ಲಡಾಖ್‌ನ ಕಾಂಗ್ರೆಸ್ ಕಾರ್ಯಾಧ್ಯಕ್ಷ ಅಸಗರ ಅಲಿ ಕರಬಲೈ ಇವರ ಮಾನವೀಯ ವಿರೋಧಿ ಹೇಳಿಕೆ !

ಲಡಾಖ್ – ಇಸ್ರೇಲ್ ಮೇಲೆ ದಾಳಿ ನಡೆಸಿದ ಜಿಹಾದಿ ಭಯೋತ್ಪಾದಕ ಸಂಘಟನೆ ಹಮಾಸ್ ಅನ್ನು ಕಾಂಗ್ರೆಸ್ ಕಾರ್ಯಾಧ್ಯಕ್ಷ ಅಸಗರ ಅಲಿ ಕರಬಲೈ ಬೆಂಬಲಿಸಿದ್ದಾರೆ. ‘ಕಾರ್ಗಿಲ್ ಜನರು ಹಮಾಸ್ ಜೊತೆ ನಿಂತಿದ್ದಾರೆ, ಹಮಾಸ್‌ನ ಸೈನಿಕರೊಂದಿಗೆ ನಿಲ್ಲಲು ನಾವು ಹೆಮ್ಮೆಪಡುತ್ತೇವೆ ಎಂದು ಅವರು ಹೇಳಿದರು. ಅಕ್ಟೋಬರ್ 13 ರಂದು ಇಲ್ಲಿ ಹಮಾಸ್ಅನ್ನು ಬೆಂಬಲಿಸಿ ಮೆರವಣಿಗೆ ನಡೆಯಿತು. ಆಗ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಅದರಲ್ಲಿ ಭಾಗವಹಿಸಿದ್ದ ಮುಸ್ಲಿಮರ ಕೈಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಮೊಹಮ್ಮದ್ ಅಲಿ ಖುಮೇನೈ ಅವರ ಫೋಟೋ ಇತ್ತು. (ಇರಾನ್ ನಾಯಕ ಮತ್ತು ಕಾಂಗ್ರೆಸ್ ನಡುವಿನ ಸಂಬಂಧವೇನು ? ಅದರ ಬಗ್ಗೆ ಕಾಂಗ್ರೆಸ್ ಹೇಳುತ್ತದೆಯೇ ? ಅಂತಹ ಮನಸ್ಥಿತಿಯ ಕಾಂಗ್ರೆಸ್ಸಿಗರು ಭಾರತವನ್ನು ಎಂದಿಗೂ ಪ್ರೀತಿಸುತ್ತಾರೆಯೇ ? – ಸಂಪಾದಕರು) ಪ್ಯಾಲೆಸ್ಟೈನ್ ಅನ್ನು ಬೆಂಬಲಿಸುವ ನಿರ್ಣಯವನ್ನು ಕಾಂಗ್ರೆಸ್ಸಿನ ರಾಷ್ಟ್ರೀಯ ಕಾರ್ಯಕಾರಿಣಿ ಈಗಾಗಲೇ ಅಂಗೀಕರಿಸಿದೆ.

ಅಸಗರ ಅಲಿ ಕರಬಲೈ ಅವರು ಮಾತನಾಡುತ್ತಾ, ಪ್ಯಾಲೆಸ್ಟೈನ್ ಮೇಲೆ ಬಾಂಬ್ ದಾಳಿ ಮಾಡುವುದರಿಂದ ಹಮಾಸ್ ಮತ್ತು ಅದರ ಸೈನಿಕರು ತಲೆಬಾಗುವರು ಎಂದು ಇಸ್ರೇಲ್ ಗೆ ಅನಿಸಬಹುದು; ಆದರೆ ಅದು ತಪ್ಪು. ಈ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ತಂದೆ-ತಾಯಿ, ಸಹೋದರರು, ಇತ್ಯಾದಿ ನಿಂತು ಇಸ್ರೇಲ್ ಅನ್ನು ಕೊನೆಗಾಣಿಸುವಂತೆ ಸಂದೇಶ ನೀಡಲಿದ್ದಾರೆ ಎಂದರು.
ಸಂಪಾದಕೀಯ ನಿಲುವುಹಮಾಸ್ ಅನೇಕ ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಕೊಂದರು, 40 ಚಿಕ್ಕ ಮಕ್ಕಳ ಕತ್ತು ಸೀಳಿದರು, ಗರ್ಭಿಣಿಯರ ಹೊಟ್ಟೆಯನ್ನು ಹರಿದು, ಶಿಶುಗಳನ್ನು ಹೊರತೆಗೆದು ಇಬ್ಬರನ್ನೂ ಕೊಂದರು. ಅಂತಹ ರಾಕ್ಷಸರನ್ನೂ ನಾಚಿಸುವಂತಹ ಕೃತ್ಯಗಳನ್ನು ಮಾಡುವವ ಬಗ್ಗೆ ಹೆಮ್ಮೆ ಪಡುವ ಕಾಂಗ್ರೆಸ್ಸಿನ ನಾಯಕರ ಮಾನಸಿಕತೆ ಏನಿದೆ?, ಎಂಬುದು ಗಮನಕ್ಕೆ ಬರುತ್ತದೆ ! ಇಂತಹ ಕಾಂಗ್ರೆಸ್ ಮೇಲೆ ನಿಷೇಧ ಹೇರಬೇಕು ! |
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!