ಅಧ್ಯಾತ್ಮದ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ !

ಸ್ವಭಾವದೋಷಗಳ ನಿರ್ಮೂಲನೆ ಮಾಡದೆ ಯಾರೂ ಯಾವುದೇ ಮಾರ್ಗದಲ್ಲಿ ಸಾಧನೆ ಮಾಡುವುದು ಕಠಿಣವಾಗುತ್ತದೆ. ಸ್ವಭಾವದೋಷ ಕಡಿಮೆ ಮಾಡಿಕೊಂಡವರು ಯಾವುದೇ ಮಾರ್ಗದಿಂದ ಬೇಕಾದರೂ ಸಾಧನೆ ಮಾಡಬಹುದು. ಸಮಷ್ಟಿ ಸಾಧನೆ ಮಾಡಿದರೆ ಅವರ ಶೀಘ್ರ ಪ್ರಗತಿಯೂ ಆಗುತ್ತದೆ.

ಧಾರ್ಮಿಕ ಗ್ರಂಥಗಳನ್ನು ಕೇವಲ ಓದದೆ ಅಥವಾ ಪಠಿಸದೆ ಅವುಗಳಲ್ಲಿ ಬೋಧಿಸಲಾದ ಸಾಧನೆಯನ್ನು ಆಚರಣೆಯಲ್ಲಿ ತನ್ನಿರಿ !

‘ಹಿಂದಿನ ಯುಗಗಳಲ್ಲಿ ಪ್ರಜೆಗಳು ಸಾತ್ತ್ವಿಕವಾಗಿದ್ದರಿಂದ ಋಷಿಗಳಿಗೆ ಸಮಷ್ಟಿ ಪ್ರಸಾರಕಾರ್ಯ ಮಾಡಬೇಕಾಗುತ್ತಿರಲಿಲ್ಲ. ಈಗ ಕಲಿಯುಗದಲ್ಲಿ ಹೆಚ್ಚಿನವರು ಸಾಧನೆ ಮಾಡದ ಕಾರಣ ಸಂತರಿಗೆ ಸಮಷ್ಟಿ ಪ್ರಸಾರ ಕಾರ್ಯ ಮಾಡಬೇಕಾಗುತ್ತದೆ !’ – ಪರಾತ್ಪರ ಗುರು ಡಾ. ಆಠವಲೆ

ಸಮಾಜದ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ !

ಈಗ ಒಂದು ಚಿಕ್ಕ ಮಗುವು ತನ್ನ ಪೂರ್ವಜನ್ಮದ ಸಾಧನೆಯ ಸಂಸ್ಕಾರದಿಂದ ಈ ಜನ್ಮದಲ್ಲಿ ಸಾಧನೆ ಎಂದು ಸೇವೆಯನ್ನು ಮಾಡತೊಡಗಿದರೆ, ಅವನ ಪ್ರಶಂಸೆಯಾಗುವುದಿಲ್ಲ, ತದ್ವಿರುದ್ಧವಾಗಿ, ಅವನನ್ನು ಟೀಕಿಸಲಾಗುತ್ತದೆ ಮತ್ತು ಸಾತ್ತ್ವಿಕ ಜೀವವು ಸಹ ಸಾಧನೆಯನ್ನು ಮಾಡದಿರುವುದರಿಂದ ರಜ-ತಮ ಪ್ರಧಾನವಾಗುತ್ತದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ತನು-ಮನ-ಧನಗಳ ತ್ಯಾಗ ಮಾಡುವುದಿರುತ್ತದೆ ಅದುದರಿಂದ ಆಯುಷ್ಯವನ್ನು ಹಣ ಸಂಪಾದನೆಯಲ್ಲಿ ಕಳೆಯುವುದಕ್ಕಿಂತ ಸೇವೆಯನ್ನು ಮಾಡಿ ಹಣದೊಂದಿಗೆ ತನು ಹಾಗೂ ಮನಗಳ ತ್ಯಾಗ ಮಾಡಿದರೆ ಈಶ್ವರಪ್ರಾಪ್ತಿ ಬೇಗನೆ ಆಗುತ್ತದೆ’.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಹಿಂದೂ ರಾಷ್ಟ್ರದಲ್ಲಿ ಎಲ್ಲ ಕಾನೂನುಗಳು ಧರ್ಮಾಧಿಷ್ಠಿತವಾಗಿರುವುವು. ಆದುದರಿಂದ ಅದರಲ್ಲಿ ಬದಲಾವಣೆಯನ್ನು ಮಾಡಬೇಕಾಗುವುದಿಲ್ಲ ಮತ್ತು ಅದರ ಪಾಲನೆಯಿಂದ ಅಪರಾಧವಾಗದೇ ಸಾಧನೆಯೇ ಆಗುವುದು.

ಸಾಧನೆಯ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ !

ಆಧ್ಯಾತ್ಮಿಕ ಕ್ಷಮತೆ ಇಲ್ಲದ ಕಾರಣ ಸಂತರ ‘ಸಂತತ್ವ’ವನ್ನು ಗುರುತಿಸಲು ಸಾಧ್ಯವಿಲ್ಲವೋ, ಅವರು ಸಂತರಿಗೆ ‘ಅವರು ಸಂತರಲ್ಲ’ ಎನ್ನುವುದು ಎಂದರೆ, ವೈದ್ಯಕೀಯ ಶಿಕ್ಷಣ ಇಲ್ಲದವರು ವೈದ್ಯರಿಗೆ ‘ಅವರು ವೈದ್ಯರಲ್ಲ’ ಎಂದು ಹೇಳುವಂತೆ ಹಾಸ್ಯಾಸ್ಪದವಾಗಿದೆ.

ಸಮಷ್ಟಿಗಾಗಿ ನಾಮಜಪ ಇತ್ಯಾದಿ ಉಪಾಯಗಳನ್ನು ಮಾಡುವ ಸಂತರು ಮತ್ತು ಸಾಧಕರಿಗೆ ವಿನಂತಿ !

ಉಪಾಯ ಮಾಡುವವರು, ಸಮಷ್ಟಿಗಾಗಿ ನಾಮಜಪವನ್ನು ಮಾಡುವ, ಸಾಧಕರಿಗೆ ಉಪಾಯವನ್ನು ಮಾಡುವಂತಹ ಸೇವೆಯನ್ನು ಮಾಡದೇ, ತಮಗಾಗಿ ಇರುವ ನಾಮಜಪ ಮುಂತಾದ ಉಪಾಯವನ್ನು ಪೂರ್ಣಗೊಳಿಸಲು ಪ್ರಾಧಾನ್ಯತೆ ನೀಡಬೇಕು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಹಿಂದೂಗಳೇ, ನಿಮ್ಮ ಒಗ್ಗಟ್ಟಿನ ಬಲವನ್ನು ತಿಳಿಯಿರಿ !ಕೇವಲ ಅಧಿಕಾರದ ಬದಲಾವಣೆಗಾಗಿ ಮಾತ್ರವಲ್ಲ, ‘ಅಹೋರಾತ್ರಿ ಒಗ್ಗಟ್ಟಾಗಿರುವುದು ಕಾಲದ ಆವಶ್ಯಕತೆಯಾಗಿದೆ’, ಎಂಬುದರ ಬೋಧನೆಯನ್ನು ಪಡೆಯಿರಿ !

ಸಮಾಜಕ್ಕಾಗಿ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ !

ಮುಂಬರುವ ಆಪತ್ಕಾಲದಲ್ಲಿ ಡಾಕ್ಟರರು, ವೈದ್ಯರು ಮತ್ತು ಔಷಧಿ ಇತ್ಯಾದಿಗಳು ದೊರಕುವುದು ಕಠಿಣವಿದೆ. ಅಂತಹ ಸಮಯದಲ್ಲಿ ರೋಗಿಗೆ ಆರಾಮ ಸಿಗಲು ಬಿಂದುಒತ್ತಡ, ಮಾಲೀಶ ಇವುಗಳಂತಹ ಚಿಕಿತ್ಸಾಪದ್ಧತಿಗಳು ಉಪಯುಕ್ತವಾಗಲಿವೆ. ಈ ಪರಿಸ್ಥಿತಿ ಯಾರಿಗೂ ಎದುರಾಗಬಹುದು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಕೆಲವು ಜನರು ಏನಾದರೂ ಸ್ವಲ್ಪ ದಾನ ಮಾಡಿದ ನಂತರ ತುಂಬಾ ಚರ್ಚೆ ಮಾಡುತ್ತಾರೆ. ನಿಜವಾಗಿ ಈಶ್ವರನಿಗೆ ಸರ್ವಸ್ವವನ್ನು, ಅಂದರೆ ತನು, ಮನ ಮತ್ತು ಧನ ಇವುಗಳನ್ನು ದಾನ ಮಾಡುವುದು ಅಪೇಕ್ಷಿತ ಇರುತ್ತದೆ; ಆದರೆ ಇದನ್ನು ಮಾತ್ರ ಯಾರೂ ಕೊಡುವುದಿಲ್ಲ, ನಿಜವಾದ ಸಾಧಕರು ಮಾತ್ರ ಕೊಡುತ್ತಾರೆ’.