ಗ್ರಂಥಾಲಯ ಪ್ರವೇಶಿಸುವ ಮೊದಲು ಪುಸ್ತಕದ ಬದಲು ಸರಾಯಿಯ ದುರ್ವಾಸನೆ
ಹುಬ್ಬಳ್ಳಿ : ಜ್ಞಾನದಾಹಿಗಳಿಗೆ,ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆಂದು ಸರಕಾರ ಗ್ರಂಥಾಲಯವನ್ನು ಸ್ಥಾಪಿಸುತ್ತದೆ. ಆದರೆ ಹುಬ್ಬಳ್ಳಿಯ ವಿನೋಬಾ ನಗರದ ಕೇಂದ್ರ ಗ್ರಂಥಾಲಯದ ಚಿತ್ರಣವೇ ಬೇರೆಯಾಗಿದೆ. ಈ ಗ್ರಂಥಾಲಯದ ಒಳಗೆ ಕಾಲಿಟ್ಟರೆ ನಮಗೆ ಗ್ರಂಥದ ಸ್ವಾಗತ ಸಿಗುವುದರ ಬದಲು ಬಿಯರ್ ಬಾಟಲಿಗಳಿಂದ ಸ್ವಾಗತ ಸಿಗುತ್ತದೆ. ಇಲ್ಲಿ ಜನರು ಓದೋದಕ್ಕೆ ಬರದೇ ಕುಡುಕರ ಅಡ್ಡೆಯಾಗಿ ಪರಿವರ್ತಿಸಿದ್ದಾರೆ.
(ಸೌಜನ್ಯ – PowerTV)
ಗ್ರಂಥಾಲಯವನ್ನು ಹೊರಗಡೆಯಿಂದ ನೋಡಿದರೆ ಕೊಂಪೆಯಂತಾಗಿದೆ, ಇದರ ವ್ಯವಸ್ಥಾಪನೆಯನ್ನು ಸಹ ಸರಿಯಾಗಿ ಮಾಡುತ್ತಿಲ್ಲ, ಗ್ರಂಥಾಲಯದ ಒಳಗೆ ಹೋದರೆ ಗ್ರಂಥ, ಪತ್ರಿಕೆಗಳ ದರ್ಶನವಾಗುವುದರ ಬದಲು ರಾಶಿ ರಾಶಿ ಬಿಯರ್ ಬಾಟಲಿಗಳ ದರ್ಶನವಾಗುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ. ಈ ಗ್ರಂಥಾಲಯದ ಅವ್ಯವಸ್ಥೆಯ ವಿಡಿಯೋಗಳು ಈಗ ಸಾಮಾಜಿಕ ಜಾಲದಲ್ಲಿ ಹರಿದಾಡುತ್ತ ಇದೆ. ಗ್ರಂಥಾಲಯದ ವ್ಯವಸ್ಥಾಪಕರು ಇದ್ದು ಇಲ್ಲದಂತಾಗಿದ್ದು ಇದು ಅಧಿಕಾರಿಗಳ ದುರಾಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ. ಸಾರ್ವಜನಿಕರು, ಸ್ಥಳೀಯರು ಮೇಲಾಧಿಕಾರಿಗಳಿಗೆ ದೂರನ್ನು ನೀಡಿದರು ಸಹ ಏನೂ ಪ್ರಯೋಜನವಾಗಿಲ್ಲ.