಜಿ. ಪಾರ್ಕ್’ ಪ್ರದೇಶದಲ್ಲಿ ‘ಅರುಣಾಚಲ ಕ್ರೈಸ್ತ ಪ್ರಾರ್ಥನಾ ಉತ್ಸವ’ ಆಯೋಜಿಸಲಾಗಿದ್ದು, ಅದರಲ್ಲಿ ಮಿಷನರಿ ಪಾಲ್ ದಿನಾಕರನ್ ಉಪಸ್ಥಿತರಿರಲಿದ್ದಾರೆ. ಅದಕ್ಕೆ ರಾಜ್ಯ ಸರಕಾರ ಅನುಮತಿ ನೀಡಿದೆ.
2. ಈ ಕುರಿತು ಪರಿಷತ್ತು ಸರಕಾರದ ಈ ನಿರ್ಣಯವನ್ನು ಖಂಡಿಸಿದೆ. ಸರಕಾರಿ ನಿಯಮಾನುಸಾರ ಸ್ಥಳೀಯ ಪರಿಶಿಷ್ಟ ಪಂಗಡಗಳ ರಕ್ಷಣೆಗಾಗಿ ಒಂದು ಧಾರ್ಮಿಕ ಸಂಘಟನೆಯ ಜನರ ವಿಷಯದಲ್ಲಿ ಜಾಗರೂಕರಾಗಿರುವುದು ಆವಶ್ಯಕತೆಯಿದೆಯೆಂದು ಪರಿಷತ್ತು ಹೇಳಿದೆ.
3. ರಾಜ್ಯದಲ್ಲಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಾಮರಸ್ಯವನ್ನು ಕಾಪಾಡುವುದು ಸರಕಾರದ ನೀತಿಯಾಗಿದ್ದು, ಸ್ಥಳೀಯ ಸಾಮಾನ್ಯ ಜನರನ್ನು ಅವರ ಸ್ಥಳೀಯ ಸಂಸ್ಕೃತಿಯಿಂದ ದೂರವಿಡುವ ಪ್ರಯತ್ನ ಮಾಡಬಾರದು. ಕ್ರೈಸ್ತರು ಅಥವಾ ಕ್ರೈಸ್ತರಲ್ಲದ ಸ್ಥಳೀಯರನ್ನು ಆದಿವಾಸಿಗಳ ಮತಾಂತರಗೊಳಿಸಲು ಬಿಡಬಾರದು.
ಸಂಪಾದಕೀಯ ನಿಲುವುಹಿಂದೂ ಬಹುಸಂಖ್ಯಾತ ರಾಷ್ಟ್ರದಲ್ಲಿ ಅವರನ್ನೇ ಮತಾಂತರಗೊಳಿಸಲು ಬಯಸುವವರ ಕಾರ್ಯಕ್ರಮಕ್ಕೆ ಸರಕಾರ ಅನುಮತಿ ನೀಡಿರುವುದೆಂದರೆ, ಅದಕ್ಕಿಂತ ಖೇದಕರ ವಿಷಯ ಮತ್ತಿನ್ಯಾವುದು ? ಇದಕ್ಕೆ ಹಿಂದೂಗಳ ಹಿತವನ್ನು ಕಾಪಾಡುವ ಹಿಂದೂ ರಾಷ್ಟ್ರವೇ ಆವಶ್ಯಕವಾಗಿದೆ ಎಂದು ಅರಿಯಿರಿ ! |