|

ಬೆಂಗಳೂರು – ಹುಲಿ ಉಗುರಿನ ಲಾಕೆಟ್ ಧರಿಸಿದರು ಎಂದು ಅನೇಕ ಜನರ ಮನೆಯ ಮೇಲೆ ಸರಕಾರ ದಾಳಿ ಮಾಡುತ್ತಿದೆ. ಈ ಮೂಲಕ ಹಿಂದೂಗಳನ್ನು ಗುರಿ ಮಾಡಲಾಗುತ್ತಿದೆ ಎಂದು ಭಾಜಪ ಶಾಸಕ ಅರವಿಂದ ಬೆಲ್ಲದ ಮಾಧ್ಯಮಗಳೊಂದಿಗೆ ಮಾತನಾಡುವಾಗ ಆರೋಪಿಸಿದರು. ‘ರಾಜ್ಯದಲ್ಲಿ ಬರ ಮತ್ತು ವಿದ್ಯುತ್ ಸಮಸ್ಯೆಯಿಂದ ಜನತೆಯ ಗಮನವನ್ನು ಬೇರೆಡೆ ಸೆಳೆಯಲು ಸರಕಾರ ಹುಲಿ ಉಗುರುಗಳ ಸಮಸ್ಯೆಯನ್ನು ಕೆದಕಿ ತೆಗೆದಿದೆ’, ಎಂದು ಅವರು ಆರೋಪಿಸಿದರು. ಈ ಸಂದರ್ಭದಲ್ಲಿ ರಾಜ್ಯ ಸರಕಾರಕ್ಕೆ ಪತ್ರ ಕಳುಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಶಾಸಕ ಬೆಲ್ಲದ ಅವರು ಮಾತನಾಡುತ್ತಾ,
1. ಯಾರೂ ಜೀವಂತ ಹುಲಿಯ ಉಗುರುಗಳನ್ನು ತೆಗೆದು ಬಳಸುವುದಿಲ್ಲ. ಅಷ್ಟು ಸಾಹಸಿ ಯಾರಿಗೂ ಇಲ್ಲ. ಸತ್ತ ಹುಲಿಗಳ ಉಗುರುಗಳನ್ನು ತಂದು ಬಳಸಿರಬಹುದು. ಅನೇಕ ಜನರು ಲಾಕೆಟ್‌ಗಳಿಗೆ ಹುಲಿ ಉಗುರುಗಳಂತೆ ಕಾಣುವ ಪ್ಲಾಸ್ಟಿಕ್ ಉಗುರುಗಳನ್ನು ಬಳಸುತ್ತಾರೆ.
2. ಎಲ್ಲರ ವಿರುದ್ಧ ಸಮಾನ ಕ್ರಮ ಕೈಗೊಳ್ಳಬೇಕು. ಮುಸಲ್ಮಾನರ ದರ್ಗಾದಲ್ಲಿ ನವಿಲುಗರಿಗಳನ್ನು ಬಳಸಲಾಗುತ್ತದೆ. ಹೀಗಿರುವಾಗ ದರ್ಗಾ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಕೇವಲ ಹಿಂದೂಗಳನ್ನು ಗುರಿಯಾಗಿಸಿಕೊಂಡು ಅಪರಾಧಗಳನ್ನು ದಾಖಲಿಸಬೇಡಿರಿ.
3. ಮೌಲ್ವಿಯ (ಇಸ್ಲಾಂನ ಧಾರ್ಮಿಕ ಮುಖಂಡರು) ವಿರುದ್ಧ ದೂರು ದಾಖಲಿಸಿರಿ. ಎಲ್ಲಾ ಮೌಲವಿಗಳಿಗೆ 7 ವರ್ಷಗಳ ಜೈಲು ಶಿಕ್ಷೆ ನೀಡಿರಿ. ತದನಂತರ ನಿಮಗೆ ಅರಣ್ಯ ರಕ್ಷಣೆ ಬಗ್ಗೆ ಎಷ್ಟು ಕಾಳಜಿಯಿದೆ ? ಎಂದು ಜನತೆಗೆ ತಿಳಿಯುವುದು ಎಂದು ಹೇಳಿದರು.
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ
US-Based Christian Missionary : ಕ್ರಿಶ್ಚಿಯನ್ ಮಿಷನರಿ ಸಂಸ್ಥೆ ಮತ್ತು ೭ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲು
‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ದಲ್ಲಿ ವಿಲೀನಗೊಳ್ಳಲು ನಿರ್ಧರಿಸಿರುವ ತೃಣಮೂಲ ಕಾಂಗ್ರೆಸ್ಸಿನ 20 ಲೋಕಸಭಾ ಸಂಸದರು !
ಬಾಂಗ್ಲಾದೇಶದ ಶಿವಗಂಜ್ ಉಪಜಿಲ್ಲೆಯ ಹೆಸರು ಬದಲಾಯಿಸಿ ‘ಮಹಾಸ್ಥಾನ’ ಆಗಲಿದೆ !
ವಿಶೇಷ ನ್ಯಾಯಾಲಯದಿಂದ ಪೊಲೀಸ್ ಉಪಾಧೀಕ್ಷಕನ ಜಾಮೀನು ಅರ್ಜಿ ವಜಾ !
ಹಿಂದುತ್ವನಿಷ್ಠ ಹರ್ಷ ಅವರ ಹತ್ಯೆಗೈದ ಆರೋಪಿಗಳಿಂದ ಜೈಲು ‘ವಾರ್ಡನ್’ ಮೇಲೆ ದಾಳಿ !