ಉತ್ತಮ ಸಾಧನೆ ಮಾಡಿ ಆದರ್ಶ ಯುವಸಾಧಕರಾದರೆ ಹಿಂದೂ ರಾಷ್ಟ್ರವನ್ನು ನಡೆಸಲು ಸಮರ್ಥರಾಗುವೆವು ! – ಸೌ. ಮಂಜುಳಾ ಗೌಡ, ಸನಾತನ ಸಂಸ್ಥೆ

ಉತ್ಸಾಹಮಯ ವಾತಾವರಣದಲ್ಲಿ ಮಂಗಳೂರಿನ ಯುವ ಸಾಧಕರ ಸಾಧನಾ ಶಿಬಿರ ಸಂಪನ್ನ !

ಮಂಗಳೂರು : `ನಾವೆಲ್ಲರೂ ಸಾಧನೆಯನ್ನು ಚಿಕ್ಕ ವಯಸ್ಸಿನಿಂದಲೇ ರೂಡಿಸಿಕೊಳ್ಳಬೇಕು, ನಮ್ಮಲ್ಲಿರುವ ದೋಷ ಅಹಂ ನಷ್ಟ ಮಾಡಿಕೊಂಡು ಒಳ್ಳೆ ಗುಣಗಳನ್ನು ವೃದ್ಧಿಸಿ ಆದರ್ಶ ಜೀವನವನ್ನು ನಡೆಸಬೇಕು. ಹಿಂದೂ ರಾಷ್ಟ್ರವನ್ನು ಆದರ್ಶ ರೀತಿಯಲ್ಲಿ ಮುನ್ನಡೆಸಲು ನಾವೆಲ್ಲರೂ ಪಾತ್ರರಾಗಬೇಕು, ಶಿಬಿರದಲ್ಲಿ ಮನಮುಕ್ತತೆಯಿಂದ ಮಾತನಾಡುವುದರಿಂದ ಮನಸ್ಸಿನಲ್ಲಿರುವ ಒತ್ತಡ, ನಿರಾಶೆ, ನಕಾರಾತ್ಮಕ ವಿಚಾರ, ಭಯ, ಪ್ರತಿಷ್ಠೆ ಇವುಗಳಿಂದ ಬೇಗನೇ ಹೊರ ಬಂದು ಉತ್ತಮ ರೀತಿಯಲ್ಲಿ ಸಾಧನೆಯನ್ನು ಮಾಡಬಹುದು. ಉತ್ತಮ ಸಾಧನೆ ಮಾಡಿ ಆದರ್ಶ ಯುವಸಾಧಕರಾದರೆ ಹಿಂದೂ ರಾಷ್ಟ್ರವನ್ನು ನಡೆಸಲು ಸಮರ್ಥರಾಗುವೆವು, ಎಂದು ಎಂದು ಸನಾತನ ಸಂಸ್ಥೆಯ ಸೌ. ಮಂಜುಳಾ ಗೌಡ ಇವರು ತಿಳಿಸಿದರು.
ಅವರು ಕರ್ನಾಟಕ ರಾಜ್ಯದಲ್ಲಿ ಆಯ್ಕೆಯಾದ ಯುವ ಸಾಧಕರಿಗೆ ಮಂಗಳೂರಿನಲ್ಲಿ ಆಯೋಜಿಸಿದ್ದ 3 ದಿನಗಳ ಶಿಬಿರದಲ್ಲಿ ಮಾರ್ಗದರ್ಶನ ಮಾಡುತ್ತಿದ್ದರು 15 ರಿಂದ 17 ಅಕ್ಟೋಬರ್ 2023 ವರೆಗೆ ನಡೆದ ಶಿಬಿರದಲ್ಲಿ ರಾಜ್ಯದ ಹಲವು ಜಿಲ್ಲೆಗಳಿಂದ ಸುಮಾರು 43 ಮಕ್ಕಳು ಉಪಸ್ಥಿತರಿದ್ದರು. ಯುವ ಸಾಧಕರ ವ್ಯಷ್ಟಿ ಸಾಧನೆಯನ್ನು ಯೋಗ್ಯ ರೀತಿಯಲ್ಲಿ ಮಾಡಿಸುವುದು ಮತ್ತು ಸಮಷ್ಟಿ ಸಾಧನೆಯ ಮಹತ್ವ ತಿಳಿಸಿ ಸಮಷ್ಟಿ ಸಾಧನೆಯಲ್ಲಿ ಜೋಡಿಸುವುದು ಶಿಬಿರದ ಮುಖ್ಯ ಉದ್ದೇಶವಾಗಿತ್ತು.

