ಕೇಂದ್ರ ಸಚಿವ ಹರದೀಪ ಸಿಂಹ ಪುರಿ ಇವರ ಹೇಳಿಕೆ !
ನವ ದೆಹಲಿ – ನಾವೆಲ್ಲರೂ ರಾಷ್ಟ್ರಪಿತ ಮ. ಗಾಂಧಿ ಇವರ ಅನುಯಾಯಿಗಳಾಗಿದ್ದೇವೆ. ರಾಷ್ಟ್ರದ ನಿರ್ಮಾಣಕ್ಕಾಗಿ ಮತ್ತು ಉಚ್ಚ ವರ್ಗದ ಚಳುವಳಿಯಿಂದ ದೇಶದಲ್ಲಿನ ಜನರವರೆಗೆ ತಲುಪುವುದಕ್ಕಾಗಿ ಅವರ ಪಾತ್ರ ದೊಡ್ಡದಾಗಿದೆ; ಆದರೆ, ಮ ಗಾಂಧಿ ಬಹಳ ತೊಡಕಾದ ಮನುಷ್ಯನಾಗಿದ್ದರು. ಬ್ರಿಟನ್ ನಲ್ಲಿರುವಾಗ ಅವರು ಮೊದಲನೆಯ ಮಹಾಯುದ್ಧದಲ್ಲಿ ಬ್ರಿಟನ್ ಗೆ ಸಹಾಯ ಮಾಡುವುದಕ್ಕಾಗಿ ಭಾರತೀಯರನ್ನು ಕಳುಹಿಸುವ ಸಂದರ್ಭದಲ್ಲಿ ಮಾತನಾಡುತ್ತಿದ್ದರು ಎಂದು ನಾನು ಹೇಳಲು ಬಯಸುತ್ತೇನೆ, ಎಂದು ಕೇಂದ್ರ ಸಚಿವ ಹರದೀಪ ಸಿಂಹ ಪುರಿ ಇವರು ಹೇಳಿಕೆ ನೀಡಿದರು. ಪತ್ರಕರ್ತರು ಮತ್ತು ಪ್ರಸಾರ ಭಾರತಿ ಬೋರ್ಡಿನ ಸದಸ್ಯರಾದ ಅಶೋಕ್ ಟಂಡನ ಇವರ ‘ದಿ ರಿವರ್ಸ್ ಸ್ವಿಂಗ್-ಕಾಲೋನಿ ಅಲಿಜಮ್ ಟು ಕೋ ಆಪರೇಷನ್’ ಈ ಪುಸ್ತಕದ ಪ್ರಕಾಶನ ಕಾರ್ಯಕ್ರಮದ ಸಮಯದಲ್ಲಿ ಈ ಪುಸ್ತಕದಲ್ಲಿನ ‘ಮಹಾತ್ಮ ಗಾಂಧಿ ಬ್ರಿಟನ್ ಗಾಗಿ ಶಾಂತಿಯ ದೂತ’ ಈ ಪ್ರಕರಣದ ಸಂದರ್ಭ ನೀಡುತ್ತಾ ಮಾತನಾಡುತ್ತಿದ್ದರು. ಪುರಿ ಅವರು ಮಾತು ಮುಂದುವರೆಸುತ್ತಾ, ಬ್ರಿಟನ್ ನಲ್ಲಿ ಮ. ಗಾಂಧಿ ಇವರ ಪ್ರಾರಂಭದ ಜೀವನ ಮತ್ತು ಅವರ ಶಿಕ್ಷಣದಿಂದ ಅವರಿಗೆ ಇಂಗ್ಲೀಷ್ ಶೈಲಿಯಲ್ಲಿನ ನ್ಯಾಯವಾದಿ ಆಗಲು ಸಿದ್ಧಗೊಳಿಸಿದ್ದರು. ದಕ್ಷಿಣ ಆಫ್ರಿಕಾಗೆ ಹೋದ ನಂತರ ಅವರು ತಮ್ಮ ಪರಿಚಯದ ಮತ್ತು ರಾಷ್ಟ್ರೀಯ ಚಳುವಳಿಯಲ್ಲಿ ಕೊಡುಗೆ ನೀಡುವ ಗಾಂಧಿಯಾದರು.
ಬ್ರಿಟಾನ್ ಎಂದೂ ಜಾಲಿಯನ್ ವಾಲಾಬಾಗದ ಘಟನೆಯ ಬಗ್ಗೆ ಕ್ಷಮೆ ಕೇಳಲಿಲ್ಲ.
ಪುಸ್ತಕದ ಲೇಖಕ ಅಶೋಕ್ ಟಂಡನ ಇವರು, ಜಾಲಿಯನ್ ವಾಲಾಬಾಗ್ ಕುರಿತು ಬರೆದಿರುವ ಪುಸ್ತಕದಲ್ಲಿನ ಒಂದು ಪ್ರಕರಣದ ಸಂದರ್ಭ ನೀಡುತ್ತಾ ಪುರಿ ಇವರು, ಬ್ರಿಟನಿನ ರಾಣಿಯಿಂದ ಪ್ರಧಾನಮಂತ್ರಿಯವರೆಗೆ ಎಲ್ಲರೂ ಈ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದರು; ಆದರೆ ಇಲ್ಲಿಯವರೆಗೆ ಈ ಘಟನೆಯ ಬಗ್ಗೆ ಅಧಿಕೃತವಾಗಿ ಕ್ಷಮೆ ಯಾಚಿಸಿಲ್ಲ ಎಂದು ಹೇಳಿದರು.
ಸಂಪಾದಕೀಯ ನಿಲುವುಮೋಹನದಾಸ ಗಾಂಧಿ ಇವರ ಸಂಪೂರ್ಣ ಜೀವನ ಚರಿತ್ರೆಯನ್ನು ಅಧ್ಯಯನ ಮಾಡಿದರೆ, ಅವರು ಬ್ರಿಟಿಷ ಮತ್ತು ಮುಸಲ್ಮಾನರಿಗೆ ಸಮಯ ಸಮಯದಲ್ಲಿ ಸಹಾಯ ಮಾಡಿರುವುದು ಮತ್ತು ಹಿಂದುಗಳಿಗೆ ವಿಶ್ವಾಸಘಾತ ಮಾಡಿರುವುದು ತಿಳಿದು ಬರುತ್ತದೆ. |