ವೇರುಳ ಲೇಣಿ (ಛತ್ರಪತಿ ಸಂಭಾಜಿನಗರ) ಇಲ್ಲಿಯ ಛಾವಣಿ ಮೇಲಿನ ನಟರಾಜನ ಮೂರ್ತಿಯಲ್ಲಿ ಬಿರುಕು !

ಪುರಾತತ್ವ ಇಲಾಖೆಯ ನಿರ್ಲಕ್ಷ : ಅಧ್ಯಯನಕಾರರ ಅಭಿಪ್ರಾಯದ ಪ್ರಕಾರ ಇದು ಒಂದು ಗಂಭೀರ ಪ್ರಕರಣ !

ಛತ್ರಪತಿ ಸಂಭಾಜಿನಗರ – ಜಾಗತೀಕ ಪರಂಪರೆಯ ಸ್ಥಳವೆಂದು ನಮೂದಿಸಲಾಗಿರುವ ಜಿಲ್ಲೆಯಲ್ಲಿನ ವೆರುಳ ಲೇಣಿ ಇಲ್ಲಿಯ ನಂದಿ ಮಂಟಪದಲ್ಲಿನ ನೈಸರ್ಗಿಕ ಬಣ್ಣಗಳಿಂದ ಚಿತ್ರಿಸಿರುವ ಸುಂದರ ಕಸೂರಿ ಕೆಲಸ ಇರುವ ಛಾವಣಿ ಕುಸಿಯುತ್ತಿದೆ ಹಾಗೂ ರಂಗಮಂಟಪ ಕಪ್ಪಾಗಿದ್ದು ಅದರ ಛಾವಣಿ ಮೇಲೆ ಕೆತ್ತಿರುವ ನಟರಾಜನ ಮೂರ್ತಿಗೆ ಕೂಡ ಬಿರುಕು ಬಿಟ್ಟಿವೆ. ಪರಿಣಾಮ ಈ ಮೂರ್ತಿಗಳು ಕುಸಿಯುವ ಭಯ ಲೇಣಿಯ ಅಧ್ಯಯನಕಾರರಿಂದ ವ್ಯಕ್ತಪಡಿಸಲಾಗಿದೆ; ಆದರೆ ಇದರ ಕಡೆಗೆ ಭಾರತೀಯ ಪುರಾತತ್ವ ಸಮೀಕ್ಷಾ ಇಲಾಖೆ (‘ಎ.ಎಸ್.ಐ.’ಗೆ ) ಗಮನ ನೀಡಲು ಸಮಯವಿಲ್ಲ. (ಛಾವಣಿ ಮೇಲಿನ ನಟರಾಜನ ಮೂರ್ತಿ ಮತ್ತು ಕೂಸರಿ ಕೆಲಸ ಕುಸಿಯುತ್ತಿದ್ದರು ಕೂಡ ರ್ನಿರ್ಲಕ್ಷಿಸುವ ಅಸಂವೇದನಾಶೀಲ ಪುರಾತತ್ವ ಇಲಾಖೆ ! ಮೈಗಳ್ಳ ಅಧಿಕಾರಿಗಳ ವೇತನದಿಂದ ಪರಿಹಾರ ಪಡೆಯಬೇಕು ! – ಸಂಪಾದಕರು)
೧. ವೇರುಳ ಲೇಣಿ ಇಲ್ಲಿಯ ಕೈಲಾಸ ದೇವಸ್ಥಾನದಲ್ಲಿ ೧೮ ರಿಂದ ೨೦ ದೇವರ ಮೂರ್ತಿಗಳು ಕೆತ್ತಲಾಗಿವೆ. ನಂದಿ ಮಂಟಪ ಇದು ಬಹಳ ಸುಂದರ ಕೆತ್ತನೆ ಆಗಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮಂಟಪದ ಛಾವಣಿಗೆ ಮೊದಲು ಮಣ್ಣು ನಂತರ ಸುಣ್ಣದ ಲೇಪನ ಮಾಡಲಾಗಿದೆ. ಅದರ ಮೇಲೆ ನೈಸರ್ಗಿಕ ಬಣ್ಣದಿಂದ ವಿವಿಧ ಕಸೂತಿಗಳನ್ನು ಚಿತ್ರಿಸಲಾಗಿದೆ.

ಛಾವಣಿ ಮೇಲಿನ ನಟರಾಜನ ಮೂರ್ತಿಗೆ ಬಿರುಕು ಬಿಡುವುದು ಗಂಭೀರ ! – ಲೇಣಿ ಅಧ್ಯಯನಕಾರರು

ವೇರುಳ ಲೇಣಿ ಅಧ್ಯಯನಕಾರರಾದ ಯೋಗೇಶ ಜೋಶಿ ಇವರು, ”ನಂದಿ ಮಂಟಪದಲ್ಲಿನ ಕುಸರಿ ಕೆಲಸ ಮತ್ತು ರಂಗಮಂಟಪದಲ್ಲಿನ ಛಾವಣಿ ಮೇಲಿನ ನಟರಾಜನ ಮೂರ್ತಿಗೆ ಬಿರುಕು ಬಿಟ್ಟಿವೆ. ಇದು ಗಂಭೀರ ಆಗಿದೆ. ಇದು ಐತಿಹಾಸಿಕ ವಾಸ್ತು ಜೋಪಾನ ಮಾಡಬೇಕಾಗಿರುವುದು ‘ಎ.ಎಸ್’ಐ.’ ಇದನ್ನು ತಕ್ಷಣ ಗಮನಹರಿಸಿ ಜೋಪಾನ ಮಾಡುವುದು ಮತ್ತು ಸಂವರ್ಧನೆ ಕಾರ್ಯ ಮಾಡಬೇಕೆಂದು ಹೇಳಿದರು.

ಸಂಪಾದಕೀಯ ನಿಲುವು

ಹಿಂದುಗಳ ಧಾರ್ಮಿಕ ಸ್ಥಳಗಳ ಸಂವರ್ಧನೆಗಾಗಿ ಏನನ್ನೂ ಮಾಡದಿರುವ ಪುರಾತತ್ವ ಇಲಾಖೆಯ ವಿಸರ್ಜಿಸಿ !