‘ಮೈ ಲಾರ್ಡ್’ ಅನ್ನುವುದನ್ನು ನಿಲ್ಲಿಸಿದರೆ ನನ್ನ ಅರ್ಧ ಸಂಬಳ ನೀಡುವೆ !

ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಿಂದ ನ್ಯಾಯವಾದಿಗಳಿಗೆ ಕರೆ !

ನ್ಯಾಯಮೂರ್ತಿ ಪಿ. ಎಸ್. ನರಸಿಂಹ

ನವ ದೆಹಲಿ – ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಪಿ. ಎಸ್. ನರಸಿಂಹ ಇವರು ಒಂದು ಆಲಿಕೆಯ ಸಮಯದಲ್ಲಿ ಅವರಿಗೆ ‘ಮೈ ಲಾರ್ಡ್’ (ನನ್ನ ಸ್ವಾಮಿ) ಈ ಪದ ಬಳಸದಂತೆ ನ್ಯಾಯವಾದಿಗಳಿಗೆ ಹೇಳಿದರು. ನ್ಯಾಯಮೂರ್ತಿ ನ್ಯಾಯವಾದಿಗಳಿಗೆ, ”ನೀವು ಎಷ್ಟು ಬಾರಿ ನನ್ನನ್ನು ‘ಮೈ ಲಾರ್ಡ್’ ಎಂದು ಹೇಳುವಿರಿ ? ನೀವು ನನ್ನನ್ನು ಮೈ ಲಾರ್ಡ್ ಎನ್ನುವುದು ನಿಲ್ಲಿಸಿ, ಇಲ್ಲವಾದರೆ ನಾನು ಅದನ್ನು ಎಣಿಸಲು ಆರಂಭಿಸುವೇನು. ನೀವು ಏನಾದರೂ ಮೈ ಲಾರ್ಡ್ ಅನ್ನುವುದನ್ನು ನಿಲ್ಲಿಸಿದರೆ ನಾನು ನನ್ನ ಅರ್ಧ ಸಂಬಳ ನಿಮಗೆ ನೀಡುವೆನು. ನೀವು ‘ಮೈ ಲಾರ್ಡ್’ ಬದಲು ನನಗೆ ‘ಸರ್’ ಎಂದು ಏಕೆ ಹೇಳುವುದಿಲ್ಲ ?” ಎಂದು ಕೇಳಿದರು.

ಈ ಹಿಂದೆ ದೆಹಲಿ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ರವೀಂದ್ರ ಭಟ್ಟ ಮತ್ತು ಮುರಳಿಧರ ಹಾಗೂ ಮದ್ರಾಸ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಚಂದ್ರು ಇವರು ಅವರ ಕೋಣೆಯ ಹೊರಗೆ ‘ಮೈ ಲಾರ್ಡ್’ ಪದದ ಬಳಕೆ ಮಾಡದಂತೆ ಸೂಚನೆ ಬರೆದಿದ್ದರು.

ಬ್ರಿಟಿಷ ಕಾಲದಿಂದಲೂ ಬಳಕೆ !

ಬ್ರಿಟಿಷ ಕಾಲದಿಂದಲೂ ನ್ಯಾಯಮೂರ್ತಿಗಳಿಗೆ ‘ಮೈ ಲಾರ್ಡ್’ ಅನ್ನುವ ಪರಂಪರೆ ಇದೆ. ೨೦೦೬ ರಲ್ಲಿ ಭಾರತೀಯ ವಿಧಿಜ್ಞ ಪರೀಷತ್ತಿನ ಪ್ರಸ್ತಾವ ಅಂಗೀಕರಿಸಿ ಈ ಪದದ ಮೇಲೆ ನಿಷೇದ ಹೇರಲಾಗಿತ್ತು. ಈ ನಿರ್ಣಯ ಭಾರತೀಯ ರಾಜಪತ್ರದಲ್ಲಿ ಕೂಡ ಪ್ರಕಾಶಿತಗೊಳಿಸಲಾಗಿತ್ತು. ಆದರೂ ಕೂಡ ಇಲ್ಲಿಯವರೆಗೆ ಈ ಪದದ ಬಳಕೆ ಮಾಡಲಾಗುತ್ತದೆ. ಚಲನಚಿತ್ರಗಳಲ್ಲಿ ಕೂಡ ಇದರ ಬಳಕೆ ಆಗುತ್ತದೆ.

ಸಂಪಾದಕೀಯ ನಿಲುವು

ಇಂತಹ ಪದಗಳ ಮೇಲೆ ಇಲ್ಲಿಯವರೆಗೆ ಅಧಿಕೃತವಾಗಿ ಏಕೆ ನಿಷೇಧ ಹೇರಲಾಗಿಲ್ಲ ?