ರಾಷ್ಟ್ರೀಯ ಹಸಿರು ಪ್ರಾಧಿಕಾರಣಕ್ಕೆ ಸರಕಾರಿ ವ್ಯವಸ್ಥೆಯಿಂದ ತಪರಾಕಿ !
ನವದೆಹಲಿ – ಯಮುನಾ ನದಿಯ ಸ್ವಚ್ಛತೆ ಸಮಾಧಾನಕಾರಕ ಪರಿಸ್ಥಿತಿಯಿಂದ ಬಹಳ ದೂರವಿದೆ. ಎಂದು ರಾಷ್ಟ್ರೀಯ ಹಸಿರು ಪ್ರಾಧೀಕರಣಕ್ಕೆ ದೆಹಲಿ ಜಲಮಂಡಳಿ, ದೆಹಲಿ ಸರಕಾರ ಮತ್ತು ಇತರ ಸರಕಾರಿ ವ್ಯವಸ್ಥೆಯು ತಪರಾಕಿ ನೀಡಿದೆ.
ಈ ವ್ಯವಸ್ಥೆಯಿಂದ ಯಮುನಾ ನದಿಯ ಸ್ವಚ್ಛತೆಯ ಬಗ್ಗೆ ಒಂದು ವರದಿ ಪ್ರಾಧಿಕಾರಣ ಪ್ರಸ್ತುತಪಡಿಸಿತ್ತು. ಇದರಲ್ಲಿ ನದಿಯಲ್ಲಿ ಬಿಡಲಾಗುವ ಚರಂಡಿ ನೀರು ಹಾಗೂ ಈ ನೀರಿನಲ್ಲಿನ ಕಸ ಹುಡುಕುವ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಲಾಗಿತ್ತು.
೧. ಪ್ರಾಧೀಕರಣದ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ ಶ್ರೀವಾಸ್ತವ ಇವರು, ಈ ವರದಿಯಲ್ಲಿ ಅನೇಕ ಕುಂದು ಕೊರತೆಗಳಿವೆ. ಇದರಲ್ಲಿ ಪ್ರಕ್ರಿಯೆ ನಡೆಸಿ ಅಶುದ್ಧ ನೀರನ್ನು ಶುದ್ಧೀಕರಿಸುವುದು ಅದರ ಗುಣಮಟ್ಟ ಇದರ ಮಾಹಿತಿಯಲ್ಲಿ ಕೊರತೆ ಇದೆ ಎಂದು ಹೇಳಿದ್ದಾರೆ.
೨. ಪ್ರಾಧಿಕಾರಣದಿಂದ ಈ ಸಮಯದಲ್ಲಿ ವರದಿಯಲ್ಲಿ ನೀಡಲಾಗಿರುವ ಮಾಹಿತಿ ಮತ್ತು ಅಂಕಿ ಸಂಖ್ಯೆಗಳ ಸತ್ಯಾಸತ್ಯತೆ ಪರಿಶೀಲನೆಯ ಆದೇಶ ನೀಡಲಾಗಿದೆ. ಇದರ ಮೇಲಿನ ಮುಂದಿನ ವಿಚಾರಣೆ ಡಿಸೆಂಬರ್ ೭ ರಂದು ನಡೆಯುವುದು.
ಸಂಪಾದಕೀಯ ನಿಲುವುಸರಕಾರಿ ಇಲಾಖೆಗಳಿಗೆ ಬಾಯಿ ಮಾತಲ್ಲಿ ತಪರಹಾಕಿ ನೀಡಿದರು ಏನು ಉಪಯೋಗವಿಲ್ಲ; ಏಕೆಂದರೆ ಅವರು ದಪ್ಪ ಚರ್ಮದವರಾಗಿದ್ದಾರೆ ! ಆದ್ದರಿಂದ ಇಂತಹವರಿಗೆ ಕಠಿಣ ಶಿಕ್ಷೆ ನೀಡುವುದೇ ಅವಶ್ಯಕವಾಗಿದೆ. |