ಪ್ರಯಾಗರಾಜ (ಉತ್ತರಪ್ರದೇಶ) – ಮಥೂರಾದಲ್ಲಿನ ಶಾಹಿ ಈದ್ಗಾದಲ್ಲಿರುವ ಮಸೀದಿಯ ಸ್ಥಳದಲ್ಲಿನ ಶ್ರೀಕೃಷ್ಣ ಜನ್ಮಭೂಮಿಗೆ ಮಾನ್ಯತೆ ನೀಡಲು ಆಗ್ರಹಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪ್ರಯಾಗರಾಜ ಉಚ್ಚ ನ್ಯಾಯಾಲಯವು ತಿರಸ್ಕರಿಸಿದೆ. ಮಹಕ ಮಹೇಶ್ವರಿ ಇವರು ೨೦೨೦ ರಲ್ಲಿ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಈ ಪರಿಸರದಲ್ಲಿನ ಹಿಂದೂಗಳಿಗೆ ಪೂಜೆ ಮಾಡಲು ಅನುಮತಿ ನೀಡಬೇಕೆಂದು ಆಗ್ರಹಿಸಲಾಗಿತ್ತು.
ಈ ಅರ್ಜಿಯಲ್ಲಿ, ಈ ಪರಿಸರದಲ್ಲಿ ಹಿಂದೆ ದೇವಸ್ಥಾನವಿತ್ತು ಮತ್ತು ಅದನ್ನು ಧ್ವಂಸಗೊಳಿಸಿ ಅಲ್ಲಿ ಶಾಹಿ ಈದ್ಗಾ ಮಸೀದಿ ಕಟ್ಟಲಾಗಿದೆ. ದ್ವಾಪಾರ ಯುಗದಲ್ಲಿ ಇಲ್ಲಿ ಕಂಸ ರಾಜನ ಕಾರಾಗೃಹವಿತ್ತು. ಇಲ್ಲಿಯೇ ಭಗವಂತ ಶ್ರೀಕೃಷ್ಣನ ತಂದೆ ತಾಯಿಯನ್ನು ಬಂಧಿಸಿ ಇರಿಸಲಾಗಿತ್ತು ಮತ್ತು ಇಲ್ಲಿಯೇ ಭಗವಂತ ಶ್ರೀ ಕೃಷ್ಣನ ಜನನವಾಗಿತ್ತು ಎಂದು ಹೇಳಲಾಗಿದೆ.