ದೆಹಲಿಯಲ್ಲಿನ ಘಟನೆ
ನವ ದೆಹಲಿ – ದಕ್ಷಿಣ ಪಶ್ಚಿಮ ದೆಹಲಿಯ ಜಿಲ್ಲಾಧಿಕಾರಿ ಎಂದು ೨೦೧೯ ಬ್ಯಾಚ್ ನ ಭಾರತೀಯ ಸರಕಾರಿ ಸೇವೆಯಲ್ಲಿನ (ಐಎಎಸ್) ಅಧಿಕಾರಿ ಲಕ್ಷ ಸಿಂಘಲ್ ಇವರು ತಮ್ಮ ಗುರುಗಳಿಗೆ ಕಾರ್ಯಾಲಯದಲ್ಲಿನ ತಮ್ಮ ಹುದ್ದೆಯ ಕುರ್ಚಿಯ ಮೇಲೆ ಕೂಡಿಸಿದರು. ಈ ಘಟನೆಯ ವಿಡಿಯೋ ಪ್ರಸಾರವಾದ ನಂತರ ಸಿಂಘಲ್ ಇವರ ವಿರೋಧವಾಯಿತು. ಆದ್ದರಿಂದ ಅವರು ಕ್ಷಮೆ ಯಾಚಿಸಿದರು. ಭವಿಷ್ಯದಲ್ಲಿ ಈ ರೀತಿಯ ತಪ್ಪಾಗಬಾರದೆಂದು ಸಿಂಘಲ್ ಇವರಿಗೆ ಎಚ್ಚರಿಕೆ ನೀಡಲಾಯಿತು. ಸಿಂಘಲ್ ಇವರು ಅವರ ಗುರುಗಳಿಗೆ ಕುರ್ಚಿಯ ಮೇಲೆ ಕೂಡಿಸಿ ಪುಷ್ಪಮಾಲೆ ಅರ್ಪಿಸಿ ಶಾಲ ಅರ್ಪಣೆ ಮಾಡಿದ್ದರು. ಇದರ ನಂತರ ಅವರು ಕೈ ಮುಗಿದು ಗುರುಗಳೇದುರು ತಲೆ ಬಾಗಿದ್ದರು. ಇದರ ಬಗ್ಗೆ ಸಿಂಘಲ್ ಇವರು, ಯಾವ ವ್ಯಕ್ತಿಯನ್ನು ನಾನು ಕುರ್ಚಿಯ ಮೇಲೆ ಕೂಡಿಸಿದೆ ಅವರು ನನ್ನ ಜನ್ಮ ಗುರು ಆಗಿದ್ದಾರೆ. ಅವರನ್ನು ಗೌರವಿಸುವುದಕ್ಕಾಗಿ ನಾನು ನನ್ನ ಕಾರ್ಯಾಲಯಕ್ಕೆ ಕರೆಯಿಸಿದ್ದೆ. ನಾನು ಮಹಾವಿದ್ಯಾಲಯದಲ್ಲಿರುವಾಗ ಅವರೇ ನನಗೆ ಸರಕಾರಿ ಸೇವೆಯ ಪರೀಕ್ಷೆಯ ತಯಾರಿ ಮಾಡಲು ಸಲಹೆ ನೀಡಿದ್ದರು. ಭವಿಷ್ಯದಲ್ಲಿ ಈ ರೀತಿಯ ತಪ್ಪಾಗಲಾರದ ಹಾಗೆ ಕಾಳಜಿ ವಹಿಸುವೆನು ಎಂದು ಹೇಳಿದರು.
ಸಂಪಾದಕೀಯ ನಿಲುವುಸ್ವಾತಂತ್ರ್ಯಾನಂತರದ ಕಾಲದಲ್ಲಿ ಧರ್ಮದ ದಮನದಿಂದ ಭಾರತ ಎಲ್ಲ ಕ್ಷೇತ್ರಗಳಲ್ಲೂ ದುರ್ದಶೆಗೆ ತಲುಪಿತು. ಜಿಲ್ಲಾಧಿಕಾರಿಯ ಈ ಕ್ರಮವು ಸಾಂವಿಧಾನಿಕವಾಗಿ ಅನುಚಿತವೆಂದು ತೋರುತ್ತದೆಯಾದರೂ, ಹಿಂದೂ ರಾಷ್ಟ್ರದಲ್ಲಿ ರಾಜ ಅಧಿಕಾರದ ಮೇಲೆ ಧಾರ್ಮಿಕ ಅಧಿಕಾರದ ಅಂಕುಶವಿರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ಜಾತ್ಯಾತೀತ ಭಾರತದಲ್ಲಿ ಇದಕ್ಕಿಂತಲೂ ಬೇರೆ ಏನು ಆಗಲು ಸಾಧ್ಯ ? ಭಾರತದಲ್ಲಿ ಭ್ರಷ್ಟ, ಜನದ್ರೋಹಿ, ಮೈಗಳ್ಳ ಸರಕಾರಿ ಅಧಿಕಾರಿ ಕಾರ್ಮಿಕರಿರಲ್ಲಿ ಕ್ಷಮೆ ಯಾಚಿಸ ಬೇಕಾಗುವುದಿಲ್ಲ; ಆದರೆ ಆಧ್ಯಾತ್ಮಿಕ ಪರಂಪರೆಯ ಪಾಲನೆ ಮಾಡುವವರು ಇದನ್ನು ಮಾಡಬೇಕಾಗುತ್ತದೆ ಇದೇ ಲಚ್ಚಸ್ಪದ !
|