ಹೀಗೆ ನಡೆಯಿತು ಶಿಬಿರ
1. ಎಲ್ಲ ಮಕ್ಕಳು ಮನಮುಕ್ತತೆಯಿಂದ ಮಾತನಾಡಿ ತಮ್ಮ ಮನಸ್ಸಿನ ವಿಚಾರವನ್ನು ಆತ್ಮನಿವೇದನೆ ಮಾಡಿದರು. ನಂತರ ಮಕ್ಕಳು ತುಂಬಾ ಆನಂದದಿಂದ ಶಿಬಿರದಲ್ಲಿ ಸಹಭಾಗ ಮಾಡಿದರು.

೨. ಮಕ್ಕಳಿಗೆ ಸ್ವಭಾವದೋಷವನ್ನು ಹೇಗೆ ಪಟ್ಟಿ ಮಾಡಬೇಕು, ಸ್ವಯಂಸೂಚನೆಯನ್ನು ಹೇಗೆ ತಯಾರಿಸಬೇಕು ಎಂಬುವುದನ್ನು ಕಲಿಸಿ ಕೊಡಲಾಯಿತು.

೩. ಗ್ರಂಥ ಪ್ರದರ್ಶನಿ, ವಕ್ತಾರರಾಗಿ ತಯಾರಾಗುವ ಪ್ರಾಯೋಗಿಕ ಭಾಗವನ್ನು ಮಾಡಿ ತೋರಿಸಲಾಯಿತು.

4. ಸಮಯದ ನಿಯೋಜನೆ, ಆದರ್ಶ ದಿನಚರಿಯನ್ನು ಹೇಗೆ ಮಾಡಬೇಕೆಂದು ತಿಳಿಸಲಾಯಿತು.

5. ಶಿಬಿರದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಸಂದೇಶ, ಜೀವನದಲ್ಲಿ ಆಧ್ಯಾತ್ಮಿಕ ಸಾಧನೆಯ ಅವಶ್ಯಕತೆ, ಕರ್ಮ ಫಲ ನ್ಯಾಯ, ಸಂಚಿತ, ಪ್ರಾರಬ್ಧ ಮತ್ತು ಕ್ರಿಯಾಮಣ ನಮ್ಮ ಜೀವನದಲ್ಲಿ ಹೇಗೆ ಕಾರ್ಯ ಮಾಡುತ್ತದೆ. ಹೀಗೆ ಸಾಧನೆಯ ಹಲವು ಅಂಶಗಳ ಬಗ್ಗೆ ತಿಳಿಸಿದರು.

6. ಭಾವಜಾಗೃತಿ, ನಾಮಜಪ, ಪ್ರಾರ್ಥನೆ, ಕೃತಜ್ಞತೆ ಇವುಗಳನ್ನೂ ಗುಣಾತ್ಮಕ ಹೇಗೆ ಮಾಡಬೇಕು ಎಂಬುದನ್ನು ಪ್ರತ್ಯಕ್ಷ ಮಾಡಿಸಲಾಯಿತು.

ಶಿಬಿರಾರ್ಥಿಗಳು ವ್ಯಕ್ತಪಡಿಸಿದ ಮನೋಗತ.

1. ವಿದ್ಯಾಭ್ಯಾಸದ ನಂತರ ಸೇವೆ ಮಾಡುವ ಇಚ್ಛೆಯನ್ನು ವ್ಯಕ್ತ ಮಾಡಿದರು – ಕು. ಮೋಕ್ಷ, ಶ್ರೀ. ನಿಶ್ಚಿತ್, ಶ್ರೀ. ವೈಷ್ಣವಿ.

2. ಶಾಲೆಯ ತೆರೆಯುವವರೆಗೂ ಸೇವಾಕೇಂದ್ರದಲ್ಲಿದ್ದು ಇರಬೇಕೆಂದು ಅನಿಸುತ್ತದೆ. – ಶ್ರೀ. ಬಸವರಾಜ್

3. ನನಗೆ ಕನ್ನಡ ಅಷ್ಟು ಸ್ಪಷ್ಟ ಬರುತ್ತಿರಲಿಲ್ಲ ಆದರೆ ವ್ಯಾಸಪೀಠದ ಮೇಲೆ ವಕ್ತೆಯಾಗಿ ಮಾತನಾಡಿದ ನಂತರ ಆತ್ಮವಿಶ್ವಾಸ ಮೂಡಿತು – ಕು. ಸಂಗೀತಾ

4. ನನ್ನ ತಾಯಿ ಹೇಳಿದ ಹಾಗೆ ಶಾಲೆಗಿಂತ ಮೂರು ಪಟ್ಟು ಹೆಚ್ಚು ಕಲಿಯಲು ಸಿಕ್ಕಿತ್ತು – ಶ್ರೀ. ಸಂಸ್ಕಾರ್.

5. ಶಿಬಿರದಲ್ಲಿ ತಪ್ಪುಗಳು ನಿರೀಕ್ಷಣೆಯನ್ನು ಮಾಡುವುದು ಕಲಿಯಲು ಸಿಕ್ಕಿತು ಹಾಗೆ ಹಿಂದೂ ರಾಷ್ಟ್ರ ಬರುವುದೇ ಎಂಬ ಸಂದೇಶವಿತ್ತು ಆದರೆ ಶಿಬಿರದ ನಂತರ ಹಿಂದೂ ರಾಷ್ಟ್ರ ಬಂದೇ ಬರುತ್ತದೆ ಎಂದು ಅನಿಸಿತು – ಶ್ರೀಸಮರ್ಥ

6. ಓರ್ವ ಸಾಧಕಿಗೆ ತಂದೆಯ ವಿರೋಧವಿತ್ತು ಆದರೆ ತಾಯಿ ಸಾಧನೆ ಮಾಡು ಎಂದು ಹೇಳುತ್ತಿದ್ದಳು ಅವಳಿಗೆ ತುಂಬಾ ಗೊಂದಲವಿತ್ತು .ಆದರೆ ಶಿಬಿರದ ನಂತರ ಸಾಧನೆಯನ್ನು ಮಾಡಬೇಕು ಎಂದು ದೃಢ ನಿಶ್ಚಯವನ್ನು ಮಾಡಿದಳು – ಓರ್ವ ಸಾಧಕಿ

7. ನನಗೆ ಹಾಸ್ಟೆಲ್ ನಲ್ಲಿ ಆಧ್ಯಾತ್ಮಿಕ ಉಪಾಯ ಮಾಡುವಾಗ ಸ್ನೇಹಿತರು ಟೀಕಿಸುತ್ತಿದ್ದರು ಆದರೆ ಶಿಬಿರದಲ್ಲಿ ಹಿಂದೂ ಧರ್ಮಚರಣೆಯನ್ನು ಪಾಲನೆಯನ್ನು ಮಾಡಬೇಕು ಎಂಬುದನ್ನು ತಿಳಿಸಿದ ನಂತರ ಈಗ ಯಾವುದೇ ಭಯವಿಲ್ಲ. ನನ್ನ ಧರ್ಮವನ್ನು ನಾನು ಪಾಲಿಸುತ್ತೇನೆ – ಕು . ಚೈತನ್ಯ.

ಅನುಭೂತಿಗಳು

1. ಕೆಲವು ಶಿಬಿರಾರ್ಥಿಗಳಿಗೆ ಕಂಪ್ಯೂಟರ್ ವರ್ಗ ಹಾಗೂ ಪ್ರಾಕ್ಟಿಕಲ್ ಲ್ಯಾಬ್ ಇತ್ತು ಆದರೆ ಅವೆಲ್ಲವೂ ರದ್ದಾಯಿತು ಆಯಿತು. ಇದರಿಂದ ದೇವರೆ ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟರು ಎಂದೆನಿಸಿತು.

2. ಓರ್ವ ಶಿಬಿರಾರ್ಥಿಗೆ ಗುರುಗಳು ಕನಸಿನಲ್ಲಿ ಬಂದು ಅವಳನ್ನು ಗುರುಚರಣಗಳಿಗೆ ಕರೆದೊಯ್ಯುವಂತೆ ಭಾಸವಾಯಿತು.