ಮನೆ ಬಿಟ್ಟು ಹೊರಡಿ, ಇಲ್ಲವಾದರೆ ದೊಡ್ಡ ಬೆಲೆ ತೆತ್ತಬೇಕಾಗಬಹುದು !

ಕಾಶ್ಮೀರದಲ್ಲಿನ ಪೂಂಛ ಇಲ್ಲಿಯ ಹಿಂದೂ ಮತ್ತು ಸಿಖ್ ಇವರಿಗೆ ಜಿಹಾದಿ ಮುಸಲ್ಮಾನರಿಂದ ಬೆದರಿಕೆ !

ಪೂಂಛ (ಜಮ್ಮು-ಕಾಶ್ಮೀರ) – ಪಾಕಿಸ್ತಾನದ ಗಡಿಗೆ ಅಂಟಿಕೊಂಡಿರುವ ಪೂಂಛ ಜಿಲ್ಲೆಯಲ್ಲಿನ ದೇಗವಾರ ಸೆಕ್ಟರನಲ್ಲಿ ಅಕ್ಟೋಬರ್ ೧೪ ರಂದು ಸಂಜೆ ಮತಾಂಧ ಮುಸಲ್ಮಾನರು ಹಿಂದೂಗಳ ಮನೆಯ ಮೇಲೆ ಬಿತ್ತಿ ಪತ್ರಕಗಳನ್ನು ಅಂಟಿಸಿದ್ದಾರೆ. ಈ ಬಗ್ಗೆ ಉರ್ದುನಲ್ಲಿ ‘ಎಲ್ಲಾ ಹಿಂದೂ ಮತ್ತು ಸರದಾರ (ಸಿಖ್) ಸಮಾಜದವರಿಗೆ ಆದಷ್ಟು ಬೇಗನೆ ಈ ಪ್ರದೇಶವನ್ನು ಬಿಟ್ಟುಹೋಗುವಂತೆ ಎಚ್ಚರಿಕೆ ನೀಡಿದೆ, ಇಲ್ಲವಾದರೆ ನೀವು ಇದರ ದೊಡ್ಡ ಬೆಲೆ ತೆತ್ತಬೇಕಾಗಬಹುದು, ಎಂದು ಬೆದರಿಕೆ ನೀಡಲಾಗಿದೆ. ಈ ಘಟನೆಯ ಮಾಹಿತಿ ದೊರೆಯುತ್ತಲೆ ಪೂಂಛ ಪೊಲೀಸ ಠಾಣೆಯ ಅಧಿಕಾರಿ ದೀಪಕ್ ಪಠಾನೀಯ ರಕ್ಷಣಾ ದಳದ ತಂಡದ ಜೊತೆಗೆ ಘಟನಾಸ್ಥಳಕ್ಕೆ ತಲುಪಿದರು. ಅವರು ಸರಪಂಚರ ಉಪಸ್ಥಿತಿಯಲ್ಲಿ ಬಿತ್ತಿಪತ್ರಕಗಳನ್ನು ವಶಪಡಿಸಿಕೊಂಡಿದ್ದಾರೆ. ನ್ಯಾಯವಾದಿ ಮಹೀಂದರ ಪ್ರಿಯಾಸ ಇವರ ಮನೆ ಆಗಿರುವ ‘ಗೀತಾ’ ಭವನದ ಮುಖ್ಯ ಪ್ರವೇಶ ದ್ವಾರದಲ್ಲಿ ಹಾಗೂ ಇತರ ಎರಡು ಬಿತ್ತಿಪತ್ರಕಗಳು ಸುಜನ ಸಿಂಹ ಇವರ ಮನೆಯ ಹೊರಗಿನಿಂದ ವಶಪಡಿಸಿಕೊಳ್ಳಲಾಗಿದೆ. ಇದರ ಬಗ್ಗೆ ಹಿಂದುಗಳು ಪೊಲೀಸರಿಗೆ ಮತ್ತು ಭಾರತೀಯ ಸೈನ್ಯದ ಬಳಿ ಸಂಬಂಧಿತರ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

೧೯೯೦ ರಲ್ಲಿ ಕೂಡ ಇದೇ ರೀತಿ ಹಿಂದುಗಳ ಮನೆಯ ಮೇಲೆ ಬಿತ್ತಿ ಪತ್ರಕಗಳನ್ನು ಅಂಟಿಸಿದ್ದರು ಹಾಗೂ ಮಸೀದಿ ಮೇಲಿನ ಬೋಂಗಾದಿಂದ ಹಿಂದುಗಳಿಗೆ ಅವರ ಮಹಿಳೆಯರನ್ನು ಮತ್ತು ಆಸ್ತಿಯನ್ನು ಬಿಟ್ಟು ಹೋಗುವ ಬೆದರಿಕೆ ನೀಡಲಾಗಿತ್ತು. ಅದರ ನಂತರ ಜಿಹಾದಿಗಳಿಂದ ಹಿಂದೂಗಳ ಮೇಲಿನ ದಾಳಿ ಮಾಡಿ ಕೊಲ್ಲಲಾಗಿತ್ತು. ಇದರಿಂದ ಲಕ್ಷಾಂತರ ಹಿಂದುಗಳು ಕಾಶ್ಮೀರದಿಂದ ಪಲಾಯನ ಮಾಡಿದ್ದರು. ಅವರು ಇಂದಿಗೂ ಕಾಶ್ಮೀರಕ್ಕೆ ಹಿಂತಿರುಗಲು ಸಾಧ್ಯವಾಗಲಿಲ್ಲ.

ಸಂಪಾದಕೀಯ ನಿಲುವು

೩೩ ವರ್ಷಗಳ ನಂತರ ಕೂಡ ಕಾಶ್ಮೀರದಲ್ಲಿ ಈ ಪರಿಸ್ಥಿತಿ ಖಾಯಂ ಆಗಿರುವುದು, ಇದು ಭಾರತೀಯರಿಗೆ ಲಚ್ಚಾಸ್ಪದ !

ಇಸ್ರೆಲ್ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಭಾರತದಲ್ಲಿ ಇಲ್ಲಿಯವರೆಗೆ ಮಾಡಿದ್ದರೆ, ಇಷ್ಟೊತ್ತಿಗೆ ಭಾರತ ಭಯೋತ್ಪಾದನೆಯಿಂದ ಮುಕ್ತಗೊಳ್ಳುತ್ತಿತ್ತು ಮತ್ತು ಕಾಶ್ಮೀರದಲ್ಲಿ ಹಿಂದುಗಳು ಧೈರ್ಯವಾಗಿ ವಾಸಿಸಬಹುದಾಗಿತ್ತು.