ಮೈದಾನದಲ್ಲಿ ನಮಾಜ ಮಾಡಿದ ಪಾಕಿಸ್ತಾನಿ ಕ್ರಿಕೆಟಿಗ ರಿಜವಾನ ವಿರುದ್ಧ ದೂರು

ನವ ದೆಹಲಿ – ಅಕ್ಟೋಬರ್ 6 ರಂದು ನಡೆದ ನೆದರ್ಲ್ಯಾಂಡ್ಸ್ ವಿರುದ್ಧದ ವಿಶ್ವಕಪ್ ಕ್ರಿಕೆಟ ಪಂದ್ಯದ ಸಮಯದಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಮೊಹಮ್ಮದ್ ರಿಜವಾನ್ ಮೈದಾನದಲ್ಲಿ ನಮಾಜ ಮಾಡಿದ್ದರಿಂದ ಅವರ ವಿರುದ್ಧ ದೂರು ದಾಖಲಾಗಿದೆ. ನ್ಯಾಯವಾದಿ ವಿನೀತ ಜಿಂದಾಲ ಅವರು ರಿಜವಾನ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. ಈ ದೂರಿನ ಪ್ರತಿಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ನೈತಿಕ ಸಮಿತಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೂ ಕಳುಹಿಸಲಾಗಿದೆ. ಕಳೆದ ವರ್ಷ ಭಾರತ ವಿರುದ್ಧದ ಟ್ವೆಂಟಿ-20 ಕ್ರಿಕೆಟ್ ಪಂದ್ಯದ ವೇಳೆಯೂ ರಿಜವಾನ ಮೈದಾನದಲ್ಲಿ ನಮಾಜ ಮಾಡಿದ್ದರು.

ಸಂಪಾದಕೀಯ ನಿಲುವು

‘ಕ್ರಿಕೆಟ್ ಮೈದಾನವು ಆಟಕ್ಕಾಗಿ ಇದೆ, ಪ್ರಾರ್ಥನೆಗಾಗಿ ಅಲ್ಲ’ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಎಲ್ಲಾ ಆಟಗಾರರಿಗೆ ಏಕೆ ಹೇಳುವುದಿಲ್ಲ ? ಮತ್ತು ಈ ಬಗ್ಗೆ ಏಕೆ ಶಿಕ್ಷೆಯನ್ನು ನೀಡುವುದಿಲ್ಲ ?