ಶ್ರೀ ದುರ್ಗಾಮಾತಾ ದೌಡ ಮಾರ್ಗದಲ್ಲಿ ಮತಾಂಧ ಟಿಪ್ಪು ಸುಲ್ತಾನನ ವೈಭವಿಕರಿಸಿದ್ದರಿಂದ ಹಿಂದುತ್ವನಿಷ್ಠರಲ್ಲಿ ಆಕ್ರೋಶ

ಕೊಲ್ಲಾಪುರ – ಎರಡು ದಿನಗಳ ಹಿಂದೆ, ಮತಾಂಧ ಟಿಪ್ಪು ಸುಲ್ತಾನನ ‘ಸ್ಟೇಟಸ್’ (‘ಸ್ಟೇಟಸ’ ಎಂದರೆ ಇತರರು ನೋಡುವಂತೆ ಒಬ್ಬರ ಸ್ವಂತ ಮೊಬೈಲ್ ಫೋನ್‌ ಮೇಲೆ ಇರಿಸಲಾದ ಚಿತ್ರ ಅಥವಾ ಬರಹ) ಇಟ್ಟಿರುವ  ಪ್ರಕರಣ ಇನ್ನೂ ಹಸಿಯಾಗಿರುವಾಗಲೇ, ಅಕ್ಟೋಬರ್ 16 ರಂದು ಮುಂಜಾನೆ ಶ್ರೀ ಶಿವಪ್ರತಿಷ್ಠಾನದ ಶ್ರೀ ದುರ್ಗಾಮಾತೆಯ ದೌಡ ಮಾರ್ಗದಲ್ಲಿ ಟಿಪ್ಪು ಸುಲ್ತಾನನ ವೈಭವೀಕರಣಗೊಳಿಸಿರುವ ಪ್ರಕರಣ ಬಹಿರಂಗವಾಗಿದೆ. ಕಸಬಾ ಬಾವಡಾ ಪ್ರದೇಶದ ರಸ್ತೆಯಲ್ಲಿ ‘ಭಾರತ ಕಾ ಬಾದಶಾ ಟಿಪ್ಪು ಸುಲ್ತಾನ’, ಎಂದು ಬರೆದಿರುವುದು ಕಂಡುಬಂದಿದೆ. ಇದರಿಂದಾಗಿ ಕೆಲಕಾಲ ಉದ್ವಿಗ್ನ, ಹಿಂದುತ್ವನಿಷ್ಠರು ಆಕ್ರಮಣಕಾರಿ ನಿಲುವು ತಳೆದು ಇದನ್ನು ಬರೆದವರ ವಿರುದ್ಧ ಕ್ರಮಕೈಕೊಳ್ಳುವಂತೆ ಆಗ್ರಹಿಸಿದರು. (ಎರಡು ದಿನಗಳ ಹಿಂದೆ ನಡೆದ ಇಂತಹ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದ ನಂತರವೂ ಮತಾಂಧ ಟಿಪ್ಪು ಸುಲ್ತಾನನನ್ನು ಮತ್ತೆ ವೈಭವೀಕರಿಸಲಾಗಿದೆ, ಇದರರ್ಥ ಮತಾಂಧರಿಗೆ ಯಾವುದೇ ರೀತಿಯ ಭಯವಿಲ್ಲ ಮತ್ತು ಕಾನೂನಿನ ಭಯ ಉಳಿದಿಲ್ಲ ಎನ್ನುವುದು ಸಿದ್ಧವಾಗುತ್ತದೆ ! ಈಗ ಮತ್ತೆ ಇಂತಹ ಘಟನೆ ಆಗಬಾರದೆಂದು ಪೊಲೀಸರಿಂದ ಕಠಿಣ ಕ್ರಮವನ್ನು ನಿರೀಕ್ಷಿಸಲಾಗಿದೆ ! – ಸಂಪಾದಕರು)

ಪೊಲೀಸರು ಸ್ಥಳಕ್ಕೆ ಬಂದು ಬರೆದಿರುವುದನ್ನು ಅಳಿಸಿದರು. ತದ ನಂತರ ಹಿಂದುತ್ವನಿಷ್ಠರು ‘ಇನ್ನೊಮ್ಮೆ ಇಂತಹ ಘಟನೆ ನಡೆದರೆ ಹಿಂದೂಗಳ ಭಾವನೆಗಳು ಉದ್ರೇಕಗೊಳ್ಳುವುದು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದಲ್ಲಿ ಶ್ರೀ ಶಿವಪ್ರತಿಷ್ಠಾನ ಹಿಂದೂಸ್ಥಾನದ ಶ್ರೀ. ಸಂಜಯ ಜಾಸೂದ್ ಇವರು ಶಾಹುಪುರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂಗಳ ಮೇಲೆ ಅನಂತ ದೌರ್ಜನ್ಯ ಎಸಗಿದ ಕ್ರೂರಕರ್ಮಿ ಟಿಪ್ಪು ಸುಲ್ತಾನನನ್ನು ತಲೆಯ ಮೇಲೆ ಎತ್ತಿ ಹಿಡಿಯುವವರು ಭಾರತದ ಭದ್ರತೆಗೆ ಅಪಾಯಕಾರಿ !