ಭಾರತದ ಆಂತರಿಕ ವಿಷಯಗಳಲ್ಲಿ ಮೂಗು ತುರಿಸಿದ್ದರಿಂದ ಕೆನಡಾದ ರಾಜತಾಂತ್ರಿಕ ಅಧಿಕಾರಿಗಳನ್ನು ಮರಳಿ ಕಳುಹಿಸಿದೆ !

ಖಲಿಸ್ತಾನಿಗಳಿಗೆ ಸುಲಭವಾಗಿ ‘ವೀಸಾ’ ನೀಡುವುದರ ಜೊತೆಗೆ, ಕೃಷಿ ಕಾಯ್ದೆ ವಿರೋಧಿ ಆಂದೋಲನಗಳಿಗೆ ಧನಸಹಾಯ ನೀಡಿರುವುದರ ಭಾರತದ ಬಳಿ ಪುರಾವೆ !


ನವ ದೆಹಲಿ – ಕೆನಡಾದ 41 ರಾಜತಾಂತ್ರಿಕ ಅಧಿಕಾರಿಗಳನ್ನು ಭಾರತ ತೊರೆಯುವಂತೆ ಹೇಳಿದ್ದಕ್ಕಾಗಿ ಕೆನಡಾ ಸರಕಾರ ಭಾರತದ ವಿರುದ್ಧ ವಾಗ್ದಾಳಿ ನಡೆಸಿದೆ. ಈ ಮೂಲಕ ಭಾರತ ಕೈಗೊಂಡಿರುವ ಈ ಅತಿರೇಕದ ನಿರ್ಧಾರದ ಹಿಂದಿನ ಕಾರಣಮೀಮಾಂಸೆ ಬಹಿರಂಗವಾಗಿದೆ. ಕೆನಡಾದ ಅಧಿಕಾರಿಗಳು ಭಾರತದ ಆಂತರಿಕ ವ್ಯವಹಾರಗಳಲ್ಲಿ ಮೂಗು ತೂರಿಸುತ್ತಿದ್ದಾರೆ ಎಂಬುದಕ್ಕೆ ಭಾರತದ ಬಳಿ ವಸ್ತುನಿಷ್ಠ ಪುರಾವೆಗಳಿವೆ ಎಂಬ ಮಾಹಿತಿ ಬಹಿರಂಗವಾಗಿದೆ. ಈ ಆಧಾರದಲ್ಲಿಯೇ ಭಾರತ ಈ ನಿರ್ಣಯವನ್ನು ಕೈಗೊಂಡಿದೆ.
ಹಿಂದಿ ಸುದ್ದಿ ವಾಹಿನಿಯೊಂದು ಸರಕಾರದ ಹಿರಿಯ ಮೂಲಗಳ ವರದಿಯಲ್ಲಿ.

1. ಚಂಡೀಗಢ ಹಾಗೂ ಪಂಜಾಬಿನ ಹಲವಾರು ಪ್ರದೇಶಗಳಲ್ಲಿರುವ ತಮ್ಮ ರಾಯಭಾರಿ ಕಚೇರಿಗಳಲ್ಲಿ ಕೆನಡಾದ ರಾಜತಾಂತ್ರಿಕ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದರು.

2. ಇದರೊಂದಿಗೆ ಅವರು ಭಾರತದಲ್ಲಿರುವ ಅಪರಾಧದ ಹಿನ್ನೆಲೆ ಹೊಂದಿರುವ ಅಥವಾ ಖಲಿಸ್ತಾನಿ ಭಯೋತ್ಪಾದಕರನ್ನು ಬೆಂಬಲಿಸುವ ಭಾರತದ ಜನರಿಗೆ ಅವರು ಕೆನಡಾದ ‘ವೀಸಾ’ಗೆ ಸುಲಭವಾಗಿ ಒದಗಿಸುತ್ತಿದ್ದರು. ಖಲಿಸ್ತಾನಿಗಳ ಸೂತ್ರವನ್ನು ಬಲಪಡಿಸಲು ಈ ರೀತಿಯಲ್ಲಿ ವೀಸಾ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿತ್ತು.

3. ಇದರೊಂದಿಗೆ ಭಾರತ ಸರಕಾರವು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಕಾನೂನುಗಳ ವಿರುದ್ಧದ ವಾತಾವರಣವನ್ನು ನಿರ್ಮಿಸುವಲ್ಲಿ ಕೆನಡಾದ ಅಧಿಕಾರಿಗಳ ಕೈವಾಡವಿತ್ತು. ಪ್ರತ್ಯಕ್ಷ ಅಥವಾ ಪರೋಕ್ಷ ವಿಧಾನಗಳಿಂದ ಕೃಷಿ ಕಾಯ್ದೆಗಳ ವಿರುದ್ಧ ಸಾರ್ವಜನಿಕ ಅಭಿಪ್ರಾಯವನ್ನು ಸೃಷ್ಟಿಸುವ ಪ್ರಕ್ರಿಯೆಯಲ್ಲಿ ಅವರು ತೊಡಗಿಸಿಕೊಂಡಿದ್ದರು. ಕೆನಡಾದಲ್ಲಿರುವ ಕೆಲವು ಭಾರತೀಯರಿಗೆ ದೊಡ್ಡ ಆರ್ಥಿಕ ನೆರವು ನೀಡುವ ಮೂಲಕ ಕೃಷಿ ಕಾಯಿದೆಗಳನ್ನು ವಿರೋಧಿಸಲು ಅವರನ್ನು ಪ್ರೋತ್ಸಾಹಿಸಲಾಯಿತು.

4. ಪಂಜಾಬ್ ಸರಕಾರಿ ಕಚೇರಿಗಳಲ್ಲಿ ಕೆನಡಾದ ರಾಜತಾಂತ್ರಿಕ ಅಧಿಕಾರಿಗಳ ಸಭೆಗಳು ನಿಯಮಿತವಾಗಿ ನಡೆಯುತ್ತಿದ್ದವು. ಕೆಲವು ಜನರಿಗೆ ಈ ಅಧಿಕಾರಿಗಳ ಕುತಂತ್ರದ ಬಗ್ಗೆಯೂ ಸಂಶಯ ಮೂಡಿತ್ತು ಮತ್ತು ಅವರು ಕಾಲಕಾಲಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ಗುಪ್ತಚರ ಸಂಸ್ಥೆಗಳಿಗೆ ಮಾಹಿತಿ ನೀಡಿದ್ದಾರೆ. ಗುಪ್ತಚರ ಸಂಸ್ಥೆಗಳು ನೀಡಿದ ಮಾಹಿತಿಯನ್ನು ಅನುಸರಿಸಿ, ಭಾರತ ಸರಕಾರ ಬಹಳಷ್ಟು ವಿಚಾರ ಮಾಡಿದ ಬಳಿಕ ಈ ನಿರ್ಣಯವನ್ನು ತೆಗೆದುಕೊಂಡಿತು ಮತ್ತು 41 ಕೆನಡಾದ ರಾಜತಾಂತ್ರಿಕರನ್ನು ಮರಳಿ ಕಳುಹಿಸಲು ನಿರ್ಧರಿಸಿತು.

5. ಅಕ್ಟೋಬರ್ 22 ರಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈ ಶಂಕರ ಇವರು ಮಾತನಾಡಿ, ಭಾರತದ ಬಳಿ ಕೆನಡಾ ಸರಕಾರ ಭಾರತದ ಆಂತರಿಕ ವ್ಯವಹಾರಗಳಲ್ಲಿ ಮೂಗು ತೂರಿಸುತ್ತಿರುವುದರ ಪುರಾವೆಗಳಿವೆ ಎಂದು ಹೇಳಿದ್ದರು. ಈ ಸಂದರ್ಭದಲ್ಲಿ ಮಹತ್ವದ ಮಾಹಿತಿಯನ್ನು ಜನತೆಗೆ ನೀಡಿರುವುದಿಲ್ಲ. ಕಾಲಾನುಸಾರ ಮತ್ತು ಹೆಚ್ಚಿನ ಮಾಹಿತಿ ಹೊರಬಂದ ನಂತರ, ಜನತೆಗೆ ಭಾರತವು ಕೆನಡಾದ ರಾಜತಾಂತ್ರಿಕರನ್ನು ಏಕೆ ಹಿಂದಕ್ಕೆ ಕಳುಹಿಸಿದೆ ಎಂದು ತಿಳಿಯಲಿದೆ ?

ಸಂಪಾದಕೀಯ ನಿಲುವು

ಭಾರತವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ಕೆನಡಾ ವಿರುದ್ಧ ಇಂತಹ ಹೆಜ್ಜೆ ಅಗತ್ಯವಾಗಿತ್ತು. ಈಗ ಭಾರತ ಸರಕಾರ ಇಂತಹುದೇ ತೀಕ್ಷ್ಣ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಾ, ಕೆನಡಾದೊಂದಿಗಿನ ವ್ಯಾಪಾರ ಸಂಬಂಧವನ್ನು ಮುರಿದುಕೊಂಡು ಅದನ್ನು ಸರಿದಾರಿಗೆ ತರಬೇಕು